An unconventional News Portal.

ಪ್ರಪಂಚ ಪರ್ಯಟನೆಗೆ ಈ ಜೋಡಿ ಖರ್ಚು ಮಾಡಿದ್ದು 496 ರೂಪಾಯಿ!

ಪ್ರಪಂಚ ಪರ್ಯಟನೆಗೆ ಈ ಜೋಡಿ ಖರ್ಚು ಮಾಡಿದ್ದು 496 ರೂಪಾಯಿ!

ಕಾಡಿನ ಅಲೆದಾಟ ಸಾಕು ಅನ್ನಿಸಿದ ಆದಿ ಮಾನವ, ಕೊನೆಗೆ ಒಂದು ಕಡೆ ನೆಲೆ ನಿಂತು ಬದುಕಲು ಆರಂಭಿಸಿ ಸಾವಿರಾರು ವರ್ಷಗಳು ಕಳೆದಿವೆ. ಇವತ್ತು ನಾಗರೀಕತೆಯ ಉತ್ತುಂಗ ನೋಡುತ್ತಿರುವ ಅವನಿಗೆ ಊರೂರು ಅಲೆಯುವ ಮನಸ್ಸಾಗುತ್ತಿದೆ. ಆದರೆ, ದೇಶ- ಪ್ರದೇಶಗಳು ಗಡಿಗಳಿಂದ ಪ್ರತ್ಯೇಕಗೊಂಡಿವೆ. ಹೀಗಾಗಿ ಜಗತ್ತು ಸುತ್ತುವುದು ಹಿಂದಿನಷ್ಟು ಸುಲಭವಲ್ಲ; ಜತೆಗೆ ಜೇಬಿಗೂ ದುಬಾರಿ ಬಾಬತ್ತು.9_couple-travelled-8-a-day-in-their-VW-van

ಹೀಗಾಗಿಯೇ ಪೋಲಾಂಡ್ ಮೂಲದ ಇವರು ಹೊಸದೊಂದು ದಾರಿ ಕಂಡುಕೊಂಡಿದ್ದಾರೆ. ನವಮಾನವನ ಪ್ರವಾಸ ಪ್ರೀತಿಯನ್ನು ಅವರು ಪೋಷಿಸುವ ಹೊಸ ಮಾರ್ಗವನ್ನು ಅನ್ವೇಷಣೆ ಮಾಡಿದ್ದಾರೆ. ತಂತ್ರಜ್ಞಾನವನ್ನು ಅದಕ್ಕೆ ಪೂರಕವಾಗಿ ಬಳಸಿಕೊಳ್ಳುತ್ತಿದ್ದಾರೆ. ಅವರ ಹೆಸರು ಕರೋಲ್ ಮತ್ತು ಅಲೆಕ್ಸಾಂಡ್ರಾ ಲಾವಾಂಡ್ವೆಸ್ಕಿ. ಮೂಲತಃ ಪೋಲಾಂಡ್ ನವರು.

4_couple-travelled-8-a-day-in-their-VW-van

ತಮ್ಮ ಫೋಕ್ಸ್ ವ್ಯಾಗನ್ ಕಾರಿನಲ್ಲಿ ಜಗತ್ತು ಸುತ್ತುವ ಮೂಲಕ ಇವರಿಬ್ಬರು ಸುದ್ದಿಯಲ್ಲಿದ್ದಾರೆ. ತಮ್ಮ ಪ್ರಯಾಣದ ಪ್ರತೀ ಸುಂದರ ನೆನಪುಗಳನ್ನು ಇವರೇ ರೂಪಿಸಿರುವ ಅಪರೂಪದ ವೆಬ್ ಸೈಟ್ ಒಂದರಲ್ಲಿ ದಾಖಲಿಸುತ್ತಾ ಹೋಗುತ್ತಿದ್ದಾರೆ. ಈವರೆಗೆ ಬರೊಬ್ಬರಿ 5 ಖಂಡಗಳ ಸುಮಾರು 50 ದೇಶಗಳನ್ನು ಅವರು ಸುತ್ತಿ ಮುಗಿಸಿದ್ದಾರೆ.

8_couple-travelled-8-a-day-in-their-VW-van

ಅಷ್ಟಕ್ಕೂ ಕರೋಲ್ ಮತ್ತು ಅಲೆಕ್ಸಾಂಡ್ರಾ ಲಾವಾಂಡ್ವೆಸ್ಕಿ ಜೋಡಿಯ ಪ್ರವಾಸ ಉಳಿದ ಪ್ರವಾಸಿಗರಂತಾಗಿದ್ದರೆ ವಿಶೇಷತೆಯೇನೂ ಇರುತ್ತಿರಲಿಲ್ಲ. ಪ್ಯಾಕೇಜ್ ಟೂರ್ ಮಾಡುವವರ ನಡುವೆ ಇರುವ ಭಿನ್ನ ಅಂತ ಅನ್ನಿಸಿಕೊಳ್ಳಲು ಕಾರಣ- ಕಡಿಮೆ ದುಡ್ಡಲ್ಲಿ ಹೆಚ್ಚು ಹೆಚ್ಚು ಗಡಿಗಳನ್ನು ದಾಟಿದ್ದು ಇವರ ಸ್ಪೆಷಾಲಿಟಿ. ಇವರದ್ದು ಪಕ್ಕಾ ಎಕನಾಮಿಕಲ್ ಟೂರ್. ಪ್ರಸಾಸ ಹೋದಾಗ ಇವರಿಬ್ಬರು ದಿನವೊಂದಕ್ಕೆ ಖರ್ಚು ಮಾಡುವುದು ಬರೀ 8 ಡಾಲರ್ . ಅಂದ್ರೆ ಹೆಚ್ಚುಕಡಿಮೆ 496 ರೂಪಾಯಿಗಳು.

5_couple-travelled-8-a-day-in-their-VW-van

ಆರಂಭದಲ್ಲಿ ಇವರ ಕಡಿಮೆ ವೆಚ್ಚದ ಪ್ರಯಾಣ ಶುರುವಾಗಿದ್ದು ಫೋಕ್ಸ್ ವ್ಯಾಗನ್ ಕಂಪನಿಯ ಸೆಕೆಂಡ್ ಹ್ಯಾಂಡ್ ಕಾರಿನ ಮೂಲಕ. ಇದಕ್ಕೆ ಅವರು ಕೇವಲ 600 ಡಾಲರ್ ಕೊಟ್ಟು ಕೊಂಡುಕೊಂಡಿದ್ದು. ಆ ಬಳಿಕ ಅರಂಭವಾಯ್ತು ನೋಡಿ ಇವರ ಪ್ರಪಂಚ ಪರ್ಯಟನೆ. ಆ ಸಮಯದಲ್ಲಿ ಇವರ ಊಟ, ನಿದ್ದೆ ಎಲ್ಲವೂ ಇದೇ ಕಾರಿನಲ್ಲಿ.

7_couple-travelled-8-a-day-in-their-VW-van

ಕರೋಲ್ ಮತ್ತು ಅಲೆಕ್ಸಾಂಡ್ರಾ ಜೋಡಿಯ ಪ್ರವಾಸದ ಸಮಯದಲ್ಲಿ ಹೆಚ್ಚು ಖರ್ಚಾಗುವುದು ಇಂದನಕ್ಕೆ. ಇದನ್ನು ಇವರಿಬ್ಬರೂ ಸೇರಿ ಹೊಂದಿಸಿಕೊಳ್ತಾರೆ. ಅದಾದ ಬಳಿಕ ಹೆಚ್ಚಿನ ಖರ್ಚು ಅಂದ್ರೆ ಊಟ ಹಾಗೂ ತಿಂಡಿಗಾಗಿ. ಹೋಟೇಲ್ ರೆಸ್ಟೋರೆಂಟ್ ಗಳನ್ನು ಅವಲಂಬಿಸಿದ್ರೆ ಖರ್ಚು ಹೆಚ್ಚಾಗುತ್ತೆ. ಹೀಗಾಗಿ ಅಲ್ಲಿಗೆ ಹಣ ವ್ಯಯಿಸದೆ ತಾವೇ ತಯಾರಿಸಿಕೊಳ್ತಾರೆ. ಇನ್ನು ಸ್ನಾನಕ್ಕೆ ಬಿಸಿ ನೀರಿಗೆ ಕೂಡ ಇವರು ತಮ್ಮ ವ್ಯಾನ್ ನಲ್ಲೇ ವ್ಯವಸ್ಥೆ ಮಾಡಿಕೊಂಡಿದ್ದಾರೆ. ವ್ಯಾನ್ ನ ಮೇಲ್ಬಾಗದಲ್ಲಿ ವಿದ್ಯುತ್ ಉಪಕರಣದ ಮೂಲಕ ಬಿಸಿ ನೀರು ಕಾಯಿಸಿಕೊಳ್ಳುತ್ತಾರೆ.

6_couple-travelled-8-a-day-in-their-VW-van

ಇನ್ನು ಒಂದು ಖಂಡದಿಂದ ಮತ್ತೊಂದು ಖಂಡಕ್ಕೆ ಪ್ರಯಾಣಿಸಲು ಇವರು ಸಮುದ್ರ ಮಾರ್ಗವೇ ಉತ್ತಮ ಎನ್ನುತ್ತಾರೆ. “ಹಡಗಿನ ಮೂಲಕ ಪ್ರಯಾಣವನ್ನು ಮಾಡಿದ್ರೆ ಬಹಳಷ್ಟು ಖರ್ಚು ಕಡಿಮೆ ಮಾಡಿಕೊಳ್ಳಬಹುದು,’’ ಅನ್ನುತ್ತೆ ಈ ಜೋಡಿ.

3_couple-travelled-8-a-day-in-their-VW-van

ಇನ್ನು ಇವ್ರು ಹೀಗೇ ಪ್ರವಾಸ ಮಾಡುತ್ತಲೇ ಖರ್ಚು ಮಾಡೋದಿಕ್ಕೆ ಹಣವಾದ್ರೂ ಎಲ್ಲಿಂದ ಬರುತ್ತೆ ಎಂಬ ಸಂಶಯ ಬರೋದು ಸಾಮಾನ್ಯ. ಇದಕ್ಕಾಗಿ ಈ ಜೋಡಿ ಉಪಾಯವೊಂದನ್ನು ಕಂಡುಕೊಂಡಿದ್ದಾರೆ. ಅದೇನೆಂದ್ರೆ ಇವರು ಪ್ರವಾಸ ಹೋಗುವ ದಾರಿಯುದ್ದಕ್ಕೂ ತಮ್ಮೊಂದಿಗೆ ಪೋಸ್ಟ್ ಕಾರ್ಡ್ಗಳನ್ನು ಕೊಡೊಯ್ಯುತ್ತಾರೆ. ಅದನ್ನು ಮಾರಾಟ ಮಾಡಿಯೇ ಇವರು ತಮ್ಮ ಖರ್ಚಿಗೆ ಬೇಕಾಗುವ ಹಣವನ್ನು ಹೊಂದಿಸಿಕೊಳ್ತಾರೆ. ಅಲ್ಲದೆ ತಮ್ಮ ಪ್ರವಾಸಕ್ಕೆ ಪ್ರಯೋಜಕರನ್ನು ಹುಡುಕಿಕೊಳ್ಳುತ್ತಾರೆ. ಪ್ರಯೋಜಕರ ಜಾಹೀರಾತನ್ನು ವ್ಯಾನ್ ನ ಸುತ್ತಲೂ ಪ್ರದರ್ಶಿಸುತ್ತಾರೆ. ಈ ಮೂಲಕ ತಮ್ಮ ಪ್ರವಾಸಕ್ಕೆ ಬೇಕಾಗುವ ಹಣವನ್ನು ಹೊಂದಿಸಿಕೊಳ್ತಾರೆ.

ಜಗತ್ತಿನ ಎಲ್ಲಾ ಸುಂದರ ಪ್ರದೇಶಗಳನ್ನು ಕಣ್ತುಂಬಿಕೊಳ್ಳಬೇಕೆಂಬ ಆಶಯ ಎಲ್ಲರಿಗೂ ಇದ್ದೇ ಇರುತ್ತದೆ. ಆದ್ರೆ ಹಣದ ಸಮಸ್ಯೆ ಎಲ್ಲರಿಗೂ ಸಹಕರಿಸ್ಬೇಕಲ್ವಾ. ಆದರೆ ಮನಸ್ಸು ಮಾಡಿದ್ರೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಬುದ್ದಿ ಉಪಯೋಗಿಸಿಕೊಂಡು ಹೇಗೆ ತಮ್ಮ ಆಕಾಂಕ್ಷೆಯನ್ನು ಪೂರೈಸಿಕೊಳ್ಳಬಹುದು ಎಂಬುದಕ್ಕೇ ಕರೋಲ್ ಮತ್ತು ಅಲೆಕ್ಸಾಂಡ್ರಾ ಲಾವಾಂಡ್ವೆಸ್ಕಿ ಜೋಡಿ ಉತ್ತಮ ಉದಾಹರಣೆ. ಅವರ ವೆಬ್ ಸೈಟ್ busaroundtheworld.com ಗೆ ಭೇಟಿ ನೀಡಿ. ಪ್ರಪಂಚ ಸುತ್ತಿದವರ ಅನುಭವಗಳನ್ನು ಕಣ್ತುಂಬಿಕೊಳ್ಳಿ.

Leave a comment

FOOT PRINT

Top