An unconventional News Portal.

ಟ್ರಾಫಿಕ್ ಜಂಗುಳಿ ಮೇಲೆ ಕುಸಿದು ಬಿದ್ದ ಮೇಲ್ಸೇತುವೆ: 22 ಜನರ ಸಾವು

ಟ್ರಾಫಿಕ್ ಜಂಗುಳಿ ಮೇಲೆ ಕುಸಿದು ಬಿದ್ದ ಮೇಲ್ಸೇತುವೆ: 22 ಜನರ ಸಾವು

ಕೋಲ್ಕತ್ತಾದ ಬುರ್ರಾ ಬಝಾರ್ ಎರಿಯಾದಲ್ಲಿ ನಿರ್ಮಾಣ ಹಂತದಲ್ಲಿದ್ದ ಮೇಲ್ಸೇತುವೆ ಕುಸಿದು ಬಿದ್ದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.  ಇಲ್ಲಿನ ವಿವೇಕಾನಂದ ರಸ್ತೆಯಲ್ಲಿ ನಿರ್ಮಿಸಲಾಗುತ್ತಿದ್ದ 2.2 ಕಿ.ಮೀ ಉದ್ದ ಪ್ಲೈ ಓವರ್ ಹಠಾತ್ತನೆ ಟ್ರಾಫಿಕ್ ಜಂಗುಳಿಯ ಮೇಲೆಯೇ ಕುಸಿದು ಬಿತ್ತು.

ಘಟನೆಯಲ್ಲಿ ಸುಮಾರು 22 ಜನ ಸಾವಿಗೆ ಈಡಾಗಿದ್ದು, ನೂರಾರು ಜನ ಅಡಿಯಲ್ಲಿ ಸಿಲುಕಿದ್ದಾರೆ. ಘಟನೆ ತಕ್ಷಣ ಸ್ಪಂದಿಸಿದ ಅಗ್ನಿ ಶಾಮಕ ದಳದ ಸುಮಾರು 500ಕ್ಕೂ ಹೆಚ್ಚು ಸಿಬ್ಬಂದಿ ಹಾಗೂ ಸೇನೆ ಸ್ಥಳದಲ್ಲಿ ರಕ್ಷಣಾ ಕಾರ್ಯಚರಣೆ ಶುರುಮಾಡಿದರು.

ದೃಶ್ಯಾವಳಿಯಲ್ಲಿ ಸೆರೆಯಾಗಿರುವಂತೆ, ಮಧ್ಯಾಹ್ನದ ವೇಳೆಗೆ ರಸ್ತೆಯಲ್ಲಿ ಆಟೋ ರಿಕ್ಷಾ, ಮತ್ತಿತರ ವಾಹನಗಳು ಎಂದಿನಂತೆ ಸಂಚಿರುತ್ತಿದ್ದವು. ಈ ಸಮಯದಲ್ಲಿ ನಿರ್ಮಾಣ ಹಂತದಲ್ಲಿ ಮೇಲ್ಸೇತುವೆಯ ಒಂದು ಭಾಗ ಕುಸಿದು ಬಿತ್ತು. ಅದರ ಕಾಂಕ್ರಿಟ್ ಪಿಲ್ಲರ್ಗಳ ಅಡಿಯಲ್ಲಿ ರಸ್ತೆ ಹೋಕರು ಹಾಗೂ ವಾಹನಗಳು ಅಪ್ಪಚ್ಚಿಯಾದವು.

“ಇದು ದೇವರ ಕೆಲಸ,” ಎಂದು ಮೇಲ್ಸೇತುವೆ ಗುತ್ತಿಗೆದಾರ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಘಟನಾ ಸ್ಥಳಕ್ಕೆ ಆಗಮಿಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, “ಮೇಲ್ಸೇತುವೆಯ ಗುತ್ತಿಗೆಯನ್ನು ಸಿಪಿಎಂ ಪಕ್ಷ ಅಧಿಕಾರದಲ್ಲಿದ್ದಾಗ ನೀಡಲಾಗಿತ್ತು. ನಮ್ಮ ಚುನಾವಣಾ ರ್ಯಾಲಿಗಳಲ್ಲಿ ಬದಿಗೊತ್ತಿ ಇಲ್ಲಿಗೆ ಬಂದಿದ್ದೇನೆ. ತಪ್ಪಿತಸ್ಥರಿಗೆ ಶಿಕ್ಷ ವಿಧಿಸಲಾಗುವುದು,” ಎಂದರು. ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಕಣ ರಂಗೇರಿದೆ. ಎಡ ಪಕ್ಷಗಳು ಘಟನೆಯ ಹೊಣೆಯನ್ನು ತೃಣಮೂಲ ಕಾಂಗ್ರೆಸ್ ಹೊರಬೇಕು ಎಂದು ಒತ್ತಾಯಿಸಿವೆ.

 

Leave a comment

FOOT PRINT

Top