An unconventional News Portal.

    ...
    Mädchenland (KIngdom of Girls)
    ಫೋಕಸ್

    ಭಾರತದ ವಿಶಿಷ್ಟ ಬುಡಕಟ್ಟು ಜನರ ಜತೆ 2 ವರ್ಷ ಕಾಲ ಕಳೆದ ಜರ್ಮನ್ ಫೊಟೋಗ್ರಾಫರ್

    ಇಲ್ಲಿ ಹೆಣ್ಣು ಮಕ್ಕಳಿಗೆ ಮೊದಲ ಆದ್ಯತೆ. ಹೊರಗಿನ ಆಧುನಿಕ ಸಮಾಜ ಮಹಿಳೆಯನ್ನು ನಡೆಸಿಕೊಳ್ಳುವ ರೀತಿ- ನೀತಿಗಳು ಇಲ್ಲಿಗೆ ಆಗಿ ಬರೋದಿಲ್ಲ. ಇಲ್ಲೇನಿದ್ದರೂ, ಹೆಣ್ಣು ಮೊದಲು, ನಂತರ ಉಳಿದ ವಿಚಾರಗಳು. ಇವತ್ತಿನ ನಾಗರಿಕ ಸಮಾಜಕ್ಕೆ ಲಿಂಗ ತಾರತಮ್ಯದ ವಿಚಾರದಲ್ಲಿ ಕೆಲವು ಪಾಠಗಳನ್ನು ಭಾರತದ ಈಶಾನ್ಯ ರಾಜ್ಯಗಳಲ್ಲಿ ಒಂದಾದ ಮೇಘಾಲಯದ ಈ ಪುಟ್ಟ ಹಳ್ಳಿ ತನ್ನದೇ ರೀತಿಯಲ್ಲಿ ಹೇಳಲು ಬಯಸುತ್ತಿದೆ. ಇದು ಮಹಿಳೆ ಮತ್ತು ಆಕೆಯನ್ನು ಕೇಂದ್ರವಾಗಿಟ್ಟುಕೊಂಡು ಬಂದಿರುವ ವಿಶಿಷ್ಟ ಬುಡಕಟ್ಟು ಸಮುದಾಯದ ಕತೆ. ಮೇಘಾಲಯ.. ಪ್ರಕೃತಿಕ ಸೌಂದರ್ಯದಿಂದ ಕಂಗೊಳಿಸುವ..

    April 8, 2016
    ...
    Unaoil media
    ಪತ್ರಿಕೆ

    ‘ಪನಾಮ ಪೇಪರ್ಸ್’ ಹವಾದಲ್ಲಿ ಕೊಚ್ಚಿಹೋಯಿತು ಯುವ ಪತ್ರಕರ್ತನ ತನಿಖಾ ವರದಿ!

    ಅನ್ಆಯಿಲ್… ಉದ್ಯಮ ಜಗತ್ತಿನಲ್ಲಿ ಅಪರಿಚಿತವಾಗಿರುವ, ಅಗೋಚರ ಕಂಪನಿಯ ಹೆಸರಿದು. ಸದ್ಯ ಇದು ಲಕ್ಷಾಂತರ ಕೋಟಿ ಬೆಲೆಬಾಳುತ್ತದೆ. ಮೊನಾಕೋದಲ್ಲಿ ತನ್ನ ಕೇಂದ್ರ ಸ್ಥಾನವನ್ನು ಹೊಂದಿದೆ. ತೈಲ ನಿಕ್ಷೇಪವನ್ನು ಹೊಂದಿರುವ ದೇಶಗಳಾದ ಇರಾಕ್, ಕುವೈಟ್, ಯುಎಇ, ಅಲ್ಜೀರಿಯಾ, ಅಜರ್ ಬೈಜಾನ್, ಕಜಕಿಸ್ತಾನ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಈ ಕಂಪನಿ ತನ್ನ ಕಾರ್ಯಚರಣೆ ನಡೆಸುತ್ತಿದೆ. ಅನ್ಆಯಿಲ್ ಕಂಪನಿಯ ಒಳಮರ್ಮ ಇಷ್ಟೆ. ರೋಲ್ಸ್ ರಾಯ್ಸ್, ಸ್ಯಾಮ್ಸಂಗ್, ಹಲಿಬರ್ಡನ್, ಹುಂಡೈ, ಲೈಟನ್ ಹೋಲ್ಡಿಂಗ್ಸ್ ನಂಥ ಕಂಪೆನಿಗಳಿಗೆ ಆಯಿಲ್ ಕಾಂಟ್ರಾಕ್ಟ್ ಗಳನ್ನು ಇದು ಎತ್ತಿಕೊಡುತ್ತದೆ. ಇದರಲ್ಲಿ ಭಾರತದ ಎಲ್ ಆಂಡ್..

    April 8, 2016
    ...
    bsy-bjp-karmataka
    ರಾಜ್ಯ

    ‘ಉಗಾದಿ ಘೋಷಣೆ’: ಮುನಿಸಿಕೊಂಡವರ ಮನೆಗೆ ಹಳೇ ಯಜಮಾನನೇ ಸಾರಥಿ!

    ನಿರೀಕ್ಷೆಯಂತೆಯೇ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವುದು ಶುಕ್ರವಾರ ಸ್ಪಷ್ಟವಾಗಿದೆ. ಬಿಜೆಪಿ ಹೈಕಮಾಂಡ್ ಮೂರು ರಾಜ್ಯಗಳ ರಾಜ್ಯಧ್ಯಕ್ಷರ ಸ್ಥಾನಗಳನ್ನು ಘೋಷಿಸಿದ್ದು, ಇದರಲ್ಲಿ ಕರ್ನಾಟಕದ ಬಿಜೆಪಿಗೆ ಯಡಿಯೂರಪ್ಪ ಅವರ ಹೆಸರನ್ನು ಅಂತಿಮಗೊಳಿಸಿದೆ. ಈ ಮೂಲಕ, ರಾಜ್ಯದಲ್ಲಿ ಒಡೆದ ಮನೆಯಂತಾಗಿರುವ ಬಿಜೆಪಿಯನ್ನು ಮುಂಬರುವ ವಿಧಾನಸಭಾ ಚುನಾವಣೆ ಒಳಗೆ ಪುನಶ್ಚೇತನ ನೀಡುವ ಸಾಧ್ಯತೆಯೊಂದನ್ನು ಹಿರಿಯ ನಾಯಕರು ಕಂಡುಕೊಂಡಿದ್ದಾರೆ. ಹೀಗಾಗಿ, ಆರ್ಎಸ್ಎಸ್ ಹಾಗೂ ರಾಜ್ಯದ ಹಲವು ನಾಯಕರ ಭಿನ್ನ ಅಭಿಪ್ರಾಯಗಳಿಗೆ ಮನ್ನಣೆ ನೀಡದ ಬಿಜೆಪಿ ರಾಷ್ಟ್ರಾಧ್ಯಕ್ಷ..

    April 8, 2016
    ...
    bjp-flag-_new
    ಸುದ್ದಿ ಸಾರ

    ಕರ್ನಾಟಕ ಬಿಜೆಪಿಗೆ ಯಡಿಯೂರಪ್ಪ; ಉತ್ತರ ಪ್ರದೇಶ, ಪಂಜಾಬ್ಗೆ ನೂತನ ರಾಜ್ಯಾಧ್ಯಕ್ಷರ ನೇಮಕ

    ಪ್ರಮುಖ ಮೂರು ರಾಜ್ಯಗಳಿಗೆ  ಬಿಜೆಪಿ ಹೈಕಮಾಂಡ್ ರಾಜ್ಯಾಧ್ಯಕ್ಷರನ್ನು ನೇಮಿಸಿದೆ. ಕರ್ನಾಟಕ ಬಿಜೆಪಿ ಸಾರಥ್ಯವನ್ನು ಮಾಜಿ ಮುಖ್ಯಮಂತ್ರಿ, ಹಾಲಿ ರಾಷ್ಟ್ರೀಯ ಉಪಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರಿಗೆ ವಹಿಸಲಾಗಿದೆ. ಇದೇ ವೇಳೆ ಪಂಚಾಬ್ ರಾಜ್ಯಾಧ್ಯಕ್ಷರಾಗಿ ಕೇಶವ್ ಪ್ರಸಾದ್ ಮೌರ್ಯ ನೇಮಕವಾಗಿದ್ದಾರೆ. ಇನ್ನು ದೇಶದ ಅತೀ ದೊಡ್ಡ ರಾಜ್ಯ ಉತ್ತರ ಪ್ರದೇಶದ ಹೊಣೆಯನ್ನು ಕೇಂದ್ರದ ಸಾಮಾಜಿಕ ನ್ಯಾಯ ರಾಜ್ಯ ಸಚಿವ ವಿಜಯ್ ಸಂಪ್ಲಾಗೆ ವಹಿಸಿಲಾಗಿದೆ.  ಇಂದು ದೆಹಲಿಯ ಪಕ್ಷದ ಕಚೇರಿಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಈ ಘೋಷಣೆ ಹೊರಡಿಸಿದ್ದಾರೆ. ಇಲ್ಲಿವರಗೆ..

    April 8, 2016
    ...
    karnataka lokayukta_yrs recap
    KPSC NEWS

    ಮರಳಿ ಬಂತು ಸಂಭ್ರಮದ ಉಗಾದಿ: ಲೋಕಾಯುಕ್ತ ‘ಸಮಾಧಿ’ಗೆ ಇಂದು ವರ್ಷದ ತಿಥಿ!

    ಲೋಕಾಯುಕ್ತ ಪೊಲೀಸ್ ತನಿಖೆ ನಡೆಸುತ್ತಿರುವ ಭ್ರಷ್ಟಾಚಾರ ಪ್ರಕರಣಗಳನ್ನು ನೂತನವಾಗಿ ರಚನೆಗೊಂಡಿರುವ ‘ಭ್ರಷ್ಟಾಚಾರ ನಿಗ್ರಹ ದಳ’ (ಎಸಿಬಿ)ಕ್ಕೆ ವರ್ಗಾವಣೆ ಮಾಡದಂತೆ ಹೈಕೋರ್ಟ್ ಗುರುವಾರ ಮಧ್ಯಂತರ ಆದೇಶ ನೀಡಿದೆ. ಈ ಮೂಲಕ, ಲೋಕಾಯುಕ್ತ ಪೊಲೀಸರು ತನಿಖೆ ನಡೆಸುತ್ತಿದ್ದ ಸುಮಾರು 600 ಪ್ರಕರಣಗಳು ‘ಎಸಿಬಿ’ಗೆ ವರ್ಗಾವಣೆಯೂ ಆಗುವಂತಿಲ್ಲ; ಇತ್ತ ಸರಕಾರ ಲೋಕಾಯುಕ್ತ ಪೊಲೀಸರಿಗೆ ನೀಡಿದ್ದ ಠಾಣಾಧಿಕಾರವನ್ನು ಕಸಿದುಕೊಂಡಿರುವುದರಿಂದ ‘ಭ್ರಷ್ಟ’ರನ್ನು ಮುಟ್ಟುವಂತಿಲ್ಲ; ಎಂಬಂತಾಗಿದೆ ಪರಿಸ್ಥಿತಿ. ವಕೀಲ ಚಿದಾನಂದ ಅರಸ್ ಸಲ್ಲಿಸಿದ್ದ ಅರ್ಜಿಯನ್ನು ಅಂಗೀಕರಿಸಿದ್ದ ಹೈಕೋರ್ಟ್ ಗುರುವಾರ ವಿಚಾರಣೆ ನಡೆಸಿ ಮಧ್ಯಂತರ ಆದೇಶ ಹೊರಡಿಸಿದೆ…

    April 8, 2016
    ...
    france-prostitutes-protest
    ವಿದೇಶ

    ‘ನಮಗೆ ಸಿಟ್ಟು ಬಂದಿದೆ; ಗ್ರಾಹಕರನ್ನು ಮುಟ್ಟಬೇಡಿ’: ಬೀದಿಗಳಿದ ಫ್ರಾನ್ಸ್ ಲೈಂಗಿಕ ಕಾರ್ಯಕರ್ತೆಯರು

    ಫ್ರಾನ್ಸ್ ಹೊಸ ಕಾನೂನೊಂದನ್ನು ಜಾರಿಗೆ ತರುವ ಮೂಲಕ ಮುಕ್ತ ದೇಶದ ‘ಸೆಕ್ಸ್’ ಉದ್ಯಮದಲ್ಲಿ ತಳಮಳ ಮೂಡಿಸಿದೆ. ಅಲ್ಲಿ, ಇನ್ನು ಮುಂದೆ ವೇಶ್ಯೆಯರಿಗೆ ಹಣ ನೀಡಿದರೆ ಕಾನೂನು ಬದ್ಧ ಅಪರಾಧ ಎಂದು ಹೊಸ ಕಾನೂನು ಘೋಷಿಸಿದೆ. ಈ ಮೂಲಕ ‘ಸೆಕ್ಸ್ ಟ್ರಾಫಿಕ್’ (ಲೈಂಗಿಕ ಚಟುವಟಿಕೆಗಳಿಗಾಗಿ ಮಾನವ ಕಳ್ಳ ಸಾಗಣೆ) ತಡೆಯಲು ಕಠಿಣ ಕಾನೂನು ಅನುಕೂಲವಾಗಲಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಬುಧವಾರದಿಂದ ದೇಶಾದ್ಯಂತ ಜಾರಿಗೆ ಬಂದಿರುವ ಕಾನೂನು, ವೇಶ್ಯೆಯರಿಗೆ ಹಣ ನೀಡಿ ಸಿಕ್ಕಿ ಬಿದ್ದರೆ ಮೊದಲ ಬಾರಿಗೆ (ಭಾರತೀಯ ರೂಪಾಯಿಗಳಲ್ಲಿ)..

    April 8, 2016

Top