An unconventional News Portal.

‘ಡೆಡ್ ಸ್ಟೋರೇಜ್’ ಮಟ್ಟ ತಲುಪಿದ ಅಣೆಕಟ್ಟುಗಳು: ಬೆಂಗಳೂರಿಗೆ ಮಾತ್ರ ಆತಂಕ ಇಲ್ಲ

‘ಡೆಡ್ ಸ್ಟೋರೇಜ್’ ಮಟ್ಟ ತಲುಪಿದ ಅಣೆಕಟ್ಟುಗಳು: ಬೆಂಗಳೂರಿಗೆ ಮಾತ್ರ ಆತಂಕ ಇಲ್ಲ

ರಾಜ್ಯದ ಬಹುತೇಕ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿದಿದ್ದು, ‘ಡೆಡ್ ಸ್ಟೋರೇಜ್’ ಮಟ್ಟ ತಲುಪಿದೆ.

13 ಪ್ರಮುಖ ಜಲಾಶಯಗಳಲ್ಲಿ, ಒಟ್ಟು 860 .51 ಟಿಎಂಸಿ ಅಡಿ ನೀರು ಸಂಗ್ರಹಣೆ ಸಾಮರ್ಥ್ಯ ಇದೆ. ಸದ್ಯ 13 ಜಲಾಶಯಗಳಲ್ಲಿ ಉಳಿದಿರುವುದು ಕೇವಲ 191 .01 ಅಡಿ ನೀರು ಮಾತ್ರ.

ಲಿಂಗನಮಕ್ಕಿಯ ಜಲಾಶಯದಲ್ಲಿ 40 ಟಿಎಂಸಿ ಅಡಿ ನೀರಿದ್ದು, ಆತಂಕದ ಪರಿಸ್ಥಿತಿ ಇಲ್ಲ. ಆದರೆ ಹಾರಂಗಿ, ಮಲಪ್ರಭಾ, ತುಂಗಭದ್ರಾ, ಹೇಮಾವತಿ, ಕಬಿನಿ, ವರಾಹ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿದಿದೆ. ಇದು ಮುಂದಿನ ದಿನಗಳಲ್ಲಿ ಕೃಷಿ ಹಾಗೂ ಕೃಷಿಯೇತರ ಚಟುವಟಿಕೆಗಳಿಗೆ ನೀರು ಒದಗಿಸುವ ಪ್ರಕ್ರಿಯೆಗೆ ಆತಂಕವನ್ನು ತಂದೊಡ್ಡುವ ಸಾಧ್ಯತೆ ಇದೆ.

ಇನ್ನು ಬೆಂಗಳೂರು – ಮೈಸೂರು, ಮಂಡ್ಯ ಪ್ರದೇಶಗಳಿಗೆ ಜೀವಸೆಲೆಯಾಗಿರುವ ಕೃಷ್ಣ ರಾಜ ಸಾಗರ ಜಲಾಶಯದಲ್ಲೂ ನೀರಿನ ಮಟ್ಟ ಕುಸಿದಿದೆ. ಇಲ್ಲೀಗ 11.97 ಟಿಎಂಸಿ ಅಡಿ ನೀರು ಉಳಿದಿದೆ. “ಕೆಆರ್ ಎಸ್ ನಲ್ಲಿ ನೀರಿನ ಮಟ್ಟ ಕುಸಿದಿದ್ದರೂ ಬೆಂಗಳೂರಿಗೆ ನೀರಿನ ಸಮಸ್ಯೆ ಎದುರಾಗುವುದಿಲ್ಲ,” ಎಂದು ಬೆಂಗಳೂರು ಜಲಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.

“ಬೆಂಗಳೂರಿಗೆ ಒಂದು ತಿಂಗಳಿಗೆ 1.5 ಟಿಎಂಸಿ ನೀರಿನ ಅಗತ್ಯವಿದ್ದು ಬೆಂಗಳೂರಿಗೆ ಅಗತ್ಯವಿರುವ ನೀರನ್ನು ಪೂರೈಕೆ ಮಾಡುವಂತೆ ಕೆಆರ್ ಎಸ್ ಅಧಿಕಾರಿಗಳಿಗೆ ಈಗಾಗಲೇ ಮನವಿ ಮಾಡಿದ್ದೇವೆ. ಆದ್ದರಿಂದ ಬೆಂಗಳೂರಿಗೆ ನೀರಿನ ಸಮಸ್ಯೆ ಎದುರಾಗುವುದಿಲ್ಲ,” ಎಂದು ಜಲಮಂಡಳಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನೀರಿನ ಸಮಸ್ಯೆ ಎದುರಾಗುವ ಬಗ್ಗೆ ಮಾತನಾಡಿರುವ ಜಲಸಂಪನ್ಮೂಲ ಸಚಿವ ಎಂ. ಬಿ. ಪಾಟೀಲ್, “ಕುಡಿಯುವ ನೀರಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ, ಜೂನ್ ವರೆಗೂ ನೀರಿನ ಪೂರೈಕೆ ನಿರ್ವಹಣೆ ಮಾಡಬೇಕಿದೆ. ಜೂನ್ ನಲ್ಲಿಯೂ ಮಳೆಯಾಗದೆ ಇದ್ದರೆ ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ,” ಎಂದು ತಿಳಿಸಿದ್ದಾರೆ.

Leave a comment

FOOT PRINT

Top