An unconventional News Portal.

    ...
    rajdeep-twitter-last-day
    ದೇಶ

    ‘ಸಾಮಾಜಿಕ’ ಅವಹೇಳನ: ‘ಟ್ವಿಟರ್’ಗೆ ಪತ್ರಕರ್ತ ರಾಜ್ದೀಪ್ ಗುಡ್ ಬೈ!

    ಸಾಮಾಜಿಕ ಜಾಲತಾಣಗಳಲ್ಲಿ ಶನಿವಾರ ನಡೆದ ಬೆಳವಣಿಗೆಯೊಂದರಲ್ಲಿ, ‘ಇಂಡಿಯಾ ಟುಡೆ’ ಸಂಪಾದಕೀಯ ವಿಭಾಗದ ಹಿರಿಯ ಪತ್ರಕರ್ತ ರಾಜ್ದೀಪ್ ಸರ್ದೇಸಾಯಿ, ‘ಟ್ವಿಟರ್’ನಿಂದ ಹೊರ ಬಂದಿದ್ದಾರೆ. ದೇಶದ ನೇರ ನುಡಿಯ ಪತ್ರಕರ್ತರ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದ ರಾಜ್ದೀಪ್, ನರೇಂದ್ರ ಮೋದಿ ಅಭಿಮಾನಿಗಳಿಂದ ಆಗಾಗ್ಗೆ ಟೀಕೆಗೆ ಒಳಗಾಗುತ್ತಲೇ ಬಂದವರು. ಈ ಹಿಂದೆ, ‘ಟ್ವಿಟರ್ ಮೂಲಕ ವೈಯುಕ್ತಿಕ ಅಭಿಪ್ರಾಯಗಳಿಗೆ ಕೀಳು ಮಟ್ಟದ ಪ್ರತಿಕ್ರಿಯೆ ಮಾಡುತ್ತಿರುವವರು, ದೇಶದ ನಾಯಕ ನರೇಂದ್ರ ಮೋದಿ ಅವರ ಅಭಿಮಾನಿಗಳು’ ಎಂದು ನೇರವಾಗಿಯೇ ಆರೋಪ ಮಾಡಿದ್ದರು. ಇದೀಗ, ಅವರು ಟ್ವಿಟರ್ ಬಳಕೆಯನ್ನು ನಿಲ್ಲಿಸುವುದಾಗಿ ಹೇಳಿದ್ದಾರೆ…

    April 30, 2016
    ...
    sonia narang-1
    ಸುದ್ದಿ ಸಾರ

    ಕೇಂದ್ರ ಸೇವೆಗೆ ಹೊರಟು ನಿಂತ ಸೋನಿಯಾ ನಾರಂಗ್

    ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಡಿಐಜಿ ಸೋನಿಯಾ ನಾರಂಗ್ ರಾಷ್ಟ್ರೀಯ ತನಿಖಾ ದಳದ(ಎನ್‍ಐಎ) ಎಸ್‍ಪಿ ಹುದ್ದೆ ಹೊಣೆಯನ್ನು ವಹಿಸಿಕೊಳ್ಳಲಿದ್ದಾರೆ. ಸೋನಿಯಾ ನಾರಂಗ್ ಕೇಂದ್ರ ಸೇವೆಗೆ ತೆರಳಲು ಸಿದ್ಧವಾಗಿದ್ದು, ವಿಚಾರದ ಬಗ್ಗೆ ಕೇಂದ್ರ ಗೃಹ ಸಚಿವಾಲಯವು ಈಗಾಗಲೇ ರಾಜ್ಯ ಗೃಹ ಇಲಾಖೆ ಜತೆ ಚರ್ಚೆ ನಡೆಸಿದೆ. ನಾರಂಗ್ ಕಾರ್ಯದಕ್ಷತೆ ಆಧಾರದ ಮೇಲೆ ಎನ್‍ಐಎಗೆ ನೇಮಕ ಮಾಡಲು ಮುಂದಾಗಿದೆ ಎಂದು ಮೂಲಗಳು ಮಾಹಿತಿ ನೀಡಿದೆ. ಈ ಬಗ್ಗೆ ಪ್ರತಿಕ್ರಿಯಸಿದ ಅವರು, “ಕೇಂದ್ರ ಗೃಹಇಲಾಖೆಯ..

    April 30, 2016
    ...
    police-yoga-delhi
    ಸುದ್ದಿ ಸಾರ

    ದಿಲ್ಲಿ ಪೊಲೀಸರಿಗೆ ಯೋಗಾಭ್ಯಾಸ ಕಡ್ಡಾಯ: ನೆರವಿಗೆ ಆಯುಷ್ ಪತ್ರ

    ಲಾಠಿ ಹಿಡಿದು ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸರು ದೇಹವನ್ನ ಬಗ್ಗಿಸಿ ಯೋಗ ಮಾಡುವುದನ್ನು ನೋಡುವ ಕಾಲ ಹತ್ತಿರದಲ್ಲೇ ಇದೆ. ಹೆಚ್ಚುತ್ತಿರುವ ಕೆಲಸದೊತ್ತಡದಿಂದ ಪೊಲೀಸರು ಖಿನ್ನತೆಗೆ ಒಳಗಾಗುತ್ತಿದ್ದು, ಇದನ್ನ ತಪ್ಪಿಸಲು ಯೋಗ ಅಭ್ಯಾಸ ಮಾಡುವಂತೆ ದಿಲ್ಲಿ ಪೊಲೀಸ್ ಇಲಾಖೆಗೆ ಕೇಂದ್ರ ಆಯುಷ್ ಸಚಿವಾಲಯದಿಂದ ಪತ್ರ ಬಂದಿದೆ. ಇತ್ತೀಚೆಗೆ ಪೊಲೀಸರು ಖಿನ್ನತೆಗೆ ಒಳಗಾಗುತ್ತಿರುವ ಪ್ರಕರಣಗಳು ಹೆಚ್ಚಾಗಿ ಕಂಡು ಬಂದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಗಳಲ್ಲಿ ಯೋಗ ತರಬೇತಿ ತರಗತಿಗಳನ್ನ ತೆರೆಯುವ ಆಶಯವನ್ನ ಇಲಾಖೆ ವ್ಯಕ್ತಪಡಿಸಿದೆ. ಮೂಲಗಳ ಪ್ರಕಾರ, ಬಾಬಾ ರಾಮ್ ದೇವ್ ಅವರನ್ನ..

    April 30, 2016
    ...
    D-V-Sadananda-Gowda
    ಸುದ್ದಿ ಸಾರ

    ಮೂರು ಕೋಟಿ ಪ್ರಕರಣಗಳ ಬಾಕಿ ಉಳಿಸಿಕೊಂಡಿರುವ ನ್ಯಾಯಾಲಯಗಳು

    ದೇಶದ 24 ಹೈಕೋರ್ಟ್ ಹಾಗೂ ಹಲವು ಕೆಳ ನ್ಯಾಯಾಲಯಗಳಲ್ಲಿ 3 ಕೋಟಿಗೂ ಹೆಚ್ಚು ಪ್ರಕರಣಗಳು ಇತ್ಯರ್ಥವಾಗಲು ಬಾಕಿ ಇವೆ ಎಂದು ರಾಜ್ಯಸಭೆಗೆ ಶನಿವಾರ ಕೇಂದ್ರ ಕಾನೂನು ಸಚಿವ ಡಿ. ವಿ. ಸದಾನಂದಗೌಡ ತಿಳಿಸಿದ್ದಾರೆ. ಕಳೆದ ವರ್ಷ 2 ಕೋಟಿ ಮೊಕದ್ದಮೆಗಳು ಇತ್ಯರ್ಥಗೊಂಡಿದ್ದರೂ, ಹೈ ಕೋರ್ಟ್‍ಗಳಲ್ಲಿ 38.70 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಇತ್ಯರ್ಥವಾಗಬೇಕಿದೆ. ಜಿಲ್ಲಾ ಮತ್ತು ಕೆಳ ನ್ಯಾಯಾಲಯಗಳಲ್ಲಿ ಒಟ್ಟು 2.70 ಕೋಟಿ ಪ್ರಕರಣಗಳು ಬಾಕಿ ಉಳಿದಿವೆ ಎಂದು ಮಾಹಿತಿ ನೀಡಿದ್ದಾರೆ. ಅಲ್ಲದೆ ಈಗಾಗಲೇ ಇತ್ಯರ್ಥಗೊಂಡಿರುವ ಪ್ರಕರಣಗಳ ಬಗ್ಗೆ ನ್ಯಾಯಾಲಯದ..

    April 30, 2016
    ...
    Chaluvadi Narayanaswamy
    ಸುದ್ದಿ ಸಾರ

    ಅವಧಿ ವಿಸ್ತರಣೆಯ ಬೇಡಿಕೆ ಮುಂದಿಟ್ಟ ನಿಗಮ ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷರು!

    ಸಮಾನ ಮನಸ್ಕ ಶಾಸಕರ ಅಸಮಾಧಾನ ಮಡುಗಟ್ಟಿರುವ ನಡುವೆಯೇ, ನಿಗಮ ಮಂಡಳಿಗಳ ಅಧ್ಯಕ್ಷರು, ಉಪಾಧ್ಯಕ್ಷರು ಅಪಸ್ವರ ತೆಗೆದಿದ್ದಾರೆ. ತಮ್ಮ ಅಧಿಕಾರಾವಧಿಯನ್ನು 6 ತಿಂಗಳವರೆಗೆ ವಿಸ್ತರಿಸಿ, ಇಲ್ಲವಾದರೆ ಮುಖ್ಯಮಂತ್ರಿ ಸೇರಿದಂತೆ ಸಂಪುಟದ ಎಲ್ಲಾ ಸಚಿವರ ಬದಲಾವಣೆಯಾಗಲಿದೆ ಎಂದು ಸವಾಲು ಹಾಕಿದ್ದಾರೆ. ನವೆಂಬರ್‍ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ 83 ನಿಗಮ ಮಂಡಳಿಗಳಿಗೆ ಅಧ್ಯಕ್ಷ-ಉಪಾಧ್ಯಕ್ಷರನ್ನು 18 ತಿಂಗಳ ಅವಧಿಗೆ ನೇಮಿಸಿತ್ತು. ಆದರೆ, ಸದಸ್ಯರು, ನಿರ್ದೇಶಕರನ್ನು ಈವರೆಗೂ ನೇಮಿಸಿರಲಿಲ್ಲ. ಅಧ್ಯಕ್ಷ-ಉಪಾಧ್ಯಕ್ಷರ ಆಡಳಿತಾವಧಿ ಯಾವುದೇ ಅಧಿಕಾರವಧಿ ಇಲ್ಲದೆ 16 ತಿಂಗಳು ಕಳೆದು ಹೋಗಿದೆ. ಸರ್ಕಾರಕ್ಕೆ..

    April 30, 2016
    ...
    bellary-mining-tehelka
    ರಾಜ್ಯ

    ಅಕ್ರಮ ಗಣಿ ಹಗರಣ: ವಿಶೇಷ ನ್ಯಾಯಾಲಯದಲ್ಲಿ ಹೊಸ ದೋಷಾರೋಪ ಪಟ್ಟಿ ಸಲ್ಲಿಕೆ

    ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲ್ಲೂಕಿನ ಬೇಲಿಕೇರಿ ಬಂದರು ಮೂಲಕ ಅಕ್ರಮ ಅದಿರು ರಫ್ತು ಮಾಡಿದ ಪ್ರಕರಣದಲ್ಲಿ ಇಬ್ಬರು ಶಾಸಕರು ಸೇರಿದಂತೆ 38 ಮಂದಿ ವಿರುದ್ಧ ವಿಶೇಷ ತನಿಖಾದಳ(ಎಸ್‍ಐಟಿ)ಶನಿವಾರ ಚಾರ್ಜ್‍ಶೀಟ್ ಸಲ್ಲಿಸಿದೆ. ವಿಜಯನಗರ ಶಾಸಕ ಆನಂದ್ ಸಿಂಗ್, ಕೂಡ್ಲಗಿ ಶಾಸಕ ನಾಗೇಂದ್ರ, ಮಾಜಿ ಸಚಿವ ಜನಾರ್ಧನ ರೆಡ್ಡಿ ಬಲಗೈ ಬಂಟ ಸ್ವಸ್ತಿಕ್ ನಾಗರಾಜ್, ಖಾರದಪುಡಿ ಮಹೇಶ್, ಶಾಮ್‍ಸಿಂಗ್, ನಂದಾಸಿಂಗ್ ಸೇರಿದಂತೆ ಒಟ್ಟು 38 ಮಂದಿ ವಿರುದ್ಧ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಹೊಸತಾಗಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಪ್ರಕರಣದ ತನಿಖೆ ನಡೆಸುತ್ತಿರುವ..

    April 30, 2016
    ...
    andra-acb-raid-1
    ದೇಶ

    ಆಂಧ್ರ ಎಸಿಬಿ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿ: ಮನೆಯಲ್ಲಿ ಸಿಕ್ಕಿದ್ದು ಚಿನ್ನಾಭರಣಗಳ ರಾಶಿ!

    ಕಳೆದ ಮೂರು ದಿನಗಳಿಂದ ನೆರೆಯ ರಾಜ್ಯ ಆಂಧ್ರ ಪ್ರದೇಶದಲ್ಲಿ ‘ಭ್ರಷ್ಟಾಚಾರ ನಿಗ್ರಹ ದಳ’ ನಡೆಸುತ್ತಿರುವ ಕಾರ್ಯಾಚರಣೆಗೆ  ಜನ ಬೆಚ್ಚಿ ಬಿದ್ದಿದ್ದಾರೆ. ರಾಜ್ಯ ಕಂಡ ಭ್ರಷ್ಟ ಅಧಿಕಾರಿಯೊಬ್ಬನ ಮನೆಯಲ್ಲಿ ಸಿಕ್ಕ ಅಕ್ರಮ ಆಸ್ತಿ ಪ್ರಮಾಣವೇ ದಂಗುಬಡಿಸುವಂತಿದೆ. ರಾಜ್ಯದ ಸಾರಿಗೆ ಇಲಾಖೆಯ ಉಪ ಆಯುಕ್ತ ಎ. ಮೋಹನ್, ಅಕ್ರಮ ಆಸ್ತಿ ಪ್ರಕರಣದಲ್ಲಿ ಸಿಕ್ಕಿಬಿದ್ದಾತ. ಆಂಧ್ರ, ತೆಲಂಗಾಣ ಹಾಗೂ ಕರ್ನಾಟಕಗಳಲ್ಲಿ ಈತ ಮಾಡಿರುವ ಸ್ಥಿರಾಸ್ತಿಗಳ ಮೇಲೆ ಎಸಿಬಿ ದಾಳಿ ನಡೆಸಿದೆ. ಒಟ್ಟು 9 ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ ಅಧಿಕಾರಿಗಳಿಗೆ ಲೋಡುಗಟ್ಟಲೆ..

    April 30, 2016
    ...
    BTV-priyakrishna-mix
    ಟಿವಿ

    BTV ವಿರುದ್ಧ ಮಾನನಷ್ಟ ಪ್ರಕರಣ: ನಡೆದರೆ ಸಂಧಾನ; ಮಿಸ್ಸಾದ್ರೆ ಕದನ!

    ಬಿಟಿವಿ ಸುದ್ದಿ ವಾಹಿನಿಯ ಮೇಲೆ ಶಾಸಕ ಪ್ರಿಯಾಕೃಷ್ಣ ಹೂಡಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣ ಏ. 30ರಂದು (ಇಂದು) ನಿರ್ಣಾಯಕ ತಿರುವು ತೆಗೆದುಕೊಳ್ಳಲಿದೆ. ಕನ್ನಡ ಪತ್ರಿಕೋದ್ಯಮದ ಅಪರೂಪದ ಮಾನನಷ್ಟ ಪ್ರಕರಣವಿದು. ನ್ಯೂಸ್ ಚಾನಲ್ ಒಂದು ಭಿತ್ತರಿಸಿದ ಸುದ್ದಿಯಿಂದ ಮಾನಹಾನಿಗೆ ಒಳಗಾಗಿದ್ದೇನೆ ಎಂದು ಆರೋಪಿಸಿ ಶಾಸಕರೊಬ್ಬರು ಬರೋಬ್ಬರಿ 100 ಕೋಟಿ ರೂಪಾಯಿ ಪರಿಹಾರವನ್ನು ಕೇಳಿದ್ದಾರೆ. ಇದರ ನ್ಯಾಯಾಲಯದ ಶುಲ್ಕ ಸುಮಾರು 52 ಲಕ್ಷ ರೂಪಾಯಿಗಳನ್ನು ಈಗಾಗಲೇ ಪಾವತಿಸಿದ್ದಾರೆ. ಹೀಗಾಗಿ, ಮಾಧ್ಯಮಗಳ ಮೇಲೆ ಹೂಡುವ ಇತರೆ ಮಾನಹಾನಿ ಪ್ರಕರಣಗಳಿಗಿಂತ ಇದು ಗಂಭೀರವಾಗಿದ್ದು..

    April 29, 2016
    ...
    income-tax-documents
    ದೇಶ

    ಐಟಿ ಇಲಾಖೆ ಮಾಹಿತಿ ಬಹಿರಂಗ: ನಮ್ಮಿಂದ ಸಂಗ್ರಹಿಸಿದ್ದೇ 60 ಸಾವಿರ ಕೋಟಿ!

    ಮಹತ್ವದ ಬೆಳವಣಿಗೆಯಲ್ಲಿ ಶುಕ್ರವಾರ ಸಂಜೆ ವೇಳೆಗೆ ಆದಾಯ ತೆರಿಗೆ ಇಲಾಖೆ 16 ವರ್ಷಗಳ ಮಾಹಿತಿಯನ್ನು ಸಾರ್ವಜನಿಕಗೊಳಿಸಿದೆ. ವೈಯುಕ್ತಿಕ ಆದಾಯ ತೆರಿಗೆ ಕಟ್ಟಿದ ವಿವರಗಳೂ ಸೇರಿದಂತೆ, ನಾನಾ ಸರಕಾರಗಳು ಸಂಗ್ರಹಿಸಿದ ತೆರಿಗೆ ಮೊತ್ತದ ಮಾಹಿತಿಯನ್ನು ವರ್ಷವಾರು ಲೆಕ್ಕದಲ್ಲಿ ದಾಖಲೆಗಳು ಒಳಗೊಂಡಿವೆ. ಸ್ವಾತಂತ್ರ್ಯ ಬಂದ ನಂತರ ದೇಶದಲ್ಲಿ ಇದೇ ಮೊದಲ ಬಾರಿಗೆ ಆದಾಯ ತೆರಿಗೆ ಇಲಾಖೆಯ ಮಾಹಿತಿ ಹೀಗೆ ಸ್ವ ಇಚ್ಚೆಯಿಂದ ಬಹಿರಂಗವಾಗುತ್ತಿದೆ. ಒಟ್ಟು 84 ಪುಟಗಳ ದಾಖಲೆಯನ್ನು ಮೂರು ಪ್ರತ್ಯೇಕ ವಿಭಾಗಗಳ ಅಡಿಯಲ್ಲಿ ಆದಾಯ ತೆರಿಗೆ ಇಲಾಖೆ ತನ್ನ..

    April 29, 2016
    ...
    ramachandrapura-matt-hosanagara
    ರಾಜ್ಯ

    ರಾಮಚಂದ್ರಪುರ ಮಠದ ನಿಯಂತ್ರಣಕ್ಕೆ ಅರ್ಜಿ: ಬೇಸಿಗೆ ರಜೆಯ ನಂತರ ವಿಚಾರಣೆ ಶುರು

    ರಾಮಚಂದ್ರಾಪುರ ಮಠದ ಕುರಿತು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದೇ ವಿಚಾರಣೆ ನಡೆಸುವಂತೆ ರಾಘವೇಶ್ವರ ಸ್ವಾಮಿ ಪರ ವಕೀಲರು ಸಲ್ಲಿಸಿದ್ದ ಮನವಿಯನ್ನು ಹೈಕೋರ್ಟ್ ವಿಭಾಗೀಯ ಪೀಠ ತಿರಸ್ಕರಿಸಿದೆ. ಹೊಸನಗರದಲ್ಲಿರುವ ರಾಮಚಂದ್ರಪುರ ಮಠವನ್ನು ಸರಕಾರದ ಸುಪರ್ದಿಗೆ ತರುವಂತೆ ಕೋರಿ ಪಿಐಎಲ್ ಸಲ್ಲಿಸಲಾಗಿತ್ತು. ಇದನ್ನು ತ್ವರಿತವಾಗಿ, ಇಂದೇ ವಿಚಾರಣೆ ನಡೆಸಬೇಕು ಎಂದು ಮಠದ ಪರವಾಗಿ ವಕೀಲರು ನ್ಯಾಯಾಲಯಕ್ಕೆ ಕೋರಿಗೆ ಸಲ್ಲಿಸಿದ್ದರು. ರಾಘವೇಶ್ವರ ಸ್ವಾಮಿ ಮೇಲೆ ಎರಡು ಅತ್ಯಾಚಾರ ಆರೋಪ ಇರುವುದರಿಂದ, ಮಠದ ಆವರಣ ಪ್ರವೇಶಕ್ಕೆ ನಿಷೇಧ ಹೇರುವಂತೆಯೂ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ಗುರುವಾರದ ವಿಚಾರಣೆಯ ವೇಳೆ..

    April 29, 2016

Top