An unconventional News Portal.

    ...
    56167fe9bec95-graphics-labels-edit-56167db879bfe
    ಮೀಡಿಯಾ 2.0

    ‘ಲೈಕಿ’ಗೊಂದು ಭಾವ ಬೆರೆಸಿ; ಈತ ಪಕ್ಕಾ ವ್ಯಾಪಾರಿ ಕಂಡ್ರಿ!

    ಜಗತ್ತಿನ ಅತೀ ಹೆಚ್ಚು ಬಳಕೆದಾರರನ್ನು ಹೊಂದಿರುವ ಸಾಮಾಜಿಕ ಜಾಲತಾಣ ಫೇಸ್ ಬುಕ್. ತನ್ನ ವಿಶಿಷ್ಟ, ಸರಳ ವ್ಯವಸ್ಥೆಯಿಂದಾಗಿ ಬಲುಬೇಗ ಬಳಕೆದಾರರನ್ನು ಸೆಳೆದದ್ದು ಇದರ ಹೆಗ್ಗಳಿಕೆ. ಇತ್ತೀಚಿನವರೆಗೂ ಫೇಸ್ ಬುಕ್ ನಲ್ಲಿ ಯಾವುದೇ ಪೋಸ್ಟ್ ಗೆ ಲೈಕ್ ಮತ್ತು ಕಮೆಂಟ್ ಮಾಡುವ ಅವಕಾಶ ಮಾತ್ರ ಇತ್ತು. ಆದರೆ ಈಗ ಇದಕ್ಕೆ ಇನ್ನೂ ಒಂದಷ್ಟು ಆಯ್ಕೆಗಳನ್ನು ಸೇರಿಸಿದೆ ಫೇಸ್ ಬುಕ್. ಲೈಕ್ ಜೊತೆಗೆ ನಿಮ್ಮ ಭಾವನೆಗಳನ್ನೂ ವ್ಯಕ್ತಪಡಿಸಲು ಐದು ಆಯ್ಕೆಗಳನ್ನು ನೀಡಿದೆ. ಅಲ್ಲಿ ನೀವು ಫೊಸ್ಟ್ ಗಳ ಮೇಲೆ ಆಕ್ರೋಷ..

    April 7, 2016
    ...
    ಉದ್ಯಮಿ ವಿಜಯ್ ಮಲ್ಯ.
    ದೇಶ

    ಪತ್ನಿ ಮಕ್ಕಳ ಆಸ್ತಿ ವಿವರವನ್ನೂ ಸಲ್ಲಿಸುವಂತೆ ಮಲ್ಯಗೆ ಸುಪ್ರಿಂ ಸೂಚನೆ

    ಪತ್ನಿ ಮತ್ತು ಮಕ್ಕಳೂ ಸೇರಿದಂತೆ ತಮ್ಮ ಹೆಸರಿನಲ್ಲಿ ಇರುವ ಸಂಪೂರ್ಣ ಆಸ್ತಿಪಾಸ್ತಿ ವಿವರಗಳನ್ನು ಏಪ್ರಿಲ್ 21ಕ್ಕೆ ಮುನ್ನ ಸಲ್ಲಿಸುವಂತೆ ಸುಪ್ರೀಂಕೋರ್ಟ್ ಗುರುವಾರ ಮದ್ಯ ಉದ್ಯಮಿ ವಿಜಯ್ ಮಲ್ಯಗೆ ನಿರ್ದೇಶನ ನೀಡಿದೆ. ವಿಜಯ್ ಮಲ್ಯ ಹಾಗೂ ಈಗ ಅಸ್ತಿತ್ವದಲ್ಲಿಲ್ಲದ ‘ಕಿಂಗ್ ಫಿಶರ್ ಏರ್ ಲೈನ್ಸ್’ನ ಆಸ್ತಿ ಪಾಸ್ತಿ ವಿವರಗಳನ್ನು ಘೋಷಿಸಬೇಕೆಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಇದೇ ವೇಳೆ, ನಾಲ್ಕು ಸಾವಿರ ಕೋಟಿ ರೂ. ಪಾವತಿಸುವ ಲಿಕ್ಕರ್ ಉದ್ಯಮ ದೊರೆ ವಿಜಯ್ ಮಲ್ಯ ಅವರ ಪ್ರಸ್ತಾವವನ್ನು ಬ್ಯಾಂಕುಗಳು ತಿರಸ್ಕರಿಸಿವೆ. ‘ನಮಗೆ..

    April 7, 2016
    ...
    protest-pu-freedom park
    ರಾಜ್ಯ

    ಉಗಾದಿಗೆ ನಿರ್ಧಾರ ಪ್ರಕಟಿಸಲಿರುವ ಸರಕಾರ: ಉಪನ್ಯಾಸಕರಿಗೆ ಸಿಹಿನೋ? ಕಹಿನೋ?

    ದ್ವಿತೀಯ ಪಿಯುಸಿ ಉಪನ್ಯಾಸಕರ ಪ್ರತಿಭಟನೆ ಗುರುವಾರ ಐದನೇ ದಿನಕ್ಕೆ ಕಾಲಿಟ್ಟಿದೆ. ಉಪನ್ಯಾಸಕರು ಮುಷ್ಕರ ಕೈ ಬಿಡುತ್ತಿಲ್ಲ; ಸರಕಾರ ಬೇಡಿಕೆಗಳಿಗೆ ಮಣಿಯುತ್ತಿಲ್ಲ. ಇವರ ನಡುವಿನ ಗುದ್ದಾಟಕ್ಕೆ ಪಿಯುಸಿ ಫಲಿತಾಂಶ ವಿಳಂಬವಾಗುವ ಸ್ಪಷ್ಟ ಸೂಚನೆ ಸಿಕ್ಕಿದೆ. ವೇತನ ತಾರತಮ್ಯ ನಿವಾರಣೆಯಾಗುವವರೆಗೂ ಹೋರಾಟ ಕೈಬಿಡುವುದಿಲ್ಲ ಎಂದು ಉಪನ್ಯಾಸಕರು ಪಟ್ಟು ಹಿಡಿದಿದ್ದಾರೆ. ಗುರುವಾರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಕರ್ ಪ್ರತಿಭಟನಾನಿರತ ಉಪನ್ಯಾಸಕರ ಸಭೆ ಕರೆದಿದ್ದರು. ಆದರೆ ಬೇಡಿಕೆಗಳ ಈಡೇರಿಕೆ ವಿಚಾರದಲ್ಲಿ ಸಹಮತ ಬರದ ಹಿನ್ನೆಲೆಯಲ್ಲಿ ಸಭೆ ವಿಫಲವಾಗಿದೆ. ಉಗಾದಿ ರಜೆ ದಿನ ಶುಕ್ರವಾರ ಮತ್ತೆ ಸಭೆಯನ್ನು..

    April 7, 2016
    ...
    ಬುಧವಾರ ಲಾರ್ನಾಕ ನ್ಯಾಯಾಲಯದಿಂದ ಹೊರಬಂದ ಆರೋಪಿ ಮುಸ್ತಫಾ 'ವಿಜಯಿ ಚಿನ್ಹೆ'ಯನ್ನು ಮಾಧ್ಯಮಗಳಿಗೆ ತೋರಿಸಿದ್ದು ಹೀಗೆ...(ಚಿತ್ರ: ಎಪಿ)
    ವಿದೇಶ

    ಪತ್ನಿ ಪ್ರೀತಿಗೆ ವಿಮಾನ ಅಪಹರಿಸಿದ್ದ ಮುಸ್ತಫಾ ಹಸ್ತಾಂತರಕ್ಕೆ ಸಿಪ್ರಸ್ ‘ಗ್ರೀನ್ ಸಿಗ್ನಲ್’!

    ಮಾರ್ಚ್ ತಿಂಗಳ ಕೊನೆಯಲ್ಲಿ ಈಜಿಪ್ಟ್ ವಿಮಾನ ಅಪಹರಿಸಿ ಸುದ್ದಿ ಕೇಂದ್ರಕ್ಕೆ ಬಂದಿದ್ದ ಸೈಫ್ ಎಲ್-ದೀನ್ ಮುಸ್ತಫಾನನ್ನು ತವರು ದೇಶಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಗೆ ಸಿಪ್ರಸ್ ಗುರುವಾರ ಚಾಲನೆ ನೀಡಿದೆ. ಸಿಪ್ರಸ್ ಸುದ್ದಿ ಸಂಸ್ಥೆ, ‘ಮೀನಾ’ ವರದಿ ಪ್ರಕಾರ, ಈಜಿಪ್ಟ್ ಅಧಿಕಾರಿಗಳು ಆರೋಪಿಯನ್ನು ಹಸ್ತಾಂತರಿಸುವಂತೆ ಕೋರಿಕೆ ಮುಂದಿಟ್ಟಿದ್ದಾರೆ. ಇದನ್ನು ಒಪ್ಪಿರುವ ಸಿಪ್ರಸ್ ಅಧಿಕಾರಿಗಳು ಮುಸ್ತಫಾನನ್ನು ವಾಪಾಸ್ ಈಜಿಪ್ಟ್ಗೆ ಕಳುಹಿಸಲು ರಾಜತಾಂತ್ರಿಕ ಪ್ರಕ್ರಿಯೆ ಆರಂಭಿಸಿದ್ದಾರೆ. ಅಲ್ಲಿಯವರೆಗೂ ಮುಸ್ತಫಾನನ್ನು ಪೊಲೀಸ್ ಕಸ್ಟಡಿಯಲ್ಲಿಯೇ ಇರಿಸಿಕೊಳ್ಳಲಾಗುವುದು ಎಂದು ವರದಿ ಹೇಳಿದೆ. ಮಾ. 29ರ ಮುಂಜಾನೆ ಈಜಿಪ್ಟ್ನ..

    April 7, 2016
    ...
    india-military-budget
    ದೇಶ

    ಸೇನೆಗಾಗಿ ಖರ್ಚು ಮಾಡುತ್ತಿರುವ ದೇಶಗಳ ಪೈಕಿ ಭಾರತ ಟಾಪ್ 15!

    ಜಗತ್ತಿನಾದ್ಯಂತ ಸೇನೆಗಾಗಿ ಖರ್ಚು ಮಾಡುತ್ತಿರುವ ದೇಶಗಳ ಪೈಕಿ ಭಾರತ ಟಾಪ್ 15ನೇ ಸ್ಥಾನಕ್ಕೇರಿದೆ. ‘ಸ್ಟಾಕ್ಹೋಮ್ ಇಂಟರ್ನ್ಯಾಷನಲ್ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್’ (SIPRI) ಬಿಡುಗಡೆ ಮಾಡಿರುವ ವಾರ್ಷಿಕ ವರದಿ ಪ್ರಕಾರ, ಜಗತ್ತಿನಾದ್ಯಂತ ಸೇನೆಗಾಗಿ ಅತೀ ಹೆಚ್ಚಿನ ಹಣವನ್ನು ವಿನಿಯೋಗಿಸುತ್ತಿರುವ ಮೊದಲ 15 ದೇಶಗಳ ಪೈಕಿ ಭಾರತದ ಪಾಲೇ ಶೇ. 3.1ರಷ್ಟಿದೆ. ಏಷಿಯಾ ಮತ್ತು ಆಸ್ಟ್ರೇಲಿಯಾ ಭೂಭಾಗದಲ್ಲಿ ಸೇನೆಗಾಗಿ ಮಾಡುತ್ತಿರುವ ಖರ್ಚಿನ ಪ್ರಮಾಣ 2015ರ ನಂತರ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಕಳೆದ ಸಾಲಿಗೆ ಹೋಲಿಸಿದರೆ, ಶೇ. 5.4ರಷ್ಟು ಹೆಚ್ಚಳ ಕಂಡು ಬಂದಿದೆ. 2015-..

    April 7, 2016
    ...
    amesty-int-death-sentences
    ಸುದ್ದಿ ಸಾರ

    ಜಗತ್ತಿನಾದ್ಯಂತ ಹೆಚ್ಚಿದ ಮರಣ ದಂಡನೆ ಶಿಕ್ಷೆ ಪ್ರಮಾಣ: ಆಮ್ನೆಸ್ಟಿ ಆತಂಕ

    ಕಳೆದ ವರ್ಷದಲ್ಲಿ ಜಗತ್ತಿನಾದ್ಯಂತ ವಿಧಿಸಿರುವ ಮರಣದಂಡನೆ ಶಿಕ್ಷೆ ಪ್ರಮಾಣದಲ್ಲಿ ಶೇ. 50 ರಷ್ಟು ಹೆಚ್ಚಾಗಿದೆ ಎಂದು ಲಂಡನ್ ಮೂಲದ ಮಾನವ ಹಕ್ಕು ಸಂಘಟನೆ ‘ಆಮ್ನೆಸ್ಟಿ ಇಂಟರ್ನ್ಯಾಷನಲ್’ ಬುಧವಾರ ಬಿಡುಗಡೆ ಮಾಡಿರುವ ತನ್ನ ವಾರ್ಷಿಕ ವರದಿಯಲ್ಲಿ ಕಳವಳ ವ್ಯಕ್ತಪಡಿಸಿದೆ. ಕಳೆದ ವರ್ಷವೊಂದರಲ್ಲಿಯೇ 1, 634 ಮರಣ ದಂಡನೆ ಶಿಕ್ಷೆಗಳನ್ನು ನೀಡಲಾಗಿದೆ. ಇದು 1989ರ ನಂತರ ದಾಖಲೆಯ ಹೆಚ್ಚಳ ಎಂದು ವರದಿ ದಾಖಲಿಸಿದೆ. ಇರಾನ್, ಪಾಕಿಸ್ತಾನ, ಸೌದಿ ಅರೇಬಿಯಾದ ಆಂತರಿಕ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಆಯಾ ಸರಕಾರಗಳು ವಿಧಿಸಿದ ಮರಣದಂಡನೆ ಸಂಖ್ಯೆ..

    April 7, 2016

Top