An unconventional News Portal.

    ...
    modi-man-ki-baat
    ಸುದ್ದಿ ಸಾರ

    ಈ ಬಾರಿ ಗ್ರಾಮಸ್ಥರಿಗಾಗಿ ಮೋದಿ ‘ಮನ್ ಕಿ ಬಾತ್’!

    ಕೇಂದ್ರ ಸರಕಾರ ಕೃಷಿ ಯೋಜನೆಗಳನ್ನು ರೂಪಿಸಲು ಗ್ರಾಮಪಂಚಾಯ್ತಿ ಸದಸ್ಯರಿಂದ ಸಲಹೆ ಪಡೆಯಲು ನಿರ್ಧರಿಸಿದೆ. ಹೀಗಾಗಿ ಏಪ್ರಿಲ್ 24 ರಂದು ಪ್ರಧಾನಿ ನರೇಂದ್ರ ಮೋದಿ, ದೂರದರ್ಶನದ ಮೂಲಕ ದೇಶದ 2 ಲಕ್ಷಕ್ಕೂ ಹೆಚ್ಚಿರುವ ಗ್ರಾಮ ಪಂಚಾಯತ್‍ ಸದಸ್ಯರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. “ಕೃಷಿ ಕ್ಷೇತ್ರದ ಸುಧಾರಣೆಗೆ ಗ್ರಾಮಸ್ಥರು ಸೂಕ್ತವಾದ ಸಲಹೆ ನೀಡಲು ಇದು ಉತ್ತಮ ವೇದಿಕೆಯಾಗಲಿದೆ,” ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಬಿರೇಂಧರ್ ಸಿಂಗ್ ಹೇಳಿದ್ದಾರೆ. ‘ಗ್ರಾಮಗಳ ಉದಯದಿಂದ ಭಾರತದ ಉದಯ’ ಎಂಬ ಕಾರ್ಯಕ್ರಮವನ್ನು ಏಪ್ರಿಲ್ 14 ರಿಂದ 24..

    April 13, 2016
    ...
    bsy-bjp-karmataka
    ರಾಜ್ಯ

    ಹೋದ್ಯಾ ಪಿಶಾಚಿ ಅಂದ್ರೆ, ಗವಾಕ್ಷಿಲಿ ಬಂತು ಡಿ- ನೋಟಿಫಿಕೇಶನ್!

    ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತಂದು ಮುಖ್ಯಮಂತ್ರಿಯಾಗುವ ಕನಸಿನೊಂದಿಗೆ ಅಖಾಡಕ್ಕಿಳಿದ ಬಿ. ಎಸ್. ಯಡಿಯೂರಪ್ಪ ಅವರಿಗೆ ಕಾನೂನಿನ ತೊಡಕುಗಳು ಸುಲಭಕ್ಕೆ ಬಗೆಹರಿಯುವ ಸಾಧ್ಯತೆಗಳು ಕಾಣಿಸುತ್ತಿಲ್ಲ. ಬುಧವಾರ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲೇ ಯಡಿಯೂರಪ್ಪ ವಿರುದ್ಧದ ಪ್ರಕರಣಗಳಲ್ಲಿ ಮೇಲ್ಮನವಿ ಸಲ್ಲಿಸಲು ರಾಜ್ಯ ಸರಕಾರ ತೀರ್ಮಾನ ತೆಗೆದುಕೊಂಡಿದೆ. ಯಡಿಯೂರಪ್ಪ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯಿದೆ ಹಾಗೂ ಐಪಿಸಿ ಸೆಕ್ಷನ್ ಅಡಿಯಲ್ಲಿ ದಾಖಲಾಗಿದ್ದ 15 ಡಿನೋಟಿಫಿಕೇಶನ್ ಪ್ರಕರಣಗಳನ್ನ ಹೈಕೋರ್ಟ್ ರದ್ದುಗೊಳಿಸಿತು. ಇದೂ ಕೂಡ ಅವರನ್ನು ಬಿಜೆಪಿ ಹೈಕಮಾಂಡ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪರಿಗಣಿಸುವ ಸಮಯದಲ್ಲಿ ಮಹತ್ವದ ಪಾತ್ರ ವಹಿಸಿತ್ತು…

    April 13, 2016
    ...
    Congress general secretary Digvijaya Singh at Kumara Krupa Guest House during his visit to Bangalore on Jan.5, 2014. (Photo: IANS)
    ರಾಜ್ಯ

    ಕುರ್ಚಿ ಬಿಕ್ಕಟ್ಟನ್ನು ಪಾರು ಮಾಡಿತು ಬರ; ಸಮಾನ ಮನಸ್ಕರರಿಗೆ ಸಿಗಲಿಲ್ಲ ವರ!

    ಬುಧವಾರ ಮುಂಜಾನೆಯಿಂದ ಬೆಂಗಳೂರಿನ ಹೃದಯ ಭಾಗದಲ್ಲಿ ನಡೆದ ರಾಜಕೀಯ ಬೆಳವಣಿಗೆಗಳು ಸಂಜೆ ಹೊತ್ತಿಗೆ ಸ್ಪಷ್ಟಗೊಂಡಿವೆ. ರಾಜ್ಯಾಡಳಿತದ ಉನ್ನತ ಸ್ಥಾನದಲ್ಲಿರುವ ಸಿಎಂ ಸಿದ್ದರಾಮಯ್ಯ ಪಕ್ಷದೊಳಗಿನ ಆಂತರಿಕ ಬೆಳವಣಿಗೆಗಳನ್ನು ಮೀರಿ ಇನ್ನಷ್ಟು ದಿನ ತಮ್ಮ ಸ್ಥಾನದಲ್ಲಿ ಅಬಾಧಿತವಾಗಿ ಮುಂದುವರಿಯಲಿದ್ದಾರೆ. ಆದರೆ ತಲೆಯ ಮೇಲೆ ‘ನಾವು ಕರೆಯುವವರೆಗೂ ದಿಲ್ಲಿಯ ಕಡೆ ತಲೆ ಹಾಕಬೇಡಿ’ ಎಂಬ ಹೈಕಮಾಂಡ್ ಸಂದೇಶದ ತೂಗುಗತ್ತಿ ನೇತಾಡಲು ಶುರುವಾಗಿದೆ. ‘ಸಮಾನ ಮನಸ್ಕರು’ ಎಂಬ ಬ್ಯಾನರ್ ಅಡಿಯಲ್ಲಿ ಸಂಘಟಿತರಾಗಿದ್ದ ಶಾಸಕರ ಒಳಗುದಿ ಮುಂದಿವರಿಯಲಿದೆ. ಎಂಎಲ್ಸಿಗಳಿಗೂ ಸಚಿವ ಸ್ಥಾನ ನೀಡಬೇಕು ಎಂಬ ಬೇಡಿಕೆ, ಬೇಡಿಕೆಯಾಗಿಯೇ ಉಳಿಯಲಿದೆ…

    April 13, 2016
    ...
    Profile Of  Chairman UB Group And Kingfisher Airlines Vijay Mallya
    ದೇಶ

    ಪಾಸ್ಪೋರ್ಟ್ ಮುಟ್ಟುಗೋಲಿಗೆ ಇಡಿ ಪತ್ರ: ಮಲ್ಯ ಸುತ್ತ ಬಿಗಿಯಾಗುತ್ತಿವ ಬಲೆ

    ಸಾಲ ತೀರಿಸಲಾಗದೆ ದೇಶ ಬಿಟ್ಟು ಲಂಡನ್ ಸೇರಿಕೊಂಡಿರುವ ಬೆಂಗಳೂರು ಮೂಲದ ಉದ್ಯಮಿ ವಿಜಯ್ ಮಲ್ಯ ಪಾಸ್ ಪೋರ್ಟ್ ಮುಟ್ಟುಗೋಲು ಹಾಕಿಕೊಳ್ಳಲು ಜಾರಿ ನಿರ್ದೇಶನಾಲಯ ಪತ್ರ ಬರೆದಿದೆ. ಐಡಿಬಿಐ ಬ್ಯಾಂಕ್ ಸಾಲ ಮರುಪಾವತಿ ಮಾಡದ ಪ್ರಕರಣದಲ್ಲಿ, ವಿದೇಶಾಂಗ ಇಲಾಖೆಗೆ ಪತ್ರ ಬರೆದಿರುವ ಜಾರಿ ನಿರ್ದೇಶನಾಲಯ (ಇಡಿ), ಪಾರ್ಸ್ಪೋರ್ಟ್ ಕಾಯ್ದೆ, 1967ರ ಅನ್ವಯ, ಮಲ್ಯ ದಾಖಲೆಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಕೋರಿದೆ. ತನಿಖೆಗೆ ಸಹಕಾರ ನೀಡದ ಹಿನ್ನೆಲೆಯಲ್ಲಿ ಈ ಕ್ರಮ ಅನಿವಾರ್ಯ ಎಂದು ಇಡಿ ಪತ್ರದಲ್ಲಿ ತಿಳಿಸಿದೆ. ಸಾಲ ಮರುಪಾವತಿ ಪ್ರಕರಣ..

    April 13, 2016
    ...
    cid_bangalore_office_1
    ಸುದ್ದಿ ಸಾರ

    ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ಇನ್ನೂ ಮೂವರ ಬಂಧನ

    ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಐಡಿ ಪೊಲೀಸರು ಬುಧವಾರ ಮೂವರನ್ನು ಬಂಧಿಸಿದ್ದಾರೆ. ಪಿಡಬ್ಲ್ಯೂಡಿ ಕೇಂದ್ರ ಕಚೇರಿಯಲ್ಲಿ ಕಿರಿಯ ಎಂಜಿನಿಯರ್ ಆಗಿರುವ ಕೆ. ಎಸ್. ರಂಗನಾಥ್, ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದ ಅನಿಲ್ ಕುಮಾರ್ ಹಾಗೂ ಖಾಸಗಿ ಕೋಚಿಂಗ್ ಸೆಂಟರ್ ನಡೆಸುತ್ತಿದ್ದ ಮುರಳೀಧರ್ ಕೆ. ಎಂ ಬಂಧನಕ್ಕೆ ಒಳಗಾದವರು. ಸರಕಾರಿ ನೌಕರರಾಗಿರುವ ಕೆ. ಎಸ್. ರಂಗನಾಥ್, ಪ್ರಕರಣದ ಆರೋಪಿಗಳಾದ ರುದ್ರಪ್ಪ ಹಾಗೂ ಕುಮಾರಸ್ವಾಮಿಗಳಿಂದ ಪ್ರಶ್ನೆ ಪತ್ರಿಕೆಯನ್ನು ಪಡೆದುಕೊಂಡಿದ್ದಾರೆ ಎಂದು ಸಿಐಡಿ ಹೇಳಿಕೆಯಲ್ಲಿ ತಿಳಿಸಿದೆ. ಅನಿಲ್ ಕುಮಾರ್ ಕೂಡ..

    April 13, 2016
    ...
    boko haram-child-bombers
    ವಿದೇಶ

    ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಹೆಣ್ಣು ಮಕ್ಕಳು: ‘ಹರಾಮಿ’ ಆಚರಣೆ ವರದಿಯಲ್ಲಿ ಬಹಿರಂಗ

    ಕಳೆದ ಒಂದುವರೆ ವರ್ಷಗಳಲ್ಲಿ ನೈಜೀರಿಯಾ ಮೂಲದ ಮುಸ್ಲಿಂ ಭಯೋತ್ಪಾದಕ ಸಂಘಟನೆ ‘ಬೋಕೊ ಹರಾಮ್’ ಮಕ್ಕಳನ್ನು ಆತ್ಮಹತ್ಯಾ ಬಾಂಬ್ ದಾಳಿಗೆ ಬಳಸಿಕೊಳ್ಳುತ್ತಿರುವ ಪ್ರಮಾಣದಲ್ಲಿ ಭಾರಿ ಹೆಚ್ಚಳವಾಗಿದೆ ಎಂದು ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ನೈಜೀರಿಯಾದ ಚಿಕೋಬ್ ಎಂಬಲ್ಲಿ ವಸತಿ ಶಾಲೆಯಿಂದ ಸುಮಾರು 200 ಹೆಣ್ಣು ಮಕ್ಕಳನ್ನು ಬೋಕೊ ಹರಾಮ್ ಸಂಘಟನೆ ಅಪಹರಣ ನಡೆಸಿದ ಘಟನೆಗೆ ಎರಡು ವರ್ಷ ತುಂಬಿದ ಸಂದರ್ಭದಲ್ಲಿ ವಿಶ್ವಸಂಸ್ಥೆ ‘ಬಿಯಾಂಡ್ ಚಿಬೋಕ್’ ವರದಿಯನ್ನು ಬಿಡುಗಡೆ ಮಾಡಿದೆ. ವರದಿಯಲ್ಲಿ 2014 ಹಾಗೂ 2015ರಲ್ಲಿ ಬೋಕೊ ಹರಾಮ್ ಸಂಘಟನೆ ನಡೆಸಿದ ಆತ್ಮಹತ್ಯಾ ಬಾಂಬ್..

    April 13, 2016
    ...
    twitter trend
    ರಾಜ್ಯ

    ಟ್ವಿಟರ್ ಕಟ್ಟೆ ಏರಿದ ಮಹದಾಯಿ; ಬರ: ಭಾರತದಲ್ಲಿ #DyingForADrop ಟ್ರೆಂಡಿಗ್

    ರಾಜ್ಯದ ಬರ ಪರಿಸ್ಥಿತಿ, ರಾಜಕಾರಣಿಗಳ ಹೊಣೆಗೇಡಿತನ ಹಾಗೂ ಮಹದಾಯಿ ನೀರಿನ ನಿರೀಕ್ಷೆಯಲ್ಲಿರುವ ರೈತರ ಪರ ದನಿಗಳು ಬುಧವಾರ ಬೆಳಗ್ಗೆಯಿಂದ ಸಾಮಾಜಿಕ ಜಾಲತಾಣ ಟ್ವಿಟರ್ನಲ್ಲಿ ಟ್ರೆಂಡಿಂಗ್ ಆಗಿವೆ. ಕಳೆದ ಹಲವು ದಿನಗಳಲ್ಲಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಬರ ಕಾಣಿಸಿಕೊಂಡಿದೆ. ಬರ ಪರಿಹಾರಕ್ಕಾಗಿ ರಾಜ್ಯ ಸರಕಾರ ಜಿಲ್ಲಾಧಿಕಾರಿಗಳ ವಿಡಿಯೋ ಕಾನ್ಫರೆನ್ಸ್ ನಡೆಸಿತ್ತು. ಇಂದಿನಿಂದ ಸಿಎಂ ಸಿದ್ದರಾಮಯ್ಯ ಕೂಡ ಬರ ಜಿಲ್ಲೆಗಳ ಪ್ರವಾಸ ಆರಂಭಿಸಿದ್ದಾರೆ. ಇನ್ನೊಂದೆಡೆ, ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಬರ ಪರಿಹಾರದ ವಿಚಾರದಲ್ಲಿ..

    April 13, 2016
    ...
    cbi spl court-1
    ಸುದ್ದಿ ಸಾರ

    ಕಾಶ್ಮೀರಿ ಯುವಕರಿಗೆ ಗುಂಡೇಟು: ಸೈನಿಕರ ವಿರುದ್ಧ ಸೇನಾ ತನಿಖೆ

    ಕಾಶ್ಮೀರಾದ ಹಂದ್ವಾರದಲ್ಲಿ ಮಿಲಿಟರಿ ಗುಂಡೇಟಿಗೆ ಇಬ್ಬರು ಯುವಕರು ಬಲಿಯಾದ ಪ್ರಕರಣಕ್ಕೆ ಸಂಬಂಧಪ್ಟಂತೆ ಸೇನೆ ತನಿಖೆಗೆ ಆದೇಶಿಸಿದೆ.  ಜಮ್ಮು ಮತ್ತು ಕಾಶ್ಮೀರಾ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಕೂಡ ಘಟನೆ ಕುರಿತು ವಿಷಾಧ ವ್ಯಕ್ತಪಡಿಸಿದ್ದು, ಸೂಕ್ತ ಕ್ರಮ ಜರುಗಿಸುವಂತೆ ಸೇನಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಉದಂಪುರದ ನಾರ್ತರ್ನ್ ಕಮಾಂಡ್ ಏರಿಯಾದ ಲೆ. ಜನರಲ್ ಡಿ. ಎಸ್. ಹೂಡ, “ಘಟನೆ ಕುರಿತು ತನಿಖೆಗೆ ಆದೇಶಿಸಲಾಗಿದೆ,” ಎಂದು ತಿಳಿಸಿದ್ದಾರೆ. “ಇಂತಹ ಘಟನೆಗಳು ಜಮ್ಮು ಮತ್ತು ಕಾಶ್ಮೀರಾ ರಾಜ್ಯದಲ್ಲಿ ನಡೆಸುತ್ತಿರುವ ಶಾಂತಿ ಸ್ಥಾಪನಾ ಪ್ರಕ್ರಿಯೆಗಳಿಗೆ..

    April 13, 2016

Top