An unconventional News Portal.

    ...
    social-survey-karnataka-4
    ರಾಜ್ಯ

    ರಾಜ್ಯದಲ್ಲಿ ಸಂಚಲನ ಮೂಡಿಸಲಿದೆ ‘ಜಾತಿ ಸಮೀಕ್ಷೆ’: ವಾಟ್ಸಾಪ್ ಮೆಸೇಜ್ ಮರ್ಮ ಏನು?

    ಸ್ವಾತಂತ್ರ್ಯ ಭಾರತದ ಮೊಟ್ಟ ಮೊದಲ ‘ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆ- ಕರ್ನಾಟಕ’ ಸದ್ಯದಲ್ಲಿಯೇ ಭಾರಿ ಸುದ್ದಿ ಮಾಡುವ ಸಾಧ್ಯತೆ ಇದೆ. ವರ್ಷದ ಹಿಂದೆ, 2015ರ ಏಪ್ರಿಲ್ 11 ರಂದು ಕರ್ನಾಟಕ ಸರಕಾರ ‘ಜಾತಿವಾರು ಸಮೀಕ್ಷೆ’ಗೆ ಚಾಲನೆ ನೀಡಿತ್ತು. ಹಿಂದುಳಿದ ವರ್ಗಗಳ ಆಯೋಗದ ಮೂಲಕ ನಡೆಸಲಾದ ಈ ಸಮೀಕ್ಷೆ 1.25 ಕೋಟಿ ಕುಟುಂಬಗಳನ್ನು ತಲುಪುವ ಗುರಿಯನ್ನು ಹೊಂದಿತ್ತು. ಇದಕ್ಕಾಗಿ ಸರಕಾರ ಸುಮಾರು 170 ಕೋಟಿ ರೂಪಾಯಿ ಎತ್ತಿಟ್ಟಿತ್ತು. ರಾಜ್ಯದ ಪ್ರತಿ ಕುಟುಂಬಗಳ ಸಾಮಾಜಿಕ ಹಾಗೂ ಆರ್ಥಿಕ ಪರಿಸ್ಥಿತಿಯನ್ನು ಅರಿಯುವುದು ಸಮೀಕ್ಷೆಯ ಉದ್ದೇಶವಾಗಿತ್ತು…

    April 11, 2016
    ...
    cid_bangalore_office_1
    ಸುದ್ದಿ ಸಾರ

    ಸಿಐಡಿ ಪೊಲೀಸರಿಂದ ಜಸ್ಟ್ ಮಿಸ್ಸಾದ ಶಿವಕುಮಾರ ಸ್ವಾಮಿ!

    ಪಿಯುಸಿ ರಸಾಯನ ಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಪ್ರಮುಖ ಆರೋಪಿ ಸಿಐಡಿ ಪೊಲೀಸರಿಂದ ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ಭಾನುವಾರ ನಡೆದಿದೆ. ಆರೋಪಿ ಶಿವಕುಮಾರ್ ಅಲಿಯಾಸ್ ಶಿವಕುಮಾರ ಸ್ವಾಮಿ, ಬೆಂಗಳೂರಿನ ಹೊಸಕೆರೆಹಳ್ಳಿ ಬಳಿಯ ಡಯಗ್ನೋಸಿಸ್ ಸೆಂಟರ್ ಒಂದರಲ್ಲಿ ಎರಡು ದಿನಗಳಿಂದ ಚಿಕಿತ್ಸೆ ನೆಪದಲ್ಲಿ ತಂಗಿದ್ದ ಎಂಬ ಮಾಹಿತಿ ಪೊಲೀಸರಿಗೆ ತಡವಾಗಿ ಲಭ್ಯವಾಗಿತ್ತು. ಸಿಐಡಿಯ ಒಂದು ತಂಡ ಸದರಿ ಡಯಾಗ್ನೋಸಿಸ್ ಸೆಂಟರ್ಗೆ ಭೇಟಿ ನೀಡುವ ಮೊದಲೇ ಆತ ಅಲ್ಲಿಂದ ಪರಾರಿಯಾಗಿದ್ದ ಎಂದು ಉನ್ನತ ಮೂಲಗಳು ಸ್ಪಷ್ಟಪಡಿಸಿವೆ. ಸದ್ಯ,..

    April 11, 2016
    ...
    Edward-Snowden-Wikileaks-ICIJ
    ಪತ್ರಿಕೆ

    ‘ಪನಾಮ ಪೇಪರ್ಸ್’: ಸುದ್ದಿಯಾಗದೇ ಉಳಿದ ಸುದ್ದಿ ಆಚೆಗಿರುವ ಸಾಧ್ಯತೆಗಳು!

    ಕಳೆದ ವಾರ ಜಗತ್ತಿನಾದ್ಯಂತ ಭಾರಿ ಸದ್ದು ಮಾಡಿದ್ದ ‘ಪನಾಮ ಪೇಪರ್ಸ್’ ಸುತ್ತ ಹೊಸ ವಿಶ್ಲೇಷಣೆಗಳು ಕೇಳಿ ಬರುತ್ತಿವೆ. ಅವುಗಳಲ್ಲಿ ಪ್ರಮುಖವಾದುದ್ದು, ‘ಪನಾಮ ಪೇಪರ್ಸ್’ ಮೂಲಕ ಬಹಿರಂಗಪಡಿಸಿದ್ದ ಸುದ್ದಿಗಳಿಗಿಂತ, ಸುದ್ದಿಯಾಗದೇ ಉಳಿದ ದಾಖಲೆಗಳ ಬಗ್ಗೆ ಹಲವರ ಟೀಕೆಗಳು ವ್ಯಕ್ತವಾಗುತ್ತಿರುವುದು. ಇಂದು ಮಾಹಿತಿ ತಂತ್ರಜ್ಞಾನ ಬೆಳೆದು ನಿಂತಿದ್ದು, ಪತ್ರಿಕೋದ್ಯಮ ಮತ್ತು ತಂತ್ರಜ್ಞಾನ ಒಂದಾದರೆ ಏನೇನು ಮಾಡಬಹುದು, ಏನೆಲ್ಲಾ ಘಟಿಸುತ್ತವೆ ಎಂಬುದಕ್ಕೆ ಕಳೆದ ಆರು ವರ್ಷಗಳಲ್ಲಿ ಹೊರಬಂದ ದೊಡ್ಡ ‘ಸ್ಟೋರಿ’ಗಳೇ ಸಾಕ್ಷಿ. ಸರಕಾರಗಳ ಅಥವಾ ಕಂಪನಿಗಳ ದಾಖಲೆಗಳನ್ನು ದೊಡ್ಡ ಮಟ್ಟದಲ್ಲಿ ಸೋರಿಕೆ ಮಾಡುವ..

    April 11, 2016
    ...
    kerala fire-2
    ದೇಶ

    ಕೊಲ್ಲಂ ಪಟಾಕಿ ದುರಂತ: ಸ್ಪರ್ಧೆಗೆ ಅನುಮತಿ ನಿರಾಕರಿಸಿದ್ದಕ್ಕೆ ‘ಧರ್ಮ’ದ ಬಣ್ಣ

    ಭಾನುವಾರ ಕೊಲ್ಲಂನ ಪುತ್ತಿಂಗಳ್ ದೇವಳದಲ್ಲಿ ನಡೆದ ಅಗ್ನಿದುರಂತದ ಬೆನ್ನಲ್ಲೇ ಜಿಲ್ಲಾಡಳಿತದ ಕಾರ್ಯವೈಖರಿಗೆ ರಾಜಕಾರಣಿಗಳು ಹಸ್ತಕ್ಷೇಪ ಮಾಡಿದ ಮಾಹಿತಿ ಹೊರಬಿದ್ದಿದೆ. ದೇಗುಲದಲ್ಲಿ ಪಟಾಕಿ ಸಿಡಿಸಲು ಅನುಮತಿ ನಿರಾಕರಿಸಿದ ಜಿಲ್ಲಾಡಳಿತದ ವಿರುದ್ಧ ಕೆಲವು ರಾಜಕಾರಣಿಗಳು ಒತ್ತಡ ಹೇರುವ ಪ್ರಯತ್ನವನ್ನು ನಡೆಸಿದ್ದರು ಎಂದು ಸೋಮವಾರ ‘ಇಂಡಿಯನ್ ಎಕ್ಸ್ಪ್ರೆಸ್’ ಪತ್ರಿಕೆ ವರದಿ ಮಾಡಿದೆ. ಇದಕ್ಕೆ ಕಾರಣವಾಗಿದ್ದು ‘ಧರ್ಮ’ದ ಹಿನ್ನೆಲೆ ಎಂದು ವರದಿ ಹೇಳಿದೆ. ಪುತ್ತಿಂಗಳ್ ದೇವಳದ ಹದಿನಾರು ದಿನಗಳ ಜಾತ್ರಾ ಮಹೋತ್ಸವದಲ್ಲಿ ಸಂಪ್ರದಾಯದಂತೆ ನಡೆದು ಬಂದಿರುವ ಸುಡುಮದ್ದು ಪ್ರದರ್ಶನಕ್ಕೆ ಈ ಬಾರಿ ಜಿಲ್ಲಾಡಳಿತ ಅನುಮತಿ..

    April 11, 2016
    ...
    Bhavush agarval
    ರಾಜ್ಯ

    ಕನಸಿನ ಕಂಪನಿ ಓಲಾ ಸಾಗಿ ಬಂದ ಹಾದಿ; ಬದಲಾದ ಮನಸ್ಸು

    ಆಗಿನ್ನೂ 2010. ದೇಶದಲ್ಲಿ 3ಜಿ ಸೇವೆ ಆರಂಭವಾಗಿದ್ದ ದಿನಗಳು. ಆನ್ ಲೈನ್ ಮಾರಾಟದ ತಾಣಗಳು, ಆ್ಯಪ್ ಆಧಾರಿತ ಸೇವೆಗಳೆಲ್ಲಾ ಒಂದೊಂದಾಗಿ ಕಾಣಿಸಿಕೊಳ್ಳುತ್ತಿದ್ದ ಕಾಲಮಾನವದು. 2011, ಡಿಸೆಂಬರ್ 17ರಂದು ‘ಇ-ಸ್ಪಾರ್ಕ್ಸ್’ ಎಂಬ ಮೇಳವೊಂದು ಬೆಂಗಳೂರಿನಲ್ಲಿ ಆಯೋಜನೆಯಾಗಿತ್ತು. ದೇಶದಲ್ಲಿ ಇ-ಕಾಮರ್ಸ್ ಸ್ಟಾರ್ಟ್ ಅಪ್ ಗಳಿಗೆ ಬಂಡವಾಳ ಒದಗಿಸಿಕೊಡುವ ವೇದಿಕೆ ಅದು. ಎಲ್ಲರೂ ಒಬ್ಬೊಬ್ಬರಾಗಿ ಬಂದು ತಮ್ಮ ಆಲೋಚನೆ, ಯೋಜನೆಗಳನ್ನು ನೆರೆದಿದ್ದ ಉದ್ಯಮಿಗಳ ಮುಂದೆ ತೆರೆದಿಡುತ್ತಿದ್ದರು. ಕೊನೆಗೆ ಆ ಹುಡುಗನ ಸರದಿ ಬಂತು. ಎಲ್ಲರಂತೆ ಆತ ವೇದಿಕೆ ಹತ್ತಿ ಪವರ್ ಪಾಯಿಂಟ್..

    April 11, 2016
    ...
    ola_650x400_51446651541
    ರಾಜ್ಯ

    ನಿಯಂತ್ರಣಕ್ಕೆ ಸಿಗದ ‘ಓಲಾ ಸುಲಿಗೆ’: ಕ್ಯಾಬ್ ಸೇವೆಯ ಹೆಸರಿನಲ್ಲಿ ಗ್ರಾಹಕರಿಗೆ ವಂಚನೆ

    ಆ್ಯಪ್ ಆಧಾರಿತ ಟಾಕ್ಸಿ ಸೇವೆ ನೀಡುವ ಬೆಂಗಳೂರು ಮೂಲದ ಓಲಾ ಗ್ರಾಹಕರಿಂದ ಯದ್ವಾತದ್ವಾ ಸುಲಿಗೆಗೆ ಇಳಿದಿದೆ. ಪೀಕ್ ಅವರ್ (ಬೇಡಿಕೆ ಗರಿಷ್ಠವಿರುವ ಅವಧಿ) ಗಳಲ್ಲಿ ಬೆಲೆಯನ್ನು ಒಂದೂವರೆ ಪಟ್ಟು, ದುಪ್ಪಟ್ಟು ಏರಿಸಿ ಗ್ರಾಹಕರಿಗೆ ಓಲಾ ಬರೆ ಹಾಕುತ್ತಿದೆ. ಜಾಹೀರಾತುಗಳಲ್ಲಿ ಒಂದು, ಗ್ರಾಹಕರಿಗೆ ಬಿಲ್ ನೀಡುವಾಗ ಇನ್ನೊಂದು ದರಪಟ್ಟಿ, ಓಲಾ ಸುಲಿಗೆಯ ಮತ್ತೊಂದು ವಿಧಾನ. ಜತೆಗೆ, ಪ್ರಯಾಣದ ಅವಧಿಗೆ ಪ್ರತಿ ನಿಮಿಷಕ್ಕೆ 1 ರೂಪಾಯಿ ಗ್ರಾಹಕರಿಂದ ವಸೂಲಿ ಮಾಡುತ್ತಿದೆ. ವಿಶೇಷ ಅಂದರೆ, ನಗರ ಸಾರಿಗೆ ವ್ಯವಸ್ಥೆಯಲ್ಲಿ ಗ್ರಾಹರಿಗೆ ಸುಲಿಗೆಯಾಗುತ್ತಿದೆ, ಇದನ್ನು..

    April 11, 2016
    ...
    Arnab_G
    ಟಿವಿ

    ‘ದಿ ರೈಸ್ ಅಂಡ್ ಫಾಲ್’ ಆಫ್ ಅರ್ನಾಬ್ ಗೋಸ್ವಾಮಿ!

    ಅದು 1990ರ ದಶಕ… ಭಾರತದಲ್ಲಿ ಇನ್ನೂ 24/7 ಸುದ್ದಿ ವಾಹಿನಿಗಳ ಮೊಗ್ಗು ಬಿಡುತ್ತಿದ್ದ ಕಾಲ. ಅದು ರಾಜದೀಪ್ ಸರ್ದೇಸಾಯಿ ಎಂಬ ‘ಟೈಮ್ಸ್ ಆಫ್ ಇಂಡಿಯಾ’ದ ಪತ್ರಕರ್ತ ಟಿವಿ ಮಾಧ್ಯಮಕ್ಕೆ ಪಾದಾರ್ಪಣೆ ಮಾಡಿದ್ದ ಸಮಯ ಕೂಡ. ಅದಾಗಲೇ, ಆರಂಭವಾಗಿ ಎರಡು ವರ್ಷವಾಗಿದ್ದ ನ್ಯೂಡೆಲ್ಲಿ ಟೆಲಿವಿಷನ್ (NDTV)ಗೆ ಕಾಲಿಟ್ಟಿದ್ದರು ರಾಜದೀಪ್. ಇಸವಿ 1994; ಆಗ ರಾಜದೀಪ್ ಮನೆಗೆ ಜೋಬರ್ ಅಂತ ಅನ್ನಿಸುವ, ಉದ್ದ ಕೂದಲಿನ ಹುಡುಗನೊಬ್ಬ ಬರುತ್ತಿದ್ದ. ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಿಂದ ಸಾಮಾಜಿಕ ಮಾನವಿಕ ಶಾಸ್ತ್ರ ವಿಭಾಗದಲ್ಲಿ ಆತ ಉನ್ನತ ವ್ಯಾಸಾಂಗ ಮಾಡಿದ್ದ. ಮೂಗಿನ ತುದಿಯಲ್ಲಿ..

    April 11, 2016
    ...
    1-lemonade-to-save-bees
    ಪಾಸಿಟಿವ್

    ಕಡಿಸಿಕೊಂಡಲ್ಲೇ ಹುಡುಕುವ ಮೂಲಕ ಉದ್ಯಮಿಯಾದ 11ರ ಪೋರಿ!

    ಹನ್ನೊಂದರ ಹರೆಯ ಅಂದರೆ ಅದಿನ್ನೂ ಶಾಲೆ, ಆಟ ತುಂಟಾಟ ಅಂತ ಸಮಯ ಕಳೆಯುವ ವಯಸ್ಸು. ಆದ್ರೆ ಮಿಕಾಯ್ಲಾ ಉಲ್ಮರ್ ಎಂಬ ಪೋರಿ ಈ ಎಳೆ ಮಯಸ್ಸಿನಲ್ಲಿ ಮಾಡುತ್ತಿರುವ ಸಾಧನೆ ಮಾತ್ರ ವಯಸ್ಸನ್ನೂ ಮೀರಿದ್ದು. ಶಾಲೆಯಿಂದ ಬಂದು ಟ್ಯೂಷನ್, ಹೊಂ ವರ್ಕ್ ಅಂತಾ ಕಾಲ ಕಳೆಯಬೇಕಿದ್ದ ಇವಳು ಈಗ ಸ್ವಂತ ಉದ್ಯಮವೊಂದನ್ನು ನಡೆಸುತ್ತಿದ್ದಾಳೆ.   1940 ರಿಂದ ಉಲ್ಮರ್ ಅಜ್ಜಿ ಲಿಂಬೆ ಹಾಗೂ ಜೇನಿನಿಂದ ವಿಶಿಷ್ಟವಾದ ಜೇನನ್ನು ತಯಾರಿಸುತ್ತಿದ್ದರು. ತಮ್ಮ ಕುಟುಂಬದ ಭಾಗವೇ ಎಂಬಂತಿದ್ದ  ಈ ಉತ್ಪನ್ನವನ್ನು ಮಿಕಾಯ್ಲಾ..

    April 11, 2016

Top