An unconventional News Portal.

    ...
    JDS- BJP
    ರಾಜ್ಯ

    ದೇವೇಗೌಡ ಕುಟುಂಬದ ಬಿಕ್ಕಟ್ಟಿನ ಲಾಭ: ಯಡಿಯೂರಪ್ಪ ಹಾದಿ ಇನ್ನಷ್ಟು ಸುಲಭ

    ಕರ್ನಾಟಕದ ವಿಧಾನಸಭೆ ಚುನಾವಣೆಗೆ ಎರಡು ವರ್ಷವಿದೆ ಎನ್ನುವಾಗಲೇ ಭಾರತೀಯ ಜನತಾ ಪಕ್ಷ ಎಚ್ಚೆತ್ತುಕೊಂಡಂತೆ ಕಾಣಿಸುತ್ತಿದೆ. ಮಾಜಿ ಮುಖ್ಯಮಂತ್ರಿ, ಹಳೇ ಹುಲಿ ಯಡಿಯೂರಪ್ಪರನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ತರುವ ಮೂಲಕ; ಪ್ರತಿಪಕ್ಷವಾಗಿ ಬಿಜೆಪಿ ಜೀವಂತವಾಗಿದೆ ಎಂಬ ಸಂದೇಶವನ್ನೂ, ಮುಂದಿನ ಚುನಾವಣೆಯಲ್ಲಿ ಸಶಕ್ತ ಪರ್ಯಾಯವೊಂದನ್ನು ನೀಡಬಲ್ಲೆವು ಎಂಬ ಭರವಸೆಯನ್ನು ಏಕಕಾಲಕ್ಕೆ ರವಾನಿಸುವ ಕೆಲಸ ಮಾಡಿದೆ ರಾಷ್ಟ್ರೀಯ ಪಕ್ಷ. ಬಿಜೆಪಿ ಇಂತಹದೊಂದು ತೀರ್ಮಾನ ತೆಗೆದುಕೊಳ್ಳುವ ಕಾಲಕ್ಕೆ ಸರಿಯಾಗಿ ರಾಜ್ಯದ ಸಿದ್ದರಾಮಯ್ಯ ಸರಕಾರ ತನ್ನ ಮೇಲಿದ್ದ ಭರವಸೆಗಳನ್ನು ಕಳೆದುಕೊಂಡಿದೆ. ಸಾಮಾಜಿಕ ನ್ಯಾಯದ ಹಿನ್ನಲೆಯಲ್ಲಿ ನೆನಪಿನಲ್ಲಿ ಉಳಿಯುವಂತಹ ಕೆಲವು ಯೋಜನೆಗಳನ್ನು ಹೊರತು ಪಡಿಸಿದರೆ,..

    April 12, 2016
    ...
    Vishwavani
    ಪತ್ರಿಕೆ

    ‘ವಿಶ್ವವಾಣಿ’ಯ ಮಿಸ್ಸಿಂಗ್ ಲಿಂಕ್ ಹಾಗೂ ಹೈಕಮಾಂಡ್ ತಲುಪಿದ ನಂಜುಂಡಿ ‘ಹೊಸ ಸಾಹಸ’!

    2015 ಮೇ.. ವಿಶ್ವೇಶ್ವರ ಭಟ್ಟರು ‘ಕನ್ನಡ ಪ್ರಭ’ ಹಾಗೂ ‘ಸುವರ್ಣ ನ್ಯೂಸ್’ ನಡೆಸುತ್ತಿರುವ ಏಷಿಯಾನೆಟ್ ಸಂಸ್ಥೆಯಿಂದ ಹೊರ ಬಿದ್ದಿದ್ದರು. ‘ವಿಜಯ ಕರ್ನಾಟಕ’ದ ಆಡಳಿತ ಮಂಡಳಿಯೊಂದಿಗೆ ಕಹಿ ನೆನಪುಗಳನ್ನು ಹೊತ್ತು ಹೊರ ಬಂದಿದ್ದ ಭಟ್ಟರು ಮತ್ತು ತಂಡ ಹೊಸ ಹುಮ್ಮಸ್ಸಿನೊಂದಿಗೆ ರಾಜೀವ್ ಚಂದ್ರಶೇಖರ್ ಅವರ ಸಂಸ್ಥೆ ಕಟ್ಟುವ ಕೆಲಸಕ್ಕೆ ತೊಡಗಿಕೊಂಡಿದ್ದರು. ಆದರೆ, ಅಲ್ಲಿದ್ದಷ್ಟು ದಿನ ಒಂದಷ್ಟು ಭರವಸೆ, ತಮ್ಮ ಸುತ್ತಮುತ್ತಲಿನವರಿಗೆ ಕೆಲಸ ಕೊಡಿಸಿದ್ದು ಬಿಟ್ಟರೆ, ಪತ್ರಿಕೋದ್ಯಮದಲ್ಲಿ ಹಿಂದೆ ತಂದ ಸಂಚಲವನ್ನು ಮೂಡಿಸುವಲ್ಲಿ ಭಟ್ಟರು ಸೋತು ಹೋಗಿದ್ದರು. ಆದರೂ, ಪ್ರಯತ್ನಗಳು ಜಾರಿಯಲ್ಲಿತ್ತು. ಒಂದು ದಿನ..

    April 12, 2016
    ...
    SUPREME-COURT
    ದೇಶ

    ಸಾಲ ವಸೂಲಾತಿಯಲ್ಲಿ ತಾರತಮ್ಯ: ರಿಸರ್ವ್ ಬ್ಯಾಂಕ್ಗೆ ಸುಪ್ರಿಂ ಕೋರ್ಟ್ ತರಾಟೆ

    ಸಾಲ ಬಾಕಿದಾರರ ಮಾಹಿತಿ ಬಹಿರಂಗಕ್ಕೆ ಒಪ್ಪದ ರಿಸರ್ವ್ ಬ್ಯಾಂಕ್ಗೆ ಸುಪ್ರಿಂ ಕೋರ್ಟ್ ಮಂಗಳವಾರ ತರಾಟೆಗೆ ತೆಗೆದುಕೊಂಡಿತು. ಸಾಮಾಜಿಕ ಕಾರ್ಯಕರ್ತ ಹಾಗೂ ವಕೀಲ ಪ್ರಶಾಂತ್ ಭೂಷಣ್ ಅವರು ಸಲ್ಲಿಸಿದ ಅರ್ಜಿ ವಿಚಾರಣೆ ವೇಳೆ, “ನೀವು ವಾಚ್ಡಾಗ್, ನಿಯಂತ್ರಕ ಸಂಸ್ಥೆ. ಒಂದು ಕಡೆ ಜನರು ಸಾವಿರಾರು ಕೋಟಿ ಸಾಲಗಳನ್ನು ತೆಗೆದುಕೊಂಡು ಸಾಮ್ರಾಜ್ಯಗಳನ್ನು ನಡೆಸಿ ದಿವಾಳಿಯಾಗುತ್ತಾರೆ. ಅಂತಹ ವಿಚಾರಗಳು ಇತ್ಯರ್ಥವಾಗದೇ ಉಳಿದು ಹೋಗುತ್ತವೆ. ಇನ್ನೊಂದು ಕಡೆ, ರೈತರು ಕೆಲವೇ ಸಾವಿರ ರೂ. ಸಾಲ ತೆಗೆದುಕೊಂಡು ಸಾಲ ಮರುಪಾವತಿಗೆ ವಿಫಲರಾದರೆ, ಅವರ ಆಸ್ತಿಯನ್ನು ಮುಟ್ಟುಗೋಲು..

    April 12, 2016
    ...
    devindar sharma-1
    ಸುದ್ದಿ ಸಾರ

    ಕೃಷಿ ಬಿಕ್ಕಟ್ಟಿಗೆ ಶಾಶ್ವತ ಪರಿಹಾರ: ಬೆಂಗಳೂರಿನಲ್ಲಿ ದೇವೆಂದರ್ ಶರ್ಮಾ

    ರೈತರ ಸಮಸ್ಯೆ ಪರಿಹಾರಕ್ಕೆ ಕೇಂದ್ರ ಸರಕಾರ 3 ಲಕ್ಷ ಕೋಟಿ ರೂಪಾಯಿ ಶಾಶ್ವತ ಪ್ಯಾಕೇಜ್ ಘೋಷಿಸಬೇಕು ಎಂದು ಕೃಷಿ ಚಿಂತಕ ದೇವಿಂದರ್ ಶರ್ಮಾ ಬೆಂಗಳೂರಿನಲ್ಲಿ ಒತ್ತಾಯಿಸಿದ್ದಾರೆ. ಇಲ್ಲಿಗೆ ಆಗಮಿಸಿದ್ದ ಅವರು, ಭಾನುವಾರ ಆಯ್ದ ಕೆಲವು ಪತ್ರಕರ್ತರ ಜತೆ  ಮಾತನಾಡಿದರು. “ದೇಶದ ಕೃಷಿ ಕ್ಷೇತ್ರ ಬಿಕ್ಕಟ್ಟಿನಲ್ಲಿದೆ. 60 ಕೋಟಿ ರೈತರ ಬದುಕು ಅತಂತ್ರ ಸ್ಥಿತಿಗೆ ಬಂದು ತಲುಪಿದೆ. ಈ ಸಮಯದಲ್ಲಿ ಶಾಶ್ವತ ಪರಿಹಾರ ನೀಡುವ ಮೂಲಕ ಕೃಷಿ ಚಟುವಟಿಗೆಗಳಿಗೆ ನೆರವಾಗಲು ಸರಕಾರ 3 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್..

    April 12, 2016
    ...
    ayub master
    ಫೋಕಸ್

    ಪಾಕಿಸ್ತಾನದಲ್ಲೊಂದು ಪಾರ್ಕ್ ಶಾಲೆ ಮತ್ತು ಅಪರೂಪದ ಆಯೂಬ್ ಮೇಸ್ಟ್ರು!

    ಪ್ರತಿ ನಿತ್ಯ ಮಧ್ಯಾಹ್ನ 3 ಗಂಟೆ ಆಯ್ತು ಅಂದ್ರೆ ಸಾಕು ಆ ವ್ಯಕ್ತಿ ತನ್ನ ಸೈಕಲ್ ಏರಿ ಹೊರಟು ಬಿಡ್ತಾರೆ. ಪಾಕಿಸ್ತಾನದ ಇಸ್ಲಾಮಾಬಾದ್ನಲ್ಲಿರುವ ಪಾರ್ಲಿಮೆಂಟ್ ಭವನದಿಂದ ಸುಮಾರು 2 ಕಿ.ಮೀ ದೂರದಲ್ಲಿರುವ ಪಾರ್ಕ್ ಕಡೆಗೆ ಅವರ ಪಯಣ. ಆ ಪಾರ್ಕ್ ನಲ್ಲಿ ಇನ್ನೂರಕ್ಕೂ ಹೆಚ್ಚು ಮಕ್ಕಳು ಈ ಹಿರಿ ಜೀವದ ಬರುವಿಕೆಗಾಗಿ ಕಾಯುತ್ತಿರುತ್ತಾರೆ. ಪುಸ್ತಕ ಹಿಡಿದುಕೊಂಡು.. ಭವಿಷ್ಯದ ಕನಸುಗಳನ್ನು ತಮ್ಮೊಳಗೆ ಅದುಮಿಟ್ಟುಕೊಂಡು.. ಆ ಪುಟಾಣಿ ಮಕ್ಕಳಿಗೆಲ್ಲಾ ಮೊಹಮ್ಮದ್ ಅಯೂಬ್ ಅಂದ್ರೆ ಗೊತ್ತಾಗಲ್ಲ. ಅವರಿಗೆ ಗೊತ್ತಿರೋದು ಮಾಸ್ಟರ್ ಅಯೂಬ್ ಮಾತ್ರ…

    April 12, 2016

Top