An unconventional News Portal.

ಸುಪ್ರಿಂ ಗರಂ ಹಿನ್ನೆಲೆ: ನರೇಗಕ್ಕೆ ಕೇಂದ್ರದಿಂದ ಭಾರಿ ಹಣ ಬಿಡುಗಡೆ

ಸುಪ್ರಿಂ ಗರಂ ಹಿನ್ನೆಲೆ: ನರೇಗಕ್ಕೆ ಕೇಂದ್ರದಿಂದ ಭಾರಿ ಹಣ ಬಿಡುಗಡೆ

ನರೇಗಾ ಯೋಜನೆಗೆ ಸಾಕಷ್ಟು ಹಣ ಬಿಡುಗಡೆ ಮಾಡುತ್ತಿಲ್ಲವೆಂದು ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡ ಹಿನ್ನೆಲೆಯಲ್ಲಿ ಕೇಂದ್ರಸರ್ಕಾರ ಹಲವು ರಾಜ್ಯಗಳಿಗೆ 12, 230 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ.

ಯೋಜನೆಗಾಗಿ ಇಷ್ಟೊಂದು ದೊಡ್ಡ ಮೊತ್ತ ಬಿಡುಗಡೆ ಮಾಡಿದ್ದು ಇದೇ ಮೊದಲು ಎಂದು ಸಚಿವಾಲಯದ ಮೂಲಗಳು ಹೇಳಿವೆ. ಈ ಹಣ ಬಿಡುಗಡೆಯು “ಹಿಂದಿನ ವರ್ಷ ರಾಜ್ಯಗಳಿಂದ ಬಾಕಿ ಇರುವ ವೇತನ ಪಾವತಿಗೆ ಮತ್ತು ಹೊಸ ವಿತ್ತೀಯ ವರ್ಷದಲ್ಲಿ ಕಾರ್ಯಕ್ರಮ ನಿರ್ವಹಣೆಗೆ ನೆರವಾಗುತ್ತದೆ,” ಎಂದು ಗ್ರಾಮೀಣಾಭಿವೃದ್ಧಿ ಸಚಿವ ಬೀರೇಂದರ್ ಸಿಂಗ್ ತಿಳಿಸಿದ್ದಾರೆ.

“ಕಾರ್ಯಕ್ರಮದ ಉದ್ದೇಶಗಳ ಈಡೇರಿಕೆಗೆ ಸರ್ಕಾರ ಸಾಕಷ್ಟು ಸಂಪನ್ಮೂಲಗಳ ಖಾತರಿಗೆ ಬದ್ಧವಾಗಿದೆ,” ಎಂದು ಅವರು ಹೇಳಿದರು. ಸುಪ್ರೀಂಕೋರ್ಟ್ ಬುಧವಾರ ರಾಜ್ಯಗಳಿಗೆ ಸಾಕಷ್ಟು ಹಣ ಬಿಡುಗಡೆ ಮಾಡದ ಬಗ್ಗೆ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿತ್ತು.

ಈ ಕುರಿತು ಪ್ರತಿಕ್ರಿಯಿಸಿರುವ ಗ್ರಾಮೀಣಾಭಿವೃದ್ದಿ ಸಚಿವ ಬೀರೇಂದರ್ ಸಿಂಗ್ “ಮನರೇಗಾ ಯೋಜನೆಯಲ್ಲಿ ಇನ್ನು ಮುಂದೆ ದಿನಗೂಲಿ-ಸಾಮಗ್ರಿ ಅನುಪಾತ 60:40 ಪ್ರಮಾಣದಲ್ಲಿ ಪಂಚಾಯತ್ ಮಟ್ಟಕ್ಕೆ ಬದಲಾಗಿ ಜಿಲ್ಲಾ ಮಟ್ಟದಲ್ಲಿ ಪಾಲಿಸಲು ನಿರ್ಧರಿಸಲಾಗಿದೆ. ಅಲ್ಲದೆ ಕಳೆದ ವರ್ಷದಲ್ಲಿ ರಾಜ್ಯಗಳು ನೀಡಬೇಕಾದ ದಿನಗೂಲಿ ಬಾಕಿಯನ್ನು ಪಾವತಿಸಲು ಹಾಗೂ ಯೋಜನೆಯನ್ನು ನಿರ್ವಹಿಸಲು ಈ ಹಣ ಬಿಡುಗಡೆ ಮಾಡಲಾಗಿದೆ,” ಎಂದು ತಿಳಿಸಿದ್ದಾರೆ.

Leave a comment

FOOT PRINT

Top