An unconventional News Portal.

ಡೊನಾಲ್ಡ್‌ ಟ್ರಂಪ್‌ ಅಧಿಕಾರಕ್ಕೇರಿ ಒಂದು ವರ್ಷ: ವಿಶ್ವದ ದೊಡ್ಡಣ್ಣನ ಸರಕಾರವೇ ಸ್ಥಗಿತ!

ಇದು ಅಮೆರಿಕಾದಲ್ಲಿ ನಡೆದ ಕುತೂಹಲಕಾರಿ ಬೆಳವಣಿಗೆ. 45ನೇ ಅಧ್ಯಕ್ಷರನ್ನಾಗಿ ಉದ್ಯಮಿ ಟ್ರಂಪ್‌ರನ್ನು ಆಯ್ಕೆ ಮಾಡಿಕೊಂಡ ಇಲ್ಲಿನ ಜನ, ವರ್ಷ ಕಳೆಯುವ ಮುನ್ನವೇ ಸರಕಾರವೇ ಸ್ಥಗಿತಗೊಂಡ ಘಟನೆಗೆ ಸಾಕ್ಷಿಯಾಗಿದ್ದಾರೆ.

  ...
  ಸುದ್ದಿ ಸಾರ

  ಮುಂಬೈ ದಾಳಿ ವೇಳೆ ಪ್ರಮುಖ ಪಾತ್ರವಹಿಸಿದ್ದ ‘ಮ್ಯಾಕ್ಸ್’ ಇನ್ನಿಲ್ಲ

  ಮುಂಬೈ ದಾಳಿಯ ಸಂದರ್ಭದಲ್ಲಿ ಸಾವಿರಾರು ಜನರ ಪ್ರಾಣ ಉಳಿಸಲು ಸೇನೆಗೆ ನೆರವಾಗಿದ್ದ ಪೊಲೀಸ್ ನಾಯಿ ಮ್ಯಾಕ್ಸ್ ಶುಕ್ರವಾರ ಮುಂಬೈನಲ್ಲಿ ಮೃತಪಟ್ಟಿದೆ. ನಾಯಿಯ ದೇಹಕ್ಕೆ ತ್ರಿವರ್ಣ ಧ್ವಜವನ್ನು ಹೊದಿಸಿ ಗೌರವ ಸಲ್ಲಿಸಿ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ. ಆದರೆ ಈ ಸಾಹಸಿ ನಾಯಿಯ ಅಂತ್ಯಸಂಸ್ಕಾರಕ್ಕೆ ಪೊಲೀಸ್ ಅಧಿಕಾರಿಗಳು ಗೈರಾಗಿದ್ದರು. ಕೆಲವು ದಿನಗಳಿಂದ ಖಾಯಿಲೆಯಿಂದ ಬಳಲುತ್ತಿದ್ದ ನಾಯಿ ವಿರಾರ್ ವೃದ್ಧಾಶ್ರಮದಲ್ಲಿ ಮೃತಪಟ್ಟಿದ್ದು, ನಾಯಿಗೆ ಪಾಲಕರಾದ ಫಿಝಾ ಷಾ ಮತ್ತು ಸುಭಾಷ್ ಗಾವ್ಡೆ ಸೇರಿದಂತೆ ವೃದ್ಧಾಶ್ರಮದ ಕೆಲವು ಸಿಬ್ಬಂದಿಗಳು ಮಾತ್ರ ಅಂತಿಮ ವಿದಾಯ ಹೇಳಿದರು…

  April 10, 2016
  ...
  ಸುದ್ದಿ ಸಾರ

  ಸುಪ್ರಿಂ ಗರಂ ಹಿನ್ನೆಲೆ: ನರೇಗಕ್ಕೆ ಕೇಂದ್ರದಿಂದ ಭಾರಿ ಹಣ ಬಿಡುಗಡೆ

  ನರೇಗಾ ಯೋಜನೆಗೆ ಸಾಕಷ್ಟು ಹಣ ಬಿಡುಗಡೆ ಮಾಡುತ್ತಿಲ್ಲವೆಂದು ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡ ಹಿನ್ನೆಲೆಯಲ್ಲಿ ಕೇಂದ್ರಸರ್ಕಾರ ಹಲವು ರಾಜ್ಯಗಳಿಗೆ 12, 230 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಯೋಜನೆಗಾಗಿ ಇಷ್ಟೊಂದು ದೊಡ್ಡ ಮೊತ್ತ ಬಿಡುಗಡೆ ಮಾಡಿದ್ದು ಇದೇ ಮೊದಲು ಎಂದು ಸಚಿವಾಲಯದ ಮೂಲಗಳು ಹೇಳಿವೆ. ಈ ಹಣ ಬಿಡುಗಡೆಯು “ಹಿಂದಿನ ವರ್ಷ ರಾಜ್ಯಗಳಿಂದ ಬಾಕಿ ಇರುವ ವೇತನ ಪಾವತಿಗೆ ಮತ್ತು ಹೊಸ ವಿತ್ತೀಯ ವರ್ಷದಲ್ಲಿ ಕಾರ್ಯಕ್ರಮ ನಿರ್ವಹಣೆಗೆ ನೆರವಾಗುತ್ತದೆ,” ಎಂದು ಗ್ರಾಮೀಣಾಭಿವೃದ್ಧಿ ಸಚಿವ ಬೀರೇಂದರ್ ಸಿಂಗ್ ತಿಳಿಸಿದ್ದಾರೆ. “ಕಾರ್ಯಕ್ರಮದ ಉದ್ದೇಶಗಳ ಈಡೇರಿಕೆಗೆ..

  April 10, 2016
  ...
  ಸುದ್ದಿ ಸಾರ

  ‘ಡೆಡ್ ಸ್ಟೋರೇಜ್’ ಮಟ್ಟ ತಲುಪಿದ ಅಣೆಕಟ್ಟುಗಳು: ಬೆಂಗಳೂರಿಗೆ ಮಾತ್ರ ಆತಂಕ ಇಲ್ಲ

  ರಾಜ್ಯದ ಬಹುತೇಕ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿದಿದ್ದು, ‘ಡೆಡ್ ಸ್ಟೋರೇಜ್’ ಮಟ್ಟ ತಲುಪಿದೆ. 13 ಪ್ರಮುಖ ಜಲಾಶಯಗಳಲ್ಲಿ, ಒಟ್ಟು 860 .51 ಟಿಎಂಸಿ ಅಡಿ ನೀರು ಸಂಗ್ರಹಣೆ ಸಾಮರ್ಥ್ಯ ಇದೆ. ಸದ್ಯ 13 ಜಲಾಶಯಗಳಲ್ಲಿ ಉಳಿದಿರುವುದು ಕೇವಲ 191 .01 ಅಡಿ ನೀರು ಮಾತ್ರ. ಲಿಂಗನಮಕ್ಕಿಯ ಜಲಾಶಯದಲ್ಲಿ 40 ಟಿಎಂಸಿ ಅಡಿ ನೀರಿದ್ದು, ಆತಂಕದ ಪರಿಸ್ಥಿತಿ ಇಲ್ಲ. ಆದರೆ ಹಾರಂಗಿ, ಮಲಪ್ರಭಾ, ತುಂಗಭದ್ರಾ, ಹೇಮಾವತಿ, ಕಬಿನಿ, ವರಾಹ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿದಿದೆ. ಇದು ಮುಂದಿನ ದಿನಗಳಲ್ಲಿ ಕೃಷಿ ಹಾಗೂ ಕೃಷಿಯೇತರ..

  April 10, 2016
  ...
  ಸುದ್ದಿ ಸಾರ

  ಸಂಪುಟ ಪುನರಾಚನೆ ಹಿನ್ನೆಲೆ: ದಿಲ್ಲಿಗೆ ಸಿಎಂ ಸಿದ್ದರಾಮಯ್ಯ

  ಸಿಎಂ ಸಿದ್ದರಾಮಯ್ಯ ಏ. 14 ರಂದು ದಿಲ್ಲಿಗೆ ತೆರಳಲಿದ್ದು, ಸಂಪುಟ ಪುನರಚನೆ ಬಗ್ಗೆ ಹೈಕಮಾಂಡ್ ಜೊತೆ ಚರ್ಚಿಸಲಿದ್ದಾರೆ. ಸಿದ್ದರಾಮಯ್ಯ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ, ಸಚಿವ ಸಂಪುಟ ಪುನಾರಚನೆ ಕುರಿತು ಮಹತ್ವದ ತೀರ್ಮಾನಕ್ಕೆ ಬರಲಿದ್ದಾರೆ.ಅಸಮರ್ಥ ಸಚಿವರನ್ನು ಸಂಪುಟದಿಂದ ಕೈಬಿಟ್ಟು, ಸಂಪುಟ ಪುನಾರಚನೆ ಮಾಡಬೇಕು ಇದರಲ್ಲಿ ಹೊಸಬರಿಗೆ ಅವಕಾಶ ನೀಡಬೇಕು ಎಂದು ಸಮಾನ ಮನಸ್ಕ ಶಾಸಕರು ಒತ್ತಡ ಹೇರುತ್ತಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆಯಲಿದೆ. ಏಪ್ರಿಲ್ 15ರಂದು ಸೋನಿಯಾ ಗಾಂಧಿ ಸೇರಿದಂತೆ ಇತರೆ..

  April 10, 2016
  ...
  ಸುದ್ದಿ ಸಾರ

  ಬ್ರಿಟನ್ ಆರೋಗ್ಯ ಸೇವೆಗೆ ಭಾರತದಿಂದ ಮಾನವ ಸಂಪನ್ಮೂಲ ಪೂರೈಕೆ

  ಬ್ರಿಟನ್ ದೇಶದಲ್ಲಿ ವೈದ್ಯರ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 400ಕ್ಕೂ ಹೆಚ್ಚು ಭಾರತೀಯ ಮೂಲದ ಜನರಲ್ ಪ್ರಾಕ್ಟೀಷನಸ್ರ್ಗಳನ್ನು ನೇಮಕ ಮಾಡಿಕೊಳ್ಳಲು ಅಲ್ಲಿನ ಸರಕಾರ ಮುಂದಾಗಿದೆ. 2020ನೇ ಇಸ್ವಿ ವೇಳೆಗೆ 5,000 ವೈದ್ಯರನ್ನು ನೇಮಕ ಮಾಡಿಕೊಳ್ಳಲು ಸರಕಾರ ನಿರ್ಧರಿಸಿದೆ. ದೇಶದಲ್ಲಿ ಆರೋಗ್ಯ ಸೇವೆ ತರಬೇತಿಯ ಹೊಣೆ ಹೊತ್ತಿರುವ ‘ಹೆಲ್ತ್ ಎಜ್ಯುಕೇಶನ್ ಇಂಗ್ಲೆಂಡ್’ ಈ ಬಗ್ಗೆ ಭಾರತದ ಸರಣಿ ಆಸ್ಪತ್ರೆಗಳ ಜತೆ ಒಪ್ಪಂದ ಮಾಡಿಕೊಂಡಿದೆ ಎಂದು ‘ಪಲ್ಸ್’ ನಿಯತಕಾಲಿಕ ವರದಿ ಮಾಡಿದೆ. 40 ಸಾವಿರಕ್ಕೂ ಅಧಿಕ ಉದ್ಯೋಗಿಗಳನ್ನು ಹೊಂದಿರುವ, 500 ದಶಲಕ್ಷ ಪೌಂಡ್ ವಹಿವಾಟು ನಡೆಸುತ್ತಿರುವ ಚೆನ್ನೈ..

  April 10, 2016
  ...
  ಸುದ್ದಿ ಸಾರ

  ಮಾತ್ರೆಗಳಿಗೂ ಸಸ್ಯಾಹಾರದ ಲೇಪನ: ಪರಿಶೀಲನೆಯಲ್ಲಿ ಪ್ರಸ್ತಾವನೆ

  ಫಾರ್ಮಸಿಯಲ್ಲಿ ನೀವು ಶುದ್ಧ ಸಸ್ಯಾಹಾರಿ ಕ್ಯಾಪ್ಸೂಲ್ ಪಡೆಯುವ ದಿನ ದೂರವಿಲ್ಲ. ದೇಶದಲ್ಲಿ ಸಸ್ಯಜನ್ಯ ಸೆಲ್ಯುಲೋಸ್ ಆಧರಿತ ಗುಳಿಗೆಗಳನ್ನು ಪರಿಚಯಿಸುವ ಸಂಬಂಧ ಸಲ್ಲಿಸಲಾಗಿರುವ ಪ್ರಸ್ತಾವನೆ ದೇಶದ ಅತ್ಯುನ್ನತ ಔಷಧ ನಿಯಂತ್ರಕರ ಪರೀಶೀಲನೆಯಲ್ಲಿದೆ. “ಪ್ರಾಣಿಜನ್ಯ ಜೆಲೆಟಿನ್ಗಿಂತ ಇದು ಹೆಚ್ಚು ಸುರಕ್ಷಿತ ಎಂಬ ಅಂಶದ ಬಗ್ಗೆಯೂ ಪರಿಶೀಲನೆ ನಡೆದಿದೆ,” ಎಂದು ಡ್ರಗ್ ಕಂಟ್ರೋಲರ್ ಜನರಲ್ ಜಿ.ಎನ್.ಸಿಂಗ್ ಹೇಳಿದ್ದಾರೆ. ಸದ್ಯ ಜೆಲೆಟಿನ್ ಅನ್ನು ಹಸು, ಹಂದಿ ಮತ್ತಿತರ ಪ್ರಾಣಿಗಳ ಸಂಸ್ಕರಿತ ಮೂಳೆ, ಚರ್ಮ ಹಾಗೂ ಕೋಶಗಳಿಂದ ತಯಾರಿಸುವ ವಿಧಾನ ಜಾರಿಯಲ್ಲಿದೆ. ಈ ಸಂಬಂಧ, “ಔಷಧ ನಿಯಂತ್ರಕರು..

  April 10, 2016
  ...
  ದೇಶ

  ‘ಇದು ದೇವರು ಮನುಷ್ಯನ ಮೇಲೆ ಹೂಡಿದ ಯುದ್ಧ’: ಕೊಲ್ಲಂನಿಂದ ‘ನೇರಪ್ರಸಾರ’!

  (ರವಿವಾರ ನಸುಕಿನ ಜಾವ ಕೇರಳದ ಕೊಲ್ಲಂ ಜಿಲ್ಲೆಯ ದೇವಾಲಯದಲ್ಲಿ ಸಂಭವಿಸಿದ ಘೋರ ದುರಂತ ನೂರಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ. ಈ ಸಮಯದಲ್ಲಿ, ಕೊಲ್ಲಂನ ಸದ್ಯದ ಪರಿಸ್ಥಿತಿ ಹೇಗಿದೆ ಎಂದು ನಮ್ಮ ಪ್ರತಿನಿಧಿ ಶೃತಿ ತೋಟುಪುರಂ ಕಟ್ಟಿಕೊಟ್ಟ ಚಿತ್ರಣ ಇಲ್ಲಿದೆ) ಕೇರಳದ 14 ಜಿಲ್ಲೆಗಳ ಪೈಕಿ ಕೊಲ್ಲಂಗೆ ವಿಶಿಷ್ಟ ಸ್ಥಾನವಿದೆ. ಭಾರತದ ತುತ್ತತುದಿಯಲ್ಲಿರುವ ತಿರುವನಂತಪುರಂನಿಂದ ಕೊಂಚ ಮೇಲಕ್ಕೆ, ಹೆಚ್ಚು ಕಡಿಮೆ ಒಂದೇ ರೀತಿಯ ಬೌಗೋಳಿಕ ಪರಿಸರವನ್ನು ಹೊಂದಿರುವ ಜಿಲ್ಲೆ ಇದು. ಹೆಚ್ಚು ಕಡಿಮೆ ನಮ್ಮ ಕಡಲತಡಿಯ ಊರು ಮಂಗಳೂರಿನ ಹೋಲಿಕೆ..

  April 10, 2016
  ...
  ರಾಜ್ಯ

  ಮತ್ತೆ ಮುರಿದು ಬಿದ್ದ ಸಂಧಾನ ಸಭೆ: ಪಿಯುಸಿ ಮೌಲ್ಯಮಾಪನದ ಗೊಂದಲ ಮುಂದುವರಿಕೆ

  ವೇತನ ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಪಿಯುಸಿ ಉಪನ್ಯಾಸಕರ ಜತೆ ಭಾನುವಾರ ನಡೆಸಿದ ಸರಕಾರದ ಮಾತುಕತೆ ಮತ್ತೆ ಮುರಿದು ಬಿದ್ದಿದೆ. ಈ ಮೂಲಕ, ಪಿಯುಸಿ ಮೌಲ್ಯಮಾಪನದ ಡೋಲಾಯಮಾನ ಪರಿಸ್ಥಿತಿ ಇನ್ನಷ್ಟು ದಿನಗಳು ಮುಂದುವರಿಯಲಿದೆ. ಭಾನುವಾರ ಬೆಂಗಳೂರಿನ ಕೆ. ಆರ್. ವೃತ್ತದ ಬಳಿ ಇರುವ ‘ಸರ್ವ ಶಿಕ್ಷಣ ಅಭಿಯಾನ’ ಯೋಜನೆ ನಿರ್ದೇಶಕರ ಕಚೇರಿಯಲ್ಲಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಪ್ರತಿಭಟನಾಕಾರರ ಜತೆ ಸಭೆ ಕರೆದಿದ್ದರು. ಸಭೆ ಆರಂಭವಾಗುತ್ತಿದ್ದಂತೆ, ಸಚಿವ ಕಿಮ್ಮನೆ ರತ್ನಾಕರ್, “ವೇತನ ಪರಿಷ್ಕರಣೆ ವಿಚಾರದಲ್ಲಿ ಸರಕಾರ ಮಧ್ಯದ..

  April 10, 2016
  ...
  ದೇಶ

  ಪಟಾಕಿ ಸಿಡಿಸುವ ಆಚರಣೆ ದುರಂತಕ್ಕೆ ಕಾರಣ: ದೇವಸ್ಥಾನದ ಆಡಳಿತ ಮಂಡಳಿ ವಿರುದ್ಧ ಕ್ರಮ

  ನವ ವಸಂತವನ್ನು ಸ್ವಾಗತಿಸಲೆಂದು ದೇವಸ್ಥಾನಕ್ಕೆ ಬಂದ 102 ಜನ ಅಗ್ನಿ ದುರಂತದಲ್ಲಿ ಸಾವನ್ನಪ್ಪಿ, 350ಕ್ಕೂ ಹೆಚ್ಚು ಜನ ಗಾಯಗೊಂಡ ಘಟನೆ ಭಾನುವಾರ ಕೇರಳದಲ್ಲಿ ನಡೆದಿದೆ. ಇಲ್ಲಿನ ಕೊಲ್ಲಂನ ಪರವೂರ್ ಪುಟ್ಟಿಂಗಲ್ ದೇವಿ ದೇವಸ್ಥಾನದಲ್ಲಿ ಇಂದು ಮುಂಜಾನೆ ಭೀಕರ ದುರಂತ ಸಂಭವಿಸಿದೆ. ಹೊಸ ವರ್ಷವನ್ನು ಬರಮಾಡಿಕೊಳ್ಳಲು ದೇವಸ್ಥಾನದಲ್ಲಿ ಸುಡುಮದ್ದು ಪ್ರದರ್ಶನ ಏರ್ಪಡಿಸಲಾಗಿತ್ತು. ಇದೇ ಘಟನೆಗೆ ಕಾರಣ ಎಂದು ಪ್ರಾಥಮಿಕ ಮಾಹಿತಿ ಹೇಳುತ್ತಿವೆ. ನಿನ್ನೆ ಮಧ್ಯರಾತ್ರಿ 10 ಸಾವಿರಕ್ಕೂ ಅಧಿಕ ಭಕ್ತ ಜನ ಪುಟ್ಟಿಂಗಲ್ ದೇವಿ ದೇವಸ್ಥಾನಕ್ಕೆ ಆಗಮಿಸಿದ್ದರು. ಹೊಸ ವರ್ಷವನ್ನು ಬರಮಾಡಿಕೊಳ್ಳುವ ಸುಡುಮದ್ದು ಪ್ರದರ್ಶನ..

  April 10, 2016
  ...
  ದೇಶ

  ದೇವಸ್ಥಾನಗಳಲ್ಲಿ ಕಾಲ್ತುಳಿತ; ಅಗ್ನಿ ದುರಂತ: ನ್ಯಾಷನಲ್ ರೌಂಡಪ್

  ದೇವರ ದರ್ಶನಕ್ಕೆ ಹೋದವರು ಮಸಣ ಸೇರುವ ಘಟನೆಗಳು ದೇಶದ ನಾನಾ ಭಾಗಗಳಲ್ಲಿ ಆಗಾಗ್ಗೆ ನಡೆಯುತ್ತಲೇ ಇವೆ. ಭಾನುವಾರ ಕೇರಳದಲ್ಲಿ ಸಂಭವಿಸಿದ ಘೋರ ದುರಂತದ ಸಮಯದಲ್ಲಿ ಇಂತಹದ್ದೇ ಒಂದಷ್ಟು ಹಳೆಯ ಘಟನೆಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ: ಅ. 13, 2013: ಮಧ್ಯಪ್ರದೇಶದ ರತ್ನಾಘರ್ ಜಿಲ್ಲೆಯ ದಾಟಿಯಾ ಎಂಬಲ್ಲಿ ದುರ್ಗಾ ಮಾತೆ ದೇವಸ್ಥಾನದಲ್ಲಿ ಕಾಲ್ತುಳಿತ ಸಂಭವಿಸಿತ್ತು. ಈ ಸಮಯದಲ್ಲಿ ಸುಮಾರು 60 ಜನ ಮೃತಪಟ್ಟಿದ್ದರು. ದೇವಸ್ಥಾನಕ್ಕೆ ಸರತಿಯಲ್ಲಿ ನಿಂತಿದ್ದ ಜನರ ನಡುವೆ ನೂಕು ನುಗ್ಗಲು ಶುರುವಾಗಿತ್ತು. ಈ ಸಮಯದಲ್ಲಿ ಪರಿಸ್ಥಿತಿ ನಿಯಂತ್ರಿಸಲು..

  April 10, 2016

FOOT PRINT

Top