An unconventional News Portal.

    ...
    west-indies-t20-world-cup-2016
    ಸುದ್ದಿ ಸಾಗರ

    ಟಿ-20 ವಿಶ್ವಕಪ್: ಕ್ರಿಕೆಟ್ ಸೋತಾಗ ಗೆದ್ದಿದ್ದು ವೆಸ್ಟ್ ಇಂಡೀಸ್!

    “ನಾನು ದೇವರಿಗೆ ಕೃತಜ್ಞತೆ ಸಲ್ಲಿಸಲು ಇಷ್ಟಪಡುತ್ತೇನೆ, ಯಾಕೆಂದರೆ ಅವನಿಲ್ಲದಿದ್ದರೆ ಯಾವುದೂ ಸಾಧ್ಯವಿಲ್ಲ. ನಮ್ಮ ತಂಡ ಜತೆ ಪಾಸ್ಟರ್ ಒಬ್ಬರು ಇದ್ದಾರೆ; ಅವರು ನಮಗಾಗಿ ಪ್ರಾರ್ಥನೆ ಸಲ್ಲಿಸುತ್ತಲೇ ಬಂದರು. ಇವತ್ತಿನ ಪ್ರದರ್ಶನ ನೋಡುತ್ತಿದ್ದರೆ, ಟಿ-20 ವಿಚಾರದಲ್ಲಿ ಕೆರೆಬಿಯನ್ ದೇಶದ ಸಾಮರ್ಥ್ಯ ಏನು ಎಂಬುದು ಗೊತ್ತಾಗುತ್ತದೆ. ಮುಂದಿನ ದಿನಗಳಲ್ಲಿ ನಮ್ಮ ಏಕ ದಿನ ಹಾಗೂ ಟೆಸ್ಟ್ ಆಟದಲ್ಲೂ ಸುಧಾರಣೆ ಕಾಣಲಿದ್ದೇವೆ. ನಾವು ಈ ಪಂದ್ಯಾವಳಿಯನ್ನು ಆಡುವುದರ ಬಗ್ಗೆಯೇ ಅನುಮಾನಗಳಿದ್ದವು. ಅದಕ್ಕೂ ನಮ್ಮ ಕ್ರಿಕೆಟ್ ಮಂಡಳಿಯಿಂದ ಅವಮರ್ಯಾದೆ ಅನುಭವಿಸಿದೆವು. ಬುದ್ದಿ ಇಲ್ಲದ ತಂಡ ಎಂದು..

    April 3, 2016
    ...
    Nyusu3
    ಮೀಡಿಯಾ 2.0

    ಸುದ್ದಿಗಳಿಗೆ ವಿಡಿಯೋ ಉಡುಗೆ; ಪೋಡ್ಕಾಸ್ಟ್ ಪತ್ರಿಕೋದ್ಯಮದ ಕಡೆಗೆ ಹೊಸ ನಡಿಗೆ!

    ಮೊಬೈಲ್ ಬಳಕೆಯ ಮಾದರಿಯನ್ನೇ ಬದಲಾಯಿಸಿದ್ದು ಸ್ಮಾರ್ಟ್ ಫೋನ್ ಗಳು. ಇವು ಮಾರುಕಟ್ಟೆಗೆ ಲಗ್ಗೆಇಟ್ಟ ಮೇಲೆ ನಿತ್ಯದ ಬದುಕೇ ಬದಲಾಗಿದೆ. ಇದರ ಪರಿಣಾಮ ಎಲ್ಲಾ ರಂಗಗಳಲ್ಲೂ ಆಗಿದೆ, ಆಗುತ್ತಿದೆ. ಇದಕ್ಕೆ ಪತ್ರಿಕೋದ್ಯಮ ಕೂಡ ಹೊರತಾಗಿಲ್ಲ. ಅಂತರ್ಜಾಲದಿಂದಾಗಿ ಪ್ರಮುಖ ವೃತ್ತಪತ್ರಿಕೆಗಳು, ಸುದ್ದಿ ವಾಹಿನಿಗಳು ತಮ್ಮ ಗ್ರಾಹಕರನ್ನು ಕಳೆದುಕೊಳ್ಳುತ್ತಿವೆ. ಕಳೆದುಹೋದ ಗ್ರಾಹಕರನ್ನು ಮಾಧ್ಯಮಗಳು ಆ್ಯಪ್ಗಳಲ್ಲಿ ಹುಡುಕುತ್ತಿವೆ. ಇಂದು ಮುಖ್ಯವಾಹಿನಿಯ ಮಾಧ್ಯಮಗಳು ನಿರಂತರ ಮತ್ತು ಕ್ಷಿಪ್ರವಾಗಿ ಜನರಿಗೆ ಸುದ್ದಿ ತಲುಪಿಸಲು ಆ್ಯಪ್ ಮೊರೆ ಹೋಗಿವೆ. ಕಡಿಮೆ ಸಮಯದಲ್ಲಿ ಹೆಚ್ಚಿನ ಸುದ್ದಿ ನೀಡಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿವೆ. ಈ ದಿಸೆಯಲ್ಲೇ ಮೂಡಿ ಬಂದಿರುವ ‘ನ್ಯೂಸು’..

    April 3, 2016
    ...
    1_northern-white-rhino-750x400
    ಫೋಕಸ್

    ಉಳಿದಿರೋದು ಒಬ್ಬನೇ ಬಿಳಿಯ; ಇವನನ್ನಾದರೂ ಉಳಿಸಿಕೊಳ್ಳುವ!

    ಅದೊಂದು ಬಿಳಿಯ ಘೇಂಡಾಮೃಗ. ಅದನ್ನು ಉಳಿಸಿಕೊಳ್ಳಲು ಅಲ್ಲಿ ನಾನಾ ಕಸರತ್ತುಗಳು ನಡೆಸಲಾಗುತ್ತಿದೆ. ಅದರ ರಕ್ಷಣೆಗಾಗಿ ಇಬ್ಬರು ಶಸ್ತ್ರಸಜ್ಜಿತ ಕಾವಲುಗಾರರು ದಿನದ 24 ಗಂಟೆಯೂ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯುತ್ತಿದ್ದಾರೆ. ಅವರ ಸಾಹಸ ಕೇವಲ ಒಂದು ಘೇಂಡಾಮೃಗದ ರಕ್ಷಣೆ ಮಾತ್ರ ಸೀಮಿತವಾಗಿಲ್ಲ. ಬದಲಿಗೆ, ಭೂಮಿ ಮೇಲಿನ ಒಂದು ಸಂತತಿಯ ಅಳಿವು ಮತ್ತು ಉಳಿವಿನ ಪ್ರಶ್ನೆ ಇದು. ಕೊಂಚ ಅಚ್ಚರಿ ಅನ್ನಿಸಿದರೂ, ಇಡೀ ಭೂಮಿಯ ಮೇಲೆ ಸದ್ಯ ಉಳಿದಿರುವುದು ಏಕೈಕ ಬಿಳಿ ಘೇಂಡಾಮೃಗ ರಕ್ಷಣೆಗಾಗಿ ನಡೆಯುತ್ತಿರುವ ವಿಚಿತ್ರ ಕತೆ. ಮನುಷ್ಯ ಹೆಚ್ಚೆಹೆಚ್ಚು ನಾಗರೀಕತೆ ಕಡೆಗೆ ವಾಲುತ್ತಿದ್ದಂತೆ ಪರಿಣಾಮ..

    April 3, 2016
    ...
    Pak media
    ಸುದ್ದಿ ಸಾರ

    ಭಾರತೀಯ ಮಾಧ್ಯಮಗಳ ಹಾದಿ ಹಿಡಿಯಬೇಡಿ ಎಂದ ಪಾಕಿಸ್ತಾನ ಮಾಧ್ಯಮ ಪ್ರಾಧಿಕಾರ!

    ಬ್ರೂಸೆಲ್ಸ್ ದಾಳಿ ನಡೆದ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಮಾಧ್ಯಮಗಳು ತೋರಿದ ಸಂಯಮವನ್ನು ಪಾಲಿಸಬೇಕೇ ಹೊರತು, ವ್ಯಾಪಾರೀಕರಣದ ಹಿಂದೆ ಬಿದ್ದಿರುವ ಭಾರತದ ಮಾಧ್ಯಮಗಳ ಹೆಜ್ಜೆ ಗುರುತುಗಳನ್ನಲ್ಲ. ಈ ಮಾತನ್ನು ನೀವು ಒಪ್ಪುತ್ತೀರೋ? ಬಿಡುತ್ತೀರೋ, ಅದಕ್ಕೂ ಮೊದಲು ಹೀಗೆ ಹೇಳಿದವರು ಯಾರು ಅಂತ ಕೇಳಿ ಬಿಡಿ. ಹೀಗಂತ ಹೇಳಿರೋದು ಇಸ್ಲಮಾಬಾದ್ ನಲ್ಲಿರುವ ಪಾಕಿಸ್ತಾನ ಎಲೆಕ್ಟ್ರಾನಿಕ್ ಮಾಧ್ಯಮ ನಿಯಂತ್ರಣ ಪ್ರಾಧಿಕಾರ. ಇಂಥಹದ್ದೊಂದು ನಿರ್ದೇಶನವನ್ನು ಪ್ರಾಧಿಕಾರ ಪಾಕಿಸ್ತಾನ ಮಾಧ್ಯಮಗಳಿಗೆ ನೀಡಿದೆ. ಲಾಹೋರ್ ದಾಳಿಯಾದ ಬೆನ್ನಿಗೇ ಇಂತಹದ್ದೊಂದು ನಿರ್ದೇಶನ ಹೊರ ಬಿದ್ದಿದೆ. ಲಾಹೋರ್, ಇಸ್ಲಾಮಾಬಾದ್, ಮತ್ತು..

    April 3, 2016
    ...
    atta-pathanjali-ramdev
    ಸುದ್ದಿ ಸಾರ

    ಪತಂಜಲಿ ನೂಡಲ್ಸ್ ಕೂಡ ಬಲು ಡೇಂಜರ್ ಅಂತೆ: ಎಫ್‍ಎಸ್‍ಡಿಎ ವರದಿ

    ಯೋಗ ಗುರು ಬಾಬರಾಮ್ದೇವ್ ಒಡೆತನದ ಪತಾಂಜಲಿ ಅಟಾ ನ್ಯೂಡೆಲ್ಸ್ ಆರೋಗ್ಯಕ್ಕೆ ಹಾನಿಕಾರಕ ಎಂಬ ವಿಚಾರ ಬಹಿರಂಗವಾಗಿದೆ. ನೆಸ್ಲೆ ಕಂಪನಿಯ ‘ಮ್ಯಾಗಿ’ ಆರೋಗ್ಯ ಹಾನಿಕರ ಎಂಬ ಹಿನ್ನೆಲೆಯಲ್ಲಿ ದೇಶಾದ್ಯಂತ ಇದರ ಮಾರಾಟಕ್ಕೆ ನಿಷೇಧ ಹೇರಲಾಗಿತ್ತು. ಇದೀಗ, ಬಾಬಾರಾಮ್‍ದೇವ್ ಒಡೆತನದ ಪತಂಜಲಿ ನ್ಯೂಡೆಲ್ಸ್‍ನಲ್ಲಿ ಮಿಶ್ರಣ ಮಾಡಿರುವ ಬೂದಿ ಹಾಗೂ ಟೇಸ್ಟ್ ಮೇಕರ್(ರುಚಿ ವರ್ಧಕ) ‘ಮ್ಯಾಗಿ ನೂಡ್ಯೆಲ್ಸ್‍’ಗಿಂತಲೂ ಹಾನಿಕಾರಕ ಎಂದು ಉತ್ತರಪ್ರದೇಶದ ಆರೋಗ್ಯ ಸುರಕ್ಷತೆ ಮತ್ತು ಔಷಧ ನಿಯಂತ್ರಣಾಧಿಕಾರ(ಎಫ್‍ಎಸ್‍ಡಿಎ) ಸಂಸ್ಥೆ ಹೇಳಿದೆ. ಪತಾಂಜಲಿ ನ್ಯೂಡೆಲ್ಸ್ ಸೇವನೆಯಿಂದ ಆರೋಗ್ಯದ ಮೇಲೆ ಹೆಚ್ಚಿನ ದುಷ್ಪರಿಣಾಮ ಬೀರುತ್ತದೆ…

    April 3, 2016
    ...
    cm-siddaramayya-video-conference
    ಸುದ್ದಿ ಸಾರ

    ರಜೆ ದಿನ ಸಿಎಂ ವಿಡಿಯೋ ಕಾನ್ಫರೆನ್ಸ್; ಬರ ಕಾಮಗಾರಿ ಲೋಪದ ಹೊಣೆ ಡಿಸಿಗಳಿಗೆ ವರ್ಗಾವಣೆ

    ಬರ ಪರಿಹಾರ ಕಾಮಗಾರಿಯಲ್ಲಿ ಲೋಪವಾದರೆ ಜಿಲ್ಲಾಧಿಕಾರಿಗಳೇ ನೇರ ಹೊಣೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಸಿದ್ದಾರೆ. ಸರಕಾರಿ ರಜೆ ದಿನ ಭಾನುವಾರ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಉತ್ತರ ಕರ್ನಾಟಕದ 12 ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಪಂ ಸಿಇಒಗಳ ಜತೆ ವಿಡಿಯೋ ಸಂವಾದ ನಡೆಸಿದ ಸಿಎಂ, ಬರ ಪರಿಹಾರ ಕಾಮಗಾರಿಗೆ ಹಣದ ಕೊರತೆ ಇಲ್ಲ. ಸಮರೋಪಾದಿಯಲ್ಲಿ ಕೆಲಸ, ಕಾರ್ಯಗಳನ್ನು ಕೈಗೊಳ್ಳಬೇಕೆಂದು ತಾಕೀತು ಮಾಡಿದರು. ಜಿಲ್ಲಾಧಿಕಾರಿಗಳು, ಸಿಇಒಗಳು, ಕಂದಾಯ, ಆರೋಗ್ಯ ಮತ್ತಿತರ ಇಲಾಖೆ ಅಧಿಕಾರಿಗಳು ಪ್ರತಿ ದಿನ ಕುಡಿಯುವ ನೀರು, ಗೋವುಗಳಿಗೆ ಮೇವು..

    April 3, 2016
    ...
    sigaranahalli-hasana-thehindu-revanna
    ಸುದ್ದಿ ಸಾರ

    ‘ದಿ ಹಿಂದೂ’ ಪತ್ರಿಕೆಯ ಸಂಪಾದಕರಿಗೆ ದೇವೇಗೌಡರ ಪುತ್ರ ಪತ್ರ ಬರೀತಾರಂತೆ!

    ಹಾಸನ ಜಿಲ್ಲೆಯ ಸಿಗರನಹಳ್ಳಿ ಪ್ರಕರಣದ ಹಿನ್ನೆಲೆಯಲ್ಲಿ ಭಾನುವಾರ ಹಾಸನದಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದ ಶಾಸಕ ರೇವಣ್ಣ ‘ದಿ ಹಿಂದೂ’ ಪತ್ರಿಕೆ ವಿರುದ್ಧ ತಮ್ಮ ಕೋಪತಾಪವನ್ನು ಹೊರಹಾಕಿದ್ದಾರೆ. ಜೆಡಿಎಸ್ ರಾಷ್ಟ್ರಾದ್ಯಕ್ಷ, ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಅವರ ಹುಟ್ಟೂರು ಹರದನಹಳ್ಳಿಯಿಂದ ಕೇವಲ 2. ಕಿ.ಮೀ ಅಂತರದಲ್ಲಿರುವ ಸಿಗರನಹಳ್ಳಿ ಗ್ರಾಮ, ಮೇಲ್ವರ್ಗದ ಒಕ್ಕಲಿಗರು ಹಾಗೂ ದಲಿತರ ನಡುವಿನ ಗಲಾಟೆಯಿಂದ ಕೆಳೆದ ಮೂರ್ನಾಲ್ಕು ದಿನಗಳಿಂದ ಸುದ್ದಿ ಕೇಂದ್ರದಲ್ಲಿದೆ. ಗ್ರಾಮದ ಬಸವೇಶ್ವರ ದೇವರ ಜಾತ್ರಿ ವಿಚಾರದಲ್ಲಿ ಏ. 1ರಂದು ಗ್ರಾಮದ ಮೇಲ್ವರ್ಗದ ಜನ ಇಬ್ಬರು ಪತ್ರಕರ್ತರು ಸೇರಿದಂತೆ ಅಧಿಕಾರಿಗಳ..

    April 3, 2016
    ...
    yemen-priest-fr-tom.jpg.image.784.410
    ಸುದ್ದಿ ಸಾರ

    ಉಗ್ರರಿಂದ ಅಪಹರಣಕ್ಕೊಳಗಾಗಿದ್ದ ಪಾದ್ರಿ ಶೀಘ್ರ ಬಿಡುಗಡೆ; ಕರ್ನಾಟಕದಲ್ಲೂ ಸೇವೆ ಸಲ್ಲಿಸಿದ್ದ ಫಾದರ್

    ಉಗ್ರರಿಂದ ಅಪಹರಣಕ್ಕೊಳಗಾಗಿದ್ದ ಕರ್ನಾಟಕದಲ್ಲೂ ಕಾರ್ಯ ನಿರ್ವಹಿಸಿದ್ದ ಕೇರಳ ಮೂಲದ ಪಾದ್ರಿ ಫಾದರ್ ಟಾಮ್ ಉಳುನ್ನಲಿಲ್ ಶೀಘ್ರ ಬಿಡುಗಡೆಯಾಗುವ ಭರವಸೆ ದೊರೆತಿದೆ. ಹೀಗಂಥ ಕ್ಯಾಥೋಲಿಕ್ ಸಂಘಟನೆ, ವಿದೇಶಾಂಗ ಸಚಿವರ ಮಾತುಗಳನ್ನು ಉಲ್ಲೇಖಿಸಿ ಹೇಳಿಕೆ ಬಿಡುಗಡೆ ಮಾಡಿದೆ. ಇವರು ಕಳೆದ ತಿಂಗಳು ಯೆಮೆನ್ನಲ್ಲಿ ಬಂಧೂಕುದಾರಿಗಳಿಂದ ಅಪಹರಣಕ್ಕೆ ಒಳಗಾಗಿದ್ದರು. ಆದರೆ ಇದರ ಹೊಣೆಯನ್ನು ಯಾರೂ ಹೊತ್ತುಕೊಂಡಿರಲಿಲ್ಲ. ಫಾದರ್ ಟಾಮ್ ಉಳುನ್ನಲಿಲ್ ಅವರನ್ನು ಕಳೆದ ತಿಂಗಳು ದಕ್ಷಿಣ ಯೆಮೆನ್ನಿನ ಅಡೆನ್ ಪಟ್ಟದಿಂದ ಬಂಧೂಕುದಾರಿಗಳು ಅಪಹರಿಸಿದ್ದರು. ಉಳುನ್ನಲಿಲ್ ಕಾರ್ಯ್ ನಿರ್ವಹಿಸುತ್ತಿದ್ದ ವೃದ್ಧಾಶ್ರಮದ ಮೇಲೆ ದಾಳಿ ನಡೆಸಿದ ಬಂಧೂಕುದಾರಿಗಳು..

    April 3, 2016

Top