An unconventional News Portal.

ಕರ್ನಾಟಕ ಬಿಜೆಪಿಗೆ ಯಡಿಯೂರಪ್ಪ; ಉತ್ತರ ಪ್ರದೇಶ, ಪಂಜಾಬ್ಗೆ ನೂತನ ರಾಜ್ಯಾಧ್ಯಕ್ಷರ ನೇಮಕ

ಕರ್ನಾಟಕ ಬಿಜೆಪಿಗೆ ಯಡಿಯೂರಪ್ಪ; ಉತ್ತರ ಪ್ರದೇಶ, ಪಂಜಾಬ್ಗೆ ನೂತನ ರಾಜ್ಯಾಧ್ಯಕ್ಷರ ನೇಮಕ

ಪ್ರಮುಖ ಮೂರು ರಾಜ್ಯಗಳಿಗೆ  ಬಿಜೆಪಿ ಹೈಕಮಾಂಡ್ ರಾಜ್ಯಾಧ್ಯಕ್ಷರನ್ನು ನೇಮಿಸಿದೆ. ಕರ್ನಾಟಕ ಬಿಜೆಪಿ ಸಾರಥ್ಯವನ್ನು ಮಾಜಿ ಮುಖ್ಯಮಂತ್ರಿ, ಹಾಲಿ ರಾಷ್ಟ್ರೀಯ ಉಪಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರಿಗೆ ವಹಿಸಲಾಗಿದೆ. ಇದೇ ವೇಳೆ ಪಂಚಾಬ್ ರಾಜ್ಯಾಧ್ಯಕ್ಷರಾಗಿ ಕೇಶವ್ ಪ್ರಸಾದ್ ಮೌರ್ಯ ನೇಮಕವಾಗಿದ್ದಾರೆ. ಇನ್ನು ದೇಶದ ಅತೀ ದೊಡ್ಡ ರಾಜ್ಯ ಉತ್ತರ ಪ್ರದೇಶದ ಹೊಣೆಯನ್ನು ಕೇಂದ್ರದ ಸಾಮಾಜಿಕ ನ್ಯಾಯ ರಾಜ್ಯ ಸಚಿವ ವಿಜಯ್ ಸಂಪ್ಲಾಗೆ ವಹಿಸಿಲಾಗಿದೆ.  ಇಂದು ದೆಹಲಿಯ ಪಕ್ಷದ ಕಚೇರಿಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಈ ಘೋಷಣೆ ಹೊರಡಿಸಿದ್ದಾರೆ.

ಇಲ್ಲಿವರಗೆ ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದರು. ಪಂಚಾಬ್ ನಲ್ಲಿ ಈ ಹಿಂದೆ ಕಮಲ್ ಶರ್ಮ ಅಧ್ಯಕ್ಷರಾಗಿದ್ದರು. ಇನ್ನು ಪಂಜಾಬ್ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮಾಜಿ ಕ್ರಿಕೆಟಿಗ, ಸಂಸದ ನವಜೋತ್ ಸಿಂಗ್ ಸಿದ್ದು ಹೆಸರೂ ಕೇಳಿ ಬಂದಿತ್ತು. ಆದರೆ ಅವರಾಗಿಯೇ ಹುದ್ದೆಯನ್ನು ಒಪ್ಪಿಕೊಳ್ಳಲು ಹಿಂಜರಿದರು ಎಂದು ತಿಳಿದು ಬಂದಿದೆ.  ಪಂಜಾಬ್  ಮುಂದಿನ ವರ್ಷ ವಿಧಾನಸಬಾ ಚುನಾವಣೆಯನ್ನು ಎದುರಿಸಲಿದ್ದು ಸದ್ಯ ಅಲ್ಲಿ ‘ಬಿಜೆಪಿ-ಅಕಾಲಿದಳ’ ಮೈತ್ರಿ ಸರಕಾರವಿದೆ.

Leave a comment

FOOT PRINT

Top