An unconventional News Portal.

  ...

  ಪತ್ರಕರ್ತರಿಗೆ ರಾಜಧಾನಿಯಲ್ಲಿ ಹೊಡೆತ ಬಿದ್ರೆ ಮಾತ್ರ ಅನ್ಯಾಯನಾ ರಂಗಣ್ಣ?

  ಮಾಧ್ಯಮಗಳ ಜತೆ ಸಂಬಂಧ ಹಳಸಿದರೆ ಏನಾಗಬಹುದು ಎಂಬುದರ ಹೊಸ ಸ್ಯಾಂಪಲ್ ಒಂದು ಶುಕ್ರವಾರ ರಾತ್ರಿ ಕರ್ನಾಟಕದ ಜನರಿಗೆ ಪರಿಚಯಿಸಲಾಯಿತು. ಈ ಬಾರಿ ಸುದ್ದಿಕೇಂದ್ರದಲ್ಲಿ ಇರುವವರು ಪಬ್ಲಿಕ್ ಟಿವಿ ಮುಖ್ಯಸ್ಥ ಎಚ್. ಆರ್. ರಂಗನಾಥ್ ಹಾಗೂ ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮಿ. ರಂಗಣ್ಣ ನೇತೃತ್ವದ ಪಬ್ಲಿಕ್ ಟಿವಿ ಮತ್ತು ರಾಘವೇಶ್ವರ ಸ್ವಾಮಿ ನಡುವೆ ಎರಡು ವರ್ಷಗಳಿಂದ ನಡೆಯುತ್ತಿದ್ದ ಶೀತಲ ಸಮರ ತಾರಕ್ಕೇರಿದೆ. ಇದಕ್ಕೆ ಕಾರಣ ಗುರುವಾರ ಸೆಷನ್ಸ್ ಕೋರ್ಟ್ ರಾಘವೇಶ್ವರ ಅತ್ಯಾಚಾರ ಆರೋಪ ಪ್ರಕರಣದಲ್ಲಿ ನೀಡಿದ ಆದೇಶ. ಸ್ವಾಮಿ ವಿರುದ್ಧ […]

  April 1, 2016
  ...

  ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ: ಬೇಟೆ ಆರಂಭಿಸಿದ ಸಿಐಡಿ

  ಪಿಯುಸಿ ರಸಾಯನಶಾಸ್ತ್ರ ಪಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ತನಿಖೆಯಲ್ಲಿ ಕೊನೆಗೂ ಸಿಐಡಿ ಪೊಲೀಸರು ಬೇಟೆ ಆರಂಭಿಸಿದ್ದಾರೆ. ‘ಶಿಕ್ಷಣ ಕ್ಷೇತ್ರದ ಮಾಫಿಯಾಗಳ ತವರುಮನೆ’, ಬೆಂಗಳೂರಿನ ರಾಜಾಜಿನಗರದಿಂದ ಇಬ್ಬರು ಉಪನ್ಯಾಸಕರು ಹಾಗೂ ಓಬಳೇಶ್ ಎಂಬಾತನನ್ನು ಶುಕ್ರವಾರ ರಾತ್ರಿ 10. 30ರ ಸುಮಾರಿಗೆ ವಿಚಾರಣೆಗಾಗಿ ಕರೆತಂದಿದ್ದಾರೆ. ಸಿಐಡಿ ಗುರುತಿಸಿರುವ ಆರೋಪಿ ಕಿರಣ್ ಸಹಚರ ಎನ್ನಲಾಗುತ್ತಿರುವ ಓಬಳೇಶ್ ಎಂಬಾತನ್ನು ಸಿಐಡಿ ಕೇಂದ್ರ ಕಚೇರಿಯಲ್ಲಿ ತೀವ್ರ ವಿಚಾರಣೆಗೆ ಗುರಿಪಡಿಸಿದ್ದಾರೆ ಎಂದು ಬಲ್ಲ ಮೂಲಗಳು ಖಚಿತಪಡಿಸಿವೆ. ಮುಂದುವರಿದ ವಿಚಾರಣೆ: ರಾಜಾಜಿನಗರದ ಕಿರಣ್ ಎಂಬಾತ ಹಿಂದಿನಿಂದಲೂ ಪ್ರಶ್ನೆ ಪತ್ರಿಕೆಗಳನ್ನು ಸೋರಿಕೆ ಮಾಡುವ ದಂಧೆ ನಡೆಸುತ್ತಿದ್ದ […]

  April 1, 2016
  ...

  ಅಸ್ಸಾಂ ಅತಂತ್ರ; ಕೇರಳದಲ್ಲಿ ಕೆಂಬಾವುಟ; ತಮಿಳುನಾಡು; ಪ.ಬಂಗಾಳದಲ್ಲಿ ಯಥಾಸ್ಥಿತಿ: ಇಂಡಿಯಾ ಟಿವಿ- ಸಿ ವೋಟರ್ ಸಮೀಕ್ಷೆ

  ಅಸ್ಸಾಂ ಅತಂತ್ರ, ಕೇರಳದಲ್ಲಿ ಎಡಪಕ್ಷಗಳ ಮೈತ್ರಿಕೂಟ, ಪಶ್ಚಿಮ ಬಂಗಾಳ ಹಾಗೂ ತಮಿಳುನಾಡಿನಲ್ಲಿ ಯಥಾಸ್ಥಿತಿಯ ಮುಂದುವರಿಕೆ… ಇದು ನಾಲ್ಕು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ ಮತದಾನ ಪೂರ್ವ ಸಮೀಕ್ಷೆಯ ಮುಖ್ಯಾಂಶಗಳು. ಇಂಡಿಯಾ ಟಿವಿ- ಸಿ ವೋಟರ್ ಜಂಟಿ ಸಮೀಕ್ಷೆಯ ವರದಿ ಶುಕ್ರವಾರ ರಾತ್ರಿ ಹೊರಬಿದ್ದಿದೆ. ಸದರಿ ರಾಜ್ಯಗಳಲ್ಲಿ ಪಕ್ಷಗಳ ಬಲಾಬಲ ಹೀಗಿದೆ: ಅಸ್ಸಾಂ ಬಿಜೆಪಿ ಮೈತ್ರಿ ಪಕ್ಷಗಳು ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿವೆ. 126 ಸದಸ್ಯ ಬಲದ ವಿಧಾನ ಸಭೆಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿ+ ಗೆ, 55 ಹಾಗೂ ಕಾಂಗ್ರೆಸ್ […]

  April 1, 2016
  ...

  ಕೋಲ್ಕತ್ತಾ ಪ್ಲೈ ಓವರ್ ಕುಸಿತ: ರಾಜಕೀಯ ಬೇಳೆ ಬೇಯಿಸುವತ್ತ ಎಲ್ಲರ ಚಿತ್ತ!

  ಕೋಲ್ಕತ್ತಾದ ಬುರ್ರಾ ಬಝಾರ್ ಈಗ ರಾಜಕೀಯ ಚದುರಂಗದಾಟದಲ್ಲಿ ಪ್ರಮುಖ ಪಾತ್ರದಾರಿಯಾಗಿ ಬದಲಾಗಿದೆ. ಒಟ್ಟು ಆರು ಹಂತಗಳಲ್ಲಿ ನಡೆಯಲಿರುವ ಪಶ್ಚಿಮ ಬಂಗಾಳ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ವಿವೇಕಾನಂದ ರಸ್ತೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಮೇಲ್ಸೇತುವೆ ಕುಸಿತ ಪ್ರಕರಣ ರಾಜಕೀಯ ಪಕ್ಷಗಳಿಗೆ ಹೊಸ ತಂತ್ರ ಹೆಣೆಯಲು ಅನುವು ಮಾಡಿಕೊಡುತ್ತಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಮೇಲ್ಸೇತುವೆ ಕುಸಿತ ಪ್ರಕರಣದಲ್ಲಿ ನಡೆದ ಪ್ರಮುಖ ಘಟನಾವಳಿಗಳ ಮೇಲೊಂದು ಪಕ್ಷಿನೋಟಿ ಇಲ್ಲಿದೆ:   ಬಿಜೆಪಿ ರಾಜ್ಯಾಧ್ಯಕ್ಷ ಅಮಿತ್ […]

  April 1, 2016

Top