An unconventional News Portal.

ಭಾರತದ ವಿಶಿಷ್ಟ ಬುಡಕಟ್ಟು ಜನರ ಜತೆ 2 ವರ್ಷ ಕಾಲ ಕಳೆದ ಜರ್ಮನ್ ಫೊಟೋಗ್ರಾಫರ್

ಭಾರತದ ವಿಶಿಷ್ಟ ಬುಡಕಟ್ಟು ಜನರ ಜತೆ 2 ವರ್ಷ ಕಾಲ ಕಳೆದ ಜರ್ಮನ್ ಫೊಟೋಗ್ರಾಫರ್

ಇಲ್ಲಿ ಹೆಣ್ಣು ಮಕ್ಕಳಿಗೆ ಮೊದಲ ಆದ್ಯತೆ. ಹೊರಗಿನ ಆಧುನಿಕ ಸಮಾಜ ಮಹಿಳೆಯನ್ನು ನಡೆಸಿಕೊಳ್ಳುವ ರೀತಿ- ನೀತಿಗಳು ಇಲ್ಲಿಗೆ ಆಗಿ ಬರೋದಿಲ್ಲ. ಇಲ್ಲೇನಿದ್ದರೂ, ಹೆಣ್ಣು ಮೊದಲು, ನಂತರ ಉಳಿದ ವಿಚಾರಗಳು. ಇವತ್ತಿನ ನಾಗರಿಕ ಸಮಾಜಕ್ಕೆ ಲಿಂಗ ತಾರತಮ್ಯದ ವಿಚಾರದಲ್ಲಿ ಕೆಲವು ಪಾಠಗಳನ್ನು ಭಾರತದ ಈಶಾನ್ಯ ರಾಜ್ಯಗಳಲ್ಲಿ ಒಂದಾದ ಮೇಘಾಲಯದ ಈ ಪುಟ್ಟ ಹಳ್ಳಿ ತನ್ನದೇ ರೀತಿಯಲ್ಲಿ ಹೇಳಲು ಬಯಸುತ್ತಿದೆ. ಇದು ಮಹಿಳೆ ಮತ್ತು ಆಕೆಯನ್ನು ಕೇಂದ್ರವಾಗಿಟ್ಟುಕೊಂಡು ಬಂದಿರುವ ವಿಶಿಷ್ಟ ಬುಡಕಟ್ಟು ಸಮುದಾಯದ ಕತೆ.

ಮೇಘಾಲಯ.. ಪ್ರಕೃತಿಕ ಸೌಂದರ್ಯದಿಂದ ಕಂಗೊಳಿಸುವ ರಾಜ್ಯ. ದೇಶದ ಸೆವೆನ್ ಸಿಸ್ಟರ್ಸ್ ಎಂದು ಕರೆಸಿಕೊಳ್ಳುವ ರಾಜ್ಯಗಳಲ್ಲಿ ಇದೂ ಒಂದು. ಈ ಪುಟ್ಟ ಈಶಾನ್ಯ ರಾಜ್ಯ ಖಾಸಿ, ಜಯನ್ತಿಯಾ ಮತ್ತು ಗಾರೊ ಎಂಬ ಬುಡಕಟ್ಟು ಜನಾಂಗಗಳನ್ನು ತನ್ನೊಳಗೆ ಸಲಹುತ್ತಿದೆ. ಇದರಲ್ಲಿ ಖಾಸಿ ಬುಡಕಟ್ಟು ಜನಾಂಗ ತನ್ನ ನಿತ್ಯ ಬದುಕಿನಲ್ಲಿ ಪಾಲಿಸಿಕೊಂಡು ಬರುತ್ತಿರುವ ಆಚಾರಗಳಿಂದ ಭಿನ್ನ ಎನ್ನಿಸಿಕೊಳ್ಳುತ್ತಿದೆ.

ಖಾಸಿ ಜನಾಂಗದ ವಿಶೇಷತೆ ಏನಂದರೆ, ಇದು ಮಾತೃ ಪ್ರಧಾನ ಕುಟುಂಬ ಪದ್ದತಿ. ಇಲ್ಲಿ ತಾಯಿಯೇ ಕುಟುಂಬ ಕೇಂದ್ರ. ಸಾಮಾನ್ಯವಾಗಿ ಮಕ್ಕಳು ತಮ್ಮ ತಂದೆಯ ಕುಟುಂಬದ ಹೆಸರಿನೊಂದಿಗೆ ಗುರುತಿಸಿಕೊಳ್ತಾರೆ. ಆದರೆ ಖಾಸಿ ಜನಾಂಗದಲ್ಲಿ ಅದು ವಿರುದ್ಧ. ತಾಯಿಯ ಕುಟುಂಬದ ಹೆಸರಿನೊಂದಿಗೆ ತಮ್ಮನ್ನು ಗುರುತಿಸಿಕೊಳ್ಳೋದು ಈ ಜನರ ವಿಶಿಷ್ಠತೆ. ತಾಯಿಯ ನಂತರ ಮುಂದೆ ಉತ್ತರಾಧಿಕಾರ, ಆಸ್ತಿ ಎಲ್ಲವೂ ಹಸ್ತಾಂತರವಾಗೋದು ಹೆಣ್ಣು ಮಕ್ಕಳಿಗೇ.

ಕೌಟುಂಬಿಕವಾಗಿ ಹೆಣ್ಣು ಮಕ್ಕಳಿಗೆ ಇಷ್ಟೊಂದು ಅಧಿಕಾರ ಇದ್ರೂ ಊರಿನ ಆಡಳಿತದಲ್ಲಿ ಮಾತ್ರ ಅಲ್ಲೂ ಪುರುಷರದ್ದೇ ಮೇಲುಗೈ. ಇನ್ನು ಇಲ್ಲಿನ ಹೆಣ್ಣು ಹದಿಹರೆಯಕ್ಕೆ ಬರುತ್ತಿದ್ದಂತೇ ಹೆಚ್ಚಿನ ಹೆಣ್ಣು ಮಕ್ಕಳು ವಿದ್ಯಾಭ್ಯಾಸಕ್ಕೆ ತಿಲಾಂಜಲಿ ಇಡ್ತಾರೆ. ಬಳಿಕ ಮನೆಯಲ್ಲೇ ಇದ್ದು ತಂದೆ ತಾಯಿಯ ಆರೈಕೆಯಲ್ಲಿ ತೊಡಗುತ್ತಾರೆ. ಆದರೆ, ತಾವು ಮದುವೆಯಾಗುವ ಗಂಡನ್ನು ಆರಿಸಿಕೊಳ್ಳುವ ವಿಶೇಷ ಅಧಿಕಾರ ಖಾಸಿ ಜನಾಂಗದ ಹೆಣ್ಣು ಮಕ್ಕಳಿಗೆ ಇದೆ.

ಖಾಸಿ ಜನಾಂಗದ ಜೀವನ ಶೈಲಿಯನ್ನು ಅರ್ಥೈಸಿಕೊಳ್ಳುವ ಸಲುವಾಗಿ ಜರ್ಮನಿಯ ಬರ್ಲಿನ್ ಮೂಲದ ಫೊಟೋಗ್ರಾಫರ್ ಕ್ಯಾರೋಲಿನ್ ಕ್ಲೂಪೆಲ್ ಎರಡು ವರ್ಷಗಳ ಕಾಲ ಖಾಸಿ ಜನಾಂಗದ ಜತೆ ಕಾಲ ಕಳೆದ. ಈ ಸಮಯದಲ್ಲಿ ಈತ ಸೆರೆ ಹಿಡಿದ ಅಪರೂಪದ ಛಾಯಾಚಿತ್ರಗಳಲ್ಲಿ ಆಯ್ದೆ ಕೆಲವು ಇಲ್ಲಿವೆ. ಇವು ಪದಗಳಿಗೂ ಮೀರಿ ಪುಟ್ಟ ರಾಜ್ಯದೊಳಗೆ ತಣ್ಣನೆ ಬದುಕುತ್ತಿರುವವರ ಬದುಕನ್ನು ಕಟ್ಟಿಕೊಡುತ್ತವೆ.

Yasmin with mug. No house in Mawlynnong has running water. Those urns are used to carry the water from the dwells and to keep it fresh.

Grace mit ihrer Großmutter. Fast alle Khasifamilien wohnen mit drei Generationen unter einem Dach.

Ibapyntngen with bugs: the children love to catch these beautiful green bugs in late summer.

Anisha near the window after she took her daily bath.

Yasmin holds a rooster. She loves to catch and play with it after dawn.

Leave a comment

FOOT PRINT

Top