An unconventional News Portal.

    ...
    Untitled-1 copy
    ಟಿವಿ

    ಟ್ಯಾಗ್ ಲೈನ್ ಎಂಬ ಪ್ರಚಾರ ತಂತ್ರ ಮತ್ತು ಅಡಿಬರಹದ ಹಿಂದಿರುವ ಆಶಯ!

    ಟ್ಯಾಗ್ ಲೈನ್ ಅಥವಾ ಸ್ಲೋಗನ್ಸ್… ಯಾವುದೇ ಸಂಸ್ಥೆ ಜನರನ್ನು ತನ್ನತ್ತ ಸೆಳೆಯಲು ಬಳಸುವ ಆಕರ್ಷಕರ ವಾಕ್ಯಗಳು. ಜನರ ಮನಸ್ಸನ್ನು ಗೆಲ್ಲಬೇಕು ಎಂದುಕೊಂಡ ಎಲ್ಲಾ ಕಂಪೆನಿಗಳು ಇದನ್ನು ಬಳಸಿಯೇ ಬಳಸುತ್ತವೆ. ಇವತ್ತಿನ ಮುಕ್ತ ಮಾರುಕಟ್ಟೆಯ ಓಘದಲ್ಲಿ ಟ್ಯಾಗ್ ಲೈನ್ಸ್ ಅಗತ್ಯವಾಗಿರುವ ಮಾರುಕಟ್ಟೆಯ ತಂತ್ರ ಕೂಡ. ಕೆಲವೊಮ್ಮೆ ಕಂಪೆನಿಗಳಿಗಿಂತ ಟ್ಯಾಗ್ ಲೈನ್ ಗಳೇ ಜನಪ್ರಿಯತೆ ಗಳಿಸಿರುವ ಉದಾಹರಣೆಗಳೂ ಇವೆ. ಕೆಲವೊಮ್ಮೆ ಇದೇ ಅಡಿಬರಹಗಳು ನಗೆಪಾಟಲಿಗೆ ಈಡಾಗಿದ್ದೂ ಇದೆ. ಇದು ಹೆಚ್ಚು ಕಡಿಮೆ ಎಲ್ಲಾ ಉದ್ಯಮಗಳಿಗೆ ಅನ್ವಯಿಸುವ ಮಾತು. ಆದರೆ ಮಾಧ್ಯಮ ಸಂಸ್ಥೆಗಳ..

    April 6, 2016
    ...
    coal-india-import-reuters
    ರಾಜ್ಯ

    ವಿದ್ಯುತ್ ಬೆಲೆ ಏರಿಕೆ ಹಿಂದೆ ಕಲ್ಲಿದ್ದಲ ಖರೀದಿ ಹಗರಣ: ಗೊತ್ತಿದ್ದೂ ಜನ ಸಾಮಾನ್ಯರಿಗೆ ಬರೆ ಎಳೆದವರು ಯಾರು?

    ರಾಜ್ಯದಲ್ಲಿ ಇತ್ತೀಚೆಗಷ್ಟೆ ವಿದ್ಯುತ್ ಬೆಲೆ ಹೆಚ್ಚಿಸಲಾಯಿತು. “ವಿದ್ಯುತ್ ಉತ್ಪಾದನೆಗೆ ಬಳಕೆಯಾಗುತ್ತಿರುವ ಕಲ್ಲಿದ್ದಲ ಮೇಲಿನ ಸೆಸ್ ಹೆಚ್ಚಳದಿಂದಾಗಿ ಈ ನಿರ್ಧಾರಕ್ಕೆ ಬರಲಾಯಿತು,” ಎಂದು KERC ಅಧ್ಯಕ್ಷ ಶಂಕರ ಲಿಂಗೇಗೌಡ ಮಾ. 30ರಂದು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಆದರೆ, ಈ ಕಲ್ಲಿದ್ದಲ ಮೇಲಿನ ಸೆಸ್ ಹೆಚ್ಚಾಗಲು ಕಾರಣ ಏನು? ಎಂದು ಮಾಧ್ಯಮಗಳೂ ಪ್ರಶ್ನಿಸಲಿಲ್ಲ; ಶಂಕರ ಲಿಂಗೇಗೌಡರೂ ಬಾಯಿ ಬಿಡಲಿಲ್ಲ. ಕರ್ನಾಟಕ ಮಾತ್ರವಲ್ಲ, ದೇಶದ ಹಲವು ರಾಜ್ಯಗಳಲ್ಲಿ ವಿದ್ಯುತ್ ಬೆಲೆ ದಾಖಲೆ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ. ಇದಕ್ಕೆ ಅನುಮೋದನೆ ನೀಡುತ್ತಿರುವ ‘ಕೇಂದ್ರ ವಿದ್ಯುತ್ ನಿಯಂತ್ರಣ ಆಯೋಗ’ (CERC)..

    April 6, 2016
    ...
    8_China-Great-Green-Wall
    ಫೋಕಸ್

    ನಿಸರ್ಗದ ವಿರುದ್ಧ ನೈಸರ್ಗಿಕ ಗೋಡೆ ನಿರ್ಮಾಣ; 100 ಬಿಲಿಯನ್ ಗಿಡ ನೆಡಲು ಚೀನಾ ಪಣ!

    ಚೀನಾ ಅಂದ್ರೆ ನೆನಪಾಗೋದು ಮಹಾ ಗೋಡೆ. ವಿಶ್ವದ ಅದ್ಭುತಗಳಲ್ಲಿ ಒಂದಾಗಿರುವ ಗೋಡೆಯನ್ನು ಶತ್ರುಗಳ ದಾಳಿಯಿಂದ ರಕ್ಷಣೆ ಪಡೆಯಲು ನಿರ್ಮಾಣ ಮಾಡಲಾಗಿತ್ತು; ಹೀಗಂತ ಇತಿಹಾಸ ಹೇಳುತ್ತೆ. ಆದ್ರೆ ಈಗ ಮತ್ತೆ ಇಂತಾದ್ದೇ ಒಂದು ಗೋಡೆಯನ್ನು ನಿರ್ಮಿಸಲು ಹೊರಟಿದೆ ಚೀನಾ ಸರ್ಕಾರ. ಈ ಹೊಸ ಗೋಡೆಗೆ ಕಲ್ಲು, ಮಣ್ಣುಗಳನ್ನು ಬಳಸದಿರಲು ಚೀನಾ ಸರಕಾರ ನಿರ್ಧರಿಸಿದೆ. ಬದಲಿಗೆ, ಪಕ್ಕಾ ನೈಸರ್ಗಿಕ ಗೋಡೆ ಇದಾಗಲಿದೆ. ಇನ್ನೊಂದು ಅರ್ಥದಲ್ಲಿ ಇದನ್ನು ಚೀನಾದ ನೈಸರ್ಗಿಕ ಮಹಾ ಗೋಡೆ ಎನ್ನಬಹುದು. ಚೀನಾದಲ್ಲಿ ಹಸಿರು ಮಹಾ ಗೋಡೆ ನಿರ್ಮಾಣಕ್ಕೆ ಕಾರಣ ಗೋಬಿ ಮರುಭೂಮಿ. ವಿಶ್ವದ..

    April 6, 2016
    ...
    Panama-Papers-Bellary-indian express
    ರಾಜ್ಯ

    ‘ಪನಾಮ ಪೇಪರ್ಸ್’ಗೆ ಅಂಟಿದ ಬಳ್ಳಾರಿ ಅದಿರಿನ ನಂಟು: ರಾಜ್ಯದ ಉದ್ಯಮಿಗಳ ಹೆಸರು ಬಹಿರಂಗ

    ‘ಪನಾಮಾ ಪೇಪರ್ಸ್ಗೆ’ಗೆ ಸಂಬಂಧಪಟ್ಟಂತೆ ಹೊಸ ಪಟ್ಟಿಯೊಂದನ್ನು ‘ಇಂಡಿಯನ್ ಎಕ್ಸ್ ಪ್ರೆಸ್’ ಬುಧವಾರ ಬಿಡುಗಡೆ ಮಾಡಿದೆ. ಕರ್ನಾಟಕದ ಒಬ್ಬರು ಉದ್ಯಮಿಗಳು ಸೇರಿದಂತೆ ನೀರಾ ರಾಡಿಯಾ ಮತ್ತಿತರರ ಹೆಸರುಗಳನ್ನು ಪಟ್ಟಿ ಒಳಗೊಂಡಿದೆ. ‘ಕ್ರೌನ್ಮಾರ್ಟ್ ಇಂಟರ್ ನ್ಯಾಷನಲ್ ಗ್ರೂಪ್ ಲಿಮಿಟೆಡ್’ ಎಂಬ ಅಂತರಾಷ್ಟ್ರೀಯ ವ್ಯವಹಾರಗಳ ಕಂಪನಿಯೊಂದನ್ನು ನೀರಾ ರಾಡಿಯಾ 1994ರಲ್ಲಿ ಬ್ರಿಟಿಷ್ ವರ್ಜಿನ್ ದ್ವೀಪದಲ್ಲಿ ನೊಂದಣಿ ಮಾಡಿಸಿವುದನ್ನು ಸೋರಿಕೆಯಾಗಿರುವ ದಾಖಲೆಗಳು ಬಹಿರಂಗಪಡಿಸಿವೆಯೆಂದು ಪತ್ರಿಕೆ ವರದಿ ಮಾಡಿದೆ. ಕಂಪನಿ ನೊಂದಣಿ ಪತ್ರಗಳು ಮತ್ತು ಶೇರುಗಳ ಬಗ್ಗೆ ವಿವರಗಳಿವೆ. ಕಂಪನಿ ನಿರ್ದೇಶಕಿ ನೀರಾ ರಾಡಿಯಾರ ಹೆಸರಿನಲ್ಲೂ ಶೇರುಗಳಿದೆ. ಕಂಪನಿ ದಾಖಲೆಗಳಿಗೆ..

    April 6, 2016
    ...
    kamala-advani-no-more
    ದೇಶ

    ಪತಿ ಪ್ರಧಾನಿಯಾಗುವ ಕನಸನ್ನು ಹಿಂದೆಯೇ ಬಿಟ್ಟು ಹೋದರು ಕಮಲಾ ಅದ್ವಾನಿ

    ಬಿಜೆಪಿ ಹಿರಿಯ ನಾಯಕ ಲಾಲ್ ಕೃಷ್ಣ ಅದ್ವಾನಿ ಅವರ ಪತ್ನಿ ಕಮಲಾ ಅದ್ವಾನಿ ಹೃದಯಾಘಾತದಿಂದ ಬುಧವಾರ ಸಾವನ್ನಪ್ಪಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ದಿಲ್ಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. “ಹೃದಯಾಘಾತಕ್ಕೆ ಒಳಗಾದ ನಂತರ ಅವರನ್ನು ಆಸ್ಪತ್ರೆಗೆ ಕರೆತರಲಾಯಿತು. ಚಿಕಿತ್ಸೆಗೆ ಸ್ಪಂದಿಸದ ಅವರು ಅಸುನೀಗಿದರು,” ಎಂದು ವೈದ್ಯರು ತಿಳಿಸಿದ್ದಾರೆ. ಕಳೆದ ಎರಡು ಮೂರು ವರ್ಷಗಳಿಂದ ವಯೋ ಸಹಜ ಕಾಯಿಲೆಗಳಿಂದ ಅವರು ಬಳಲುತ್ತಿದ್ದರು. ಹಿಂದೆಯೂ ಅವರನ್ನು ಹಲವು ಬಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅವರಿಗೆ ಸುಮಾರು 85 ವರ್ಷ ವಯಸ್ಸಾಗಿತ್ತು. ಪತಿ..

    April 6, 2016
    ...
    CID Exclusive
    ರಾಜ್ಯ

    ‘ಜುಗಾರಿ ಕ್ರಾಸ್’ಗೆ ಬಂದು ನಿಂತ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ಯಾರು ಆ ‘ಬಾಸ್’?

    ವಿಧಾನಸೌಧದಿಂದ ಅನತಿ ದೂರದಲ್ಲಿರುವ ಸಿಐಡಿಯ ಬಿಳಿ ಬಣ್ಣದ ಭವ್ಯ ಕಟ್ಟಡದೊಳಗೆ ದೊಡ್ಡ ಮಟ್ಟದ ಸಂಚಲನ ಶುರುವಾಗಿದೆ. ಪಿಯುಸಿ ‘ರಸಾಯನ ಶಾಸ್ತ್ರ’ದ ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನಲೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳನ್ನು ತನಿಖೆ ನಡೆಸುತ್ತಿರುವ ಸಿಐಡಿ ತಂಡಕ್ಕೆ ಮಹತ್ವದ ಸುಳಿವು ಲಭ್ಯವಾಗಿದೆ. ಅದು ‘ಬಾಸ್’ ಅಲಿಯಾಸ್ ‘ಚೀಫ್’ ಎಂಬ ಅನಾಮಧೇಯ ವ್ಯಕ್ತಿಯ ಬಗೆಗಿನ ಸ್ಫೋಟಕ ಮಾಹಿತಿ. ಈ ಬಾರಿ ಇದು, ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ‘ಶಿವಕುಮಾರ್  ಎಂಬ ಕಿಂಗ್ ಪಿನ್’ಗೆ ಮಾತ್ರವೇ ಸೀಮಿತಗೊಳ್ಳುವ ‘ಹಗರಣ’ ಇದಲ್ಲ ಎಂಬುದು ತನಿಖೆಯನ್ನು ಮುನ್ನಡೆಸುತ್ತಿರುವ ಹಿರಿಯ ಅಧಿಕಾರಿಗಳಿಗೆ ಮನವರಿಕೆ ಆದಂತಿದೆ. ಆದರೂ,..

    April 6, 2016
    ...
    drought-maha-ipl-shift
    ಸುದ್ದಿ ಸಾರ

    ಬರ ಪರಿಹಾರದಲ್ಲಿ ಕುರುಡುತನ ಬೇಡ: ಕೇಂದ್ರಕ್ಕೆ ಸುಪ್ರಿಂ ಸೂಚನೆ

    ಬರ ಪೀಡಿತ ರಾಜ್ಯಗಳಿಗೆ ಸೂಕ್ತ ನೆರವು ನೀಡುವ ವಿಚಾರದಲ್ಲಿ ಸುಪ್ರಿಂ ಕೋರ್ಟ್ ಬುಧವಾರ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಬರ ಪೀಡಿತ ರಾಜ್ಯಗಳಿಗೆ ಕೇಂದ್ರ ಸರಕಾರ ಸಮರ್ಪಕ ನೆರವು ನೀಡುತ್ತಿಲ್ಲವೆಂದು ಆರೋಪಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ‘ಸ್ವರಾಜ್ ಅಭಿಯಾನ್’ ಸರಕಾರೇತರ ಸಂಸ್ಥೆ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಬರ ಪರಿಸ್ಥಿತಿಯ ಕುರಿತು ಸುಪ್ರಿಂ ಕೋರ್ಟ್ ವಿಚಾರಣೆ ನಡೆಸುತ್ತಿದೆ. ಮುಂಚಿನ ವಿಚಾರಣೆಗಳಲ್ಲಿ ದೇಶದಲ್ಲಿ ಬರ ಪರಿಸ್ಥಿತಿಯನ್ನು ಪರಿಗಣಿಸಿ ಆಹಾರ ಭದ್ರತೆ ಕಾಯ್ದೆಯನ್ನು ಅನುಷ್ಠಾನಕ್ಕೆ ತರದಿರುವ ರಾಜ್ಯಗಳನ್ನು ಕೋರ್ಟ್ ಟೀಕಿಸಿತ್ತು. ಕಳೆದ ಜನವರಿಯಲ್ಲಿ ಸುಪ್ರೀಂಕೋರ್ಟ್ ಬರಪೀಡಿತ..

    April 6, 2016
    ...
    pu paper-leak-arrest
    ಸುದ್ದಿ ಸಾರ

    ಮನೆ ಪಾಠದ ಉಪನ್ಯಾಸಕರ ವಿರುದ್ಧ ಕ್ರಮಕ್ಕೆ ಸೂಚನೆ

    ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ ಸಿಐಡಿ ಪೊಲೀಸರು ಬುಧವಾರ ಇನ್ನಿಬ್ಬರನ್ನು ಬಂಧಿಸಿದೆ. ಸದಾಶಿವ ನಗರದ ಪೂರ್ಣಪ್ರಜ್ಞಾ ಕಾಲೇಜಿನ ದೈಹಿಕ ಶಿಕ್ಷಕ ಅನಿಲ್, ಮತ್ತಿಕೆರೆ ಸರಕಾರಿ ಪ್ರೌಢ ಶಾಲೆಯ ದೈಹಿಕ ಶಿಕ್ಷಕ ಸತೀಶ್ ಬಂಧಿತರು. ಇವರಿಬ್ಬರು, ಪ್ರಶ್ನೆ ಪತ್ರಿಕೆಗಳ ಮಾರಾಟ ಜಾಲದಲ್ಲಿ ಭಾಗಿಯಾಗಿದ್ದರು. ಇದರಿಂದ ಕಮಿಷನ್ ಪಡೆಯುತ್ತಿದ್ದರು ಎಂದು ಸಿಐಡಿ ಡಿಐಜಿ ಸೋನಿಯಾ ನಾರಂಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ರಾಜ್ಯದಲ್ಲಿ ಸೋರಿಕೆಯಾದ ಪಿಯುಸಿ ರಸಾಯನ ಶಾಸ್ತ್ರ ವಿಭಾಗದ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಈವರೆಗೆ ಐವರ ಬಂಧನವಾದಂತಾಗಿದೆ. ಮನೆಪಾಠಕ್ಕೆ..

    April 6, 2016
    ...
    panama papers-hack
    ವಿದೇಶ

    ‘ಪನಾಮ ಪೇಪರ್ಸ್’: ‘ಸೋರಿಕೆ ಆಗಿಲ್ಲ; ಹ್ಯಾಕ್ ಮಾಡಲಾಗಿದೆ’!

    ‘ಪನಾಮ ಪೇಪರ್ಸ್’ ಪ್ರಕರಣದಲ್ಲಿ ಮೌನ ಮುರಿದಿರುವ ‘ಮೊಸಾಕ್ ಫೋನ್ಸೆಕಾ’ ಕಂಪನಿ, ತನ್ನ ದಾಖಲೆಗಳು ಸೋರಿಕೆಯಾಗಿಲ್ಲ, ಬದಲಿಗೆ ‘ಹ್ಯಾಕ್’ ಮಾಡಲಾಗಿದೆ ಎಂಬ ಗಂಭೀರ ಆರೋಪವನ್ನು ಮಾಡಿದೆ. ಕಂಪನಿ ಪಾಲುದಾರ ರೋಮನ್ ಫೋನ್ಸೆಕಾ ಮಾಧ್ಯಮಗಳ ಜತೆ ಬುಧವಾರ ಮಾತನಾಡಿದ್ದು, “ಕಾನೂನುಬದ್ಧವಾಗಿ ವ್ಯವಹಾರ ನಡೆಸಲಾಗಿದೆ. ಹೀಗಾಗಿ, ಈವರೆಗೆ ಯಾವುದೇ ದಾಖಲೆಗಳನ್ನು ಕಂಪನಿ ನಾಶ ಪಡಿಸಿಲ್ಲ. ದ್ವೀಪ ರಾಷ್ಟ್ರಗಳಲ್ಲಿ ವ್ಯವಹಾರ ನಡೆಸಲು ಕಂಪನಿ ನೆರವು ನೀಡುತ್ತಿತ್ತು” ಎಂದು ಸಮರ್ಥಿಸಿಕೊಂಡಿದ್ದಾರೆ. ಮೋಸಾಕ್ ಫೋನ್ಸೆಕಾ ಕಂಪನಿಯ ಸುಮಾರು 11.5 ಮಿಲಿಯನ್ ದಾಖಲೆಗಳನ್ನು ಅಮೆರಿಕಾ ಮೂಲದ ‘ಅಂತರಾಷ್ಟ್ರೀಯ..

    April 6, 2016
    ...
    mumbai-blast
    ದೇಶ

    ಮುಂಬೈ ಸ್ಫೋಟ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣ ಪ್ರಕಟಿಸಿದ ವಿಶೇಷ ನ್ಯಾಯಾಲಯ

    ಮುಂಬೈ ಸ್ಫೋಟ ಪ್ರಕರಣಗಳಿಗೆ ಸಂಬಂಧಿಸಿದಂತೆ ಬುಧವಾರ ಶಿಕ್ಷೆ ಪ್ರಮಾಣವನ್ನು ಮುಂಬೈ ವಿಶೇಷ ‘ಪೋಟಾ’ ನ್ಯಾಯಾಲಯ ಪ್ರಕಟಿಸಿದೆ. ಪ್ರಕರಣದ ಆರೋಪಿಗಳಾದ ಸಾಖಿಬ್ ನಚಾನ್, ಅತೀಫ್ ಮುಲ್ಲಾ ಹಾಗೂ ಹಸೀಬ್ ಮುಲ್ಲಾಗೆ 10 ವರ್ಷಗಳ ಸಜೆ ವಿಧಿಸಿ ನ್ಯಾಯಾಧೀಶ ಪಿ. ಅರ್. ದೇಶ್ಮುಖ್ ಆದೇಶ ಹೊರಡಿಸಿದ್ದಾರೆ. ಪ್ರಮುಖ ಆರೋಪಿ ಮುಝಾಮಿಲ್ ಅನ್ಸಾರಿಗೆ ಜೀವಾವಧಿ ಶಿಕ್ಷೆಯನ್ನು ನ್ಯಾಯಾಲಯ ಪ್ರಕಟಿಸಿದೆ. ಜತೆಗೆ, ವಾಹಿದ್ ಅನ್ಸಾರಿ ಹಾಗೂ ಫರಾನ್ ಖೋಟ್ ಅವರುಗಳನ್ನೂ ಜೀವಾವಧಿ ಶಿಕ್ಷೆಗೆ ಗುರಿಪಡಿಸಿಲಾಗಿದೆ. ಪ್ರಕರಣದ ಉಳಿದ ಆರೋಪಿಗಳು ಶಿಕ್ಷಾ ಅವಧಿಯನ್ನು ಈಗಾಗಲೇ..

    April 6, 2016

Top