An unconventional News Portal.

    ...
    VW van
    ಸಮಾಚಾರ +

    ಪ್ರಪಂಚ ಪರ್ಯಟನೆಗೆ ಈ ಜೋಡಿ ಖರ್ಚು ಮಾಡಿದ್ದು 496 ರೂಪಾಯಿ!

    ಕಾಡಿನ ಅಲೆದಾಟ ಸಾಕು ಅನ್ನಿಸಿದ ಆದಿ ಮಾನವ, ಕೊನೆಗೆ ಒಂದು ಕಡೆ ನೆಲೆ ನಿಂತು ಬದುಕಲು ಆರಂಭಿಸಿ ಸಾವಿರಾರು ವರ್ಷಗಳು ಕಳೆದಿವೆ. ಇವತ್ತು ನಾಗರೀಕತೆಯ ಉತ್ತುಂಗ ನೋಡುತ್ತಿರುವ ಅವನಿಗೆ ಊರೂರು ಅಲೆಯುವ ಮನಸ್ಸಾಗುತ್ತಿದೆ. ಆದರೆ, ದೇಶ- ಪ್ರದೇಶಗಳು ಗಡಿಗಳಿಂದ ಪ್ರತ್ಯೇಕಗೊಂಡಿವೆ. ಹೀಗಾಗಿ ಜಗತ್ತು ಸುತ್ತುವುದು ಹಿಂದಿನಷ್ಟು ಸುಲಭವಲ್ಲ; ಜತೆಗೆ ಜೇಬಿಗೂ ದುಬಾರಿ ಬಾಬತ್ತು. ಹೀಗಾಗಿಯೇ ಪೋಲಾಂಡ್ ಮೂಲದ ಇವರು ಹೊಸದೊಂದು ದಾರಿ ಕಂಡುಕೊಂಡಿದ್ದಾರೆ. ನವಮಾನವನ ಪ್ರವಾಸ ಪ್ರೀತಿಯನ್ನು ಅವರು ಪೋಷಿಸುವ ಹೊಸ ಮಾರ್ಗವನ್ನು ಅನ್ವೇಷಣೆ ಮಾಡಿದ್ದಾರೆ. ತಂತ್ರಜ್ಞಾನವನ್ನು..

    March 25, 2016
    ...
    ಕೊಲೆಗೀಡಾದ ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ್ ಬಾಳಿಗ.
    ಸುದ್ದಿ ಸಾರ

    ವಿನಾಯಕ್ ಬಾಳಿಗ ಕೊಲೆ ಪ್ರಕರಣ: ಇಬ್ಬರು ಯುವಕರ ಬಂಧನ

    ಮಂಗಳೂರಿನ ಆರ್ಟಿಐ ಕಾರ್ಯಕರ್ತ ವಿನಾಯಕ ಬಾಳಿಗ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ವಿಶಿತ್ ಮತ್ತು ವಿನೀತ್ ಬಂಧಿತರು. ಸಾವರ್ಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸುವ ಮೂಲಕ ಲಾಬಿಗಳ ವಿರುದ್ಧ ಹೋರಾಡುತ್ತಿದ್ದ ಬಾಳಿಗರನ್ನು ಮಾ. 21ರಂದು ಇರಿದು ಕೊಲೆ ಮಾಡಲಾಗಿತ್ತು. ಅವರು ದಕ್ಷಿಣ ಕನ್ನಡ ಮೂಲದ ಕೆಲವು ಧಾರ್ಮಿಕ ಮೂಲಭೂತವಾದಿ ಸಂಘಟನೆಗಳ ವಿರುದ್ಧವೂ ದನಿ ಎತ್ತಿದ್ದವರು. ಹೀಗಾಗಿ, ಅವರ ಕೊಲೆಯ ಸುತ್ತ ಹಲವು ಅನುಮಾನಗಳು ಹುಟ್ಟಿಕೊಂಡಿದ್ದವು. ಈಗಾಗಲೇ ಪ್ರಕರಣದ ತನಿಖೆಗಾಗಿ ಮೂರು ವಿಶೇಷ ತಂಡಗಳನ್ನು ಪೊಲೀಸ್ ಇಲಾಖೆ..

    March 25, 2016
    ...
    ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ. (ಚಿತ್ರ: ದಿ ಹಿಂದೂ)
    ಸುದ್ದಿ ಸಾರ

    ಸ್ಮಶಾನದ ನಡುವೆ ರಸ್ತೆ ನಿರ್ಮಾಣ: ಬಿಡಿಎ ವಿರುದ್ಧ ಹಳ್ಳಿಗರ ಆಕ್ರೋಶ

    ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಈಗ ಸ್ಮಶಾನಕ್ಕೆ ಮೀಸಲಿಟ್ಟ ಜಾಗವನ್ನು ಆಕ್ರಮಿಸಿಲು ಹೋಗಿ ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾದ ಘಟನೆ ಸಿಲಿಕಾನ್ ಸಿಟಿಯ ಹೊರವಲಯದಲ್ಲಿ ವರದಿಯಾಗಿದೆ. ಇಲ್ಲಿನ ಕುಂಬಳಗೋಡು ಗ್ರಾಮದ ವ್ಯಾಪ್ತಿಯಲ್ಲಿ ಕಣಿಮಿಣಕಿ ಗ್ರಾಮಸ್ಥರೀಗ ಬಿಡಿಎ ವಿರುದ್ಧ ತಿರುಗಿ ಬಿದ್ದಿದ್ದಾರೆ. ಊರ ಜನರಿಗಾಗಿ 2004ರಲ್ಲಿ ಸುಮಾರು ನಾಲ್ಕು ಎಕರೆ ಪ್ರದೇಶವನ್ನು ಸ್ಮಶಾನ ಜಾಗ ಎಂದು ಮಂಜೂರು ಮಾಡಲಾಗಿತ್ತು. ಅದರ ಪಕ್ಕದಲ್ಲಿಯೇ ಬಿಡಿಎ 50 ಎಕರೆ ಪ್ರದೇಶದಲ್ಲಿ ನಿವಾಸಗಳನ್ನು ನಿರ್ಮಿಸುತ್ತಿದೆ. ಇದಕ್ಕಾಗಿ ಸ್ಮಶಾನಕ್ಕೆ ಮೀಸಲಿಟ್ಟ ಜಾಗದಲ್ಲಿ ರಸ್ತೆ ನಿರ್ಮಾಣಕ್ಕೆ ಮುಂದಾಗಿದೆ ಎಂಬುದು..

    March 25, 2016
    ...
    bjp_jds_local_bodies
    ರಾಜ್ಯ

    ಹಳೇ ದೋಸ್ತಿಗಳ ಹೊಸ ಮೈತ್ರಿ: ಅತಂತ್ರ ಸ್ಥಳೀಯ ಸಂಸ್ಥೆಗಳ ಅಧಿಕಾರ ಖಾತ್ರಿ!

    ಹಳೇ ದೋಸ್ತಿಗಳು ಮತ್ತೊಂದು ಸುತ್ತಿನ ಮೈತ್ರಿಗೆ ಮುಂದಾಗುತ್ತಿದ್ದಾರೆ. ಅತಂತ್ರ ಸ್ಥಿತಿಯಲ್ಲಿರುವ ಜಿಲ್ಲಾ ಹಾಗೂ ತಾಲೂಕು ಪಂಚಾಯ್ತಿಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಹೊಂದಾಣಿಕೆ ಮಾಡಿಕೊಳ್ಳಲಿವೆ. ಇದಕ್ಕಾಗಿ ಬಿಜೆಪಿ ಮುಖಂಡರ ರಹಸ್ಯ ಸಭೆಯೊಂದು ನಡೆದಿದೆ ಎಂದು ಮೂಲಗಳು ತಿಳಿಸಿವೆ. ಸಭೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಜತೆ ಔಪಚಾರಿಕ ಮಾತುಕತೆಯ ಹೊಣೆಯನ್ನು ಪಕ್ಷದ ನಾಯಕ ಆರ್. ಅಶೋಕ್ ಅವರಿಗೆ ವಹಿಸಲಾಗಿದೆ. ಸ್ಥಳೀಯ ಸಂಸ್ಥೆಗಳ ಫಲಿತಾಂಶ ಬಂದ ನಂತರ, ಸ್ಥಳೀಯ ನಾಯಕರ ವಿವೇಚನೆಗೆ ಹೊಂದಾಣಿಕೆ ವಿಚಾರವನ್ನು ಬಿಡಲಾಗಿತ್ತು. ಆದರೆ, ಕಳೆದ ಕೆಲವು..

    March 25, 2016
    ...
    ಉದ್ಯಮಿ ವಿಜಯ್ ಮಲ್ಯ.
    ದೇಶ

    ಸಾಲ ಈಸ್ಕೊಂಡು ಪರಾರಿಯಾದ ವಿಜಯ್ ಮಲ್ಯ ವಾಪಾಸ್ ಕರೆತರಲು ಮುಂದುವರಿದ ಸಾಹಸ

    ಪಡೆದ ಸಾಲವನ್ನು ಹಿಂದಿರುಗಿಸಲಾರದೆ ವಿದೇಶಕ್ಕೆ ಪರಾರಿಯಾಗಿರುವ ಬೆಂಗಳೂರು ಮೂಲದ ಉದ್ಯಮಿ ವಿಜಯ್ ಮಲ್ಯಗೆ ಜಾರಿ ನಿರ್ದೇಶನಾಲಯ ಮತ್ತೊಮ್ಮೆ ಸಮನ್ಸ್ ಜಾರಿ ಮಾಡಲು ಮುಂದಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾ.18ರಂದು ವಿಚಾರಣೆಗೆ ಹಾಜರಾಗಬೇಕೆಂದು ಜಾರಿ ನಿರ್ದೇಶನಾಲಯ ಮಲ್ಯಗೆ ಸಮನ್ಸ್ ಜಾರಿ ಮಾಡಿತ್ತು. ಆದರೆ, ‘ಭಾರತಕ್ಕೆ ಹಿಂದಿರುಗಲು ಇದು ಸರಿಯಾದ ಸಂದರ್ಭವಲ್ಲ. ಸೂಕ್ತ ಕಾಲದಲ್ಲಿ ಬರುವುದಾಗಿ’ ಮಲ್ಯ ಸಾಮಾಜಿಕ ಜಾಲತಾಣ ಟ್ವಿಟರ್ ಮೂಲಕ ಪ್ರತಿಕ್ರಿಯಿಸಿದ್ದರು. ಹೀಗಾಗಿ, ವಿಚಾರಣೆ ಗಡುವು ಮೀರಿದರೆ ಎರಡನೇ ಸಮನ್ಸ್ ಜಾರಿ ಮಾಡಲು ಜಾರಿ ನಿರ್ದೇಶನಾಲಯ ತೀರ್ಮಾನಿಸಿದೆ. ಇದರಿಂದ ಲಂಡನ್ ಹೊರವಲಯದ ಐಶಾರಾಮಿ ಬಂಗಲೆಯಲ್ಲಿರುವ..

    March 25, 2016
    ...
    mehaboba
    ಸುದ್ದಿ ಸಾರ

    ಜಮ್ಮು ಮತ್ತು ಕಾಶ್ಮೀರಾದ ಮೊದಲ ಮಹಿಳಾ ಮುಖ್ಯಮಂತ್ರಿ; ಮುಫ್ತಿ!

    ಸುಮಾರು ಎರಡು ತಿಂಗಳ ರಾಷ್ಟ್ರಪತಿ ಆಡಳಿತದ ಬಳಿಕ ಮತ್ತೆ ಜಮ್ಮು ಕಾಶ್ಮೀರದಲ್ಲಿ ಹೊಸ ಸರ್ಕಾರ ರಚನೆಗೆ ಮುದ್ರೆ ಬಿದ್ದಿದೆ. ಪಿಡಿಪಿ (ಪೀಪಲ್ಸ್ ಡೆಮಕ್ರಾಟಿಕ್ ಪಾರ್ಟಿ)ಗೆ ಸರ್ಕಾರ ರಚಿಸುವುದಕ್ಕೆ ಬಿಜೆಪಿ ಹೈಕಮಾಂಡ್ ಒಪ್ಪಿಕೊಂಡಿದೆ. ಈ ಬಗ್ಗೆ ಗುರುವಾರ ದಿಲ್ಲಿಗೆ ಆಗಮಿಸಿದ್ದ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಪ್ತಿ ಜತೆಗೆ ಉನ್ನತ ಮಟ್ಟದ ಮಾತುಕತೆ ನಡೆಸಲಾಗಿತ್ತು. ಈ ಮೂಲಕ ಮುಫ್ತಿ ಮುಖ್ಯಮಂತ್ರಿ ಕನಸು ನನಸಾಗುವುದು ನಿಚ್ಚಳವಾಗಿದೆ. ಇಂದು ಜಮ್ಮು ಮತ್ತು ಕಾಶ್ಮೀರದ ಬಿಜೆಪಿ ನಾಯಕ ಸಾತ್ ಶರ್ಮಾ ಈ ವಿಚಾರವನ್ನು ಪತ್ರಿಕಾಗೊಷ್ಟಿ ನಡೆಸಿ ಸ್ಪಷ್ಟಪಡಿಸಿದ್ದಾರೆ. ಈ..

    March 25, 2016
    ...
    ಗೂಗಲ್ ಮ್ಯಾಪ್ ಸ್ಕ್ರೀನ್ ಶಾಟ್...
    ದೇಶ

    ಗೂಗಲ್ ಸರ್ಚ್ ಎಂಜಿನ್ ಅಪಸವ್ಯ: ಜೆಎನ್ಯು ಬೆಂಬಿಡದ ಆ್ಯಂಟಿ ನಾಷನಲ್ ಭೂತ!

    ನೀವೀಗ ಗೂಗಲ್ ಮ್ಯಾಪ್ ಆಪ್ ಬಳಸುತ್ತಿದ್ದರೆ, ಅದರ ಹುಡುಕಾಡದ ಸ್ಥಳದಲ್ಲಿ ‘ಸೆಡಿಶನ್’ ಅಥವಾ ‘ಆ್ಯಂಟಿ ನ್ಯಾಷನಲ್’ ಅಂತ ಕೊಟ್ಟು ನೋಡಿ… ಆಶ್ಚರ್ಯ ಬೇಡ, ನಿಮ್ಮನ್ನು ಗೂಗಲ್ ಮ್ಯಾಪ್ ಸೀದಾ ತೆಗೆದುಕೊಂಡು ಹೋಗಿ, ದಿಲ್ಲಿಯ ಜವಹರ್ ಲಾಲ್ ವಿಶ್ವವಿದ್ಯಾನಿಲಯ (ಜೆಎನ್ಯು) ಮುಂದೆ ನಿಲ್ಲಿಸುತ್ತದೆ! ಹೀಗೊಂದು ಗೂಗಲ್ ಅಪಸವ್ಯ ಶುಕ್ರವಾರ ಬೆಳಗ್ಗೆ ಪತ್ತೆಯಾಗಿದೆ. ಸೆಡಿಶನ್ (ರಾಜದ್ರೋಹ), ಆ್ಯಂಟಿ ನ್ಯಾಷನಲ್ (ದೇಶ ವಿರೋಧಿ) ಪದಗಳು ಕಳೆದ ಕೆಲವು ತಿಂಗಳುಗಳಿಂದ ದೇಶದಾದ್ಯಂತ ಭಾರಿ ಚರ್ಚೆಯಲ್ಲಿರುವ ಪದಗಳು. ದಿಲ್ಲಿಯ ಜೆಎನ್ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ನಯ್ಯ..

    March 25, 2016
    ...
    ಸದ್ಯ ಅಮೆರಿಕಾ ಜೈಲಿನಿಂದಲೇ ಭಾರತದ ವಿಶೇಷ ನ್ಯಾಯಾಲಯಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹೇಳಿಕೆ ನೀಡುತ್ತಿರುವ ಡೇವಿಡ್ ಕೋಲ್ಮನ್ ಹೆಡ್ಲಿ ಸಂಗ್ರಹ ಚಿತ್ರ.
    ದೇಶ

    ಹೆಡ್ಲಿಗೇಕೆ ಭಾರತ ಕಂಡರೆ ಸಿಟ್ಟು?: ಮುಂದುವರಿದ ಡೇವಿಡ್ ಹೆಡ್ಲಿ ತಪ್ಪೊಪ್ಪಿಗೆ…

    ಮುಂಬೈ ದಾಳಿಯ ರೂವಾರಿ ಡೆವಿಡ್ ಹೆಡ್ಲಿ, ತನಗೇಕೆ ಭಾರತದ ಮೇಲೆ ಸಿಟ್ಟು ಎಂಬುದನ್ನು ಇದೇ ಮೊದಲ ಬಾರಿಗೆ ಹೇಳಿಕೊಂಡಿದ್ದಾನೆ. 1971ರಲ್ಲಿ ತಾನು ಓದುತ್ತಿದ್ದ ಶಾಲೆಯ ಮೇಲೆ ಭಾರತಕ್ಕೆ ಸೇರಿದ ವಿಮಾನವೊಂದು ಬಾಂಬ್ ದಾಳಿ ನಡೆಸಿತ್ತು. ಅಂದಿನಿಂದಲೂ ಭಾರತದ ಮೇಲೆ ಸಿಟ್ಟಿತ್ತು. ಆ ಕಾರಣಕ್ಕಾಗಿ ತಾನು ಭಾರತದ ವಿರುದ್ದ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದ್ದೆ ಎಂದು ಡೆವಿಡ್ ಹೆಡ್ಲಿ ಹೇಳಿಕೊಂಡಿದ್ದಾನೆ. ಕಳೆದ ಮೂರು ದಿನಗಳಿಂದ ಮುಂಬೈ ವಿಶೇಷ ನ್ಯಾಯಾಲಯದಲ್ಲಿ ಡೇವಿಡ್ ಹೆಡ್ಲಿಯ ವಿಚಾರಣೆ ನಡೆಯುತ್ತಿದೆ. ಅಮೆರಿಕಾದಲ್ಲಿರುವ ಆರೋಪಿ ವೀಡಿಯೋ ಕಾನ್ಫ್ರೆನ್ಸ್ ಮೂಲಕ..

    March 25, 2016
    ...
    ಬ್ರೂಸೆಲ್ ದಾಳಿಯಲ್ಲಿ ಮಡಿದವರಿಗೆ ಶ್ರದ್ಧಾಂಜಲಿ...
    ವಿದೇಶ

    ಬ್ರೂಸೆಲ್ ಮೇಲೆ ಐಸಿಸ್ ದಾಳಿ ಮಾಡಿದ್ದೇಕೆ?

    ‘ಬ್ರೂಸೆಲ್ ದಾಳಿ’ಯ ತನಿಖೆಯನ್ನು ಮುಂದುವರಿಸಿರುವ ಬೆಲ್ಜಿಯಂ ಫೆಡರಲ್ ಪೊಲೀಸರು 6 ಮಂದಿ ಶಂಕಿತರನ್ನು ವಶಕ್ಕೆ ಪಡೆದ್ದಾರೆ. ಬ್ರೂಸೆಲ್ ನಗರದ ಸುತ್ತಮುತ್ತ ನಡೆದಿರುವ ಕಾರ್ಯಚರಣೆಯಲ್ಲಿ ಸಂಶಯಾತ್ಮಕ ವ್ಯಕ್ತಿಗಳನ್ನು ವಿಚಾರಣೆಗಾಗಿ ಕರೆತಂದಿರುವುದಾಗಿ ಇಲ್ಲಿನ ಫೆಡರಲ್ ಪ್ರಾಸಿಕ್ಯೂಟರ್ಸ್ ಕಚೇರಿ ತಿಳಿಸಿದೆ. ವಿಚಾರಣೆಗೆ ಒಳಪಡಿಸಿದವರ ಗುರುತುಗಳನ್ನು ಇನ್ನೂ ಬಹಿರಂಗಪಡಿಸಿಲ್ಲ. ಅವರ ಮೇಲಿನ ಆರೋಪಗಳನ್ನು ಪ್ರಾಥಮಿಕ ವಿಚಾರಣೆಗೆ ನಡೆಸಿದ ಬಳಿಕ ಇಲ್ಲಿನ ನ್ಯಾಯಾಲಯ ಆರೋಪಿಗಳನ್ನು ವಶಕ್ಕೆ ತೆಗೆದುಕೊಳ್ಳಬೇಕೇ, ಇಲ್ಲವೆ ಎಂದು ನಿರ್ಧರಿಸಲಿದೆ. ಕಳೆದ ಮಂಗಳವಾರ ಬ್ರೂಸೆಲ್ ನಗರದ ವಿಮಾನ ನಿಲ್ದಾಣ ಮತ್ತು ಮೆಟ್ರೊ ರೈಲು..

    March 25, 2016
    ...
    ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ (ಚಿತ್ರ: ಐಇ)
    ದೇಶ

    ಮಾಲಿನ್ಯ ತಡೆಗೆ ಜಾಗತಿಕ ಮನ್ನಣೆ: ಕೇಜ್ರಿವಾಲ್ ಅಟ್ 42

    ವಾಯು ಮಾಲಿನ್ಯ ತಡೆಯಲು ದಿಲ್ಲಿಯಲ್ಲಿ ನಡೆಸಿದ ಕಸರತ್ತಿಗೆ ಈಗ ಜಾಗತಿಕ ಮನ್ನಣೆ ಸಿಕ್ಕಿದೆ. ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್, ಜಗತ್ತಿನ 50 ಪ್ರಭಾವಿ ನಾಯಕರ ಪಟ್ಟಿಯಲ್ಲಿ ಸೇರ್ಪಡೆಗೊಳ್ಳಲು ‘ಸರಿ ಬೆಸ’ ಪ್ರಯೋಗ ಸಹಾಯ ಮಾಡಿದೆ. ಪ್ರತಿಷ್ಠಿತ ‘ಫಾರ್ಚುನರ್’ ಮ್ಯಾಗ್ಸಿನ್ ಬಿಡುಗಡೆ ಮಾಡಿರುವ ಈ ಪಟ್ಟಿಯಲ್ಲಿ ಕೇಜ್ರಿವಾಲ್ 42ನೇ ಸ್ಥಾನದಲ್ಲಿದ್ದಾರೆ. ಭಾರತದಿಂದ ಆಯ್ಕೆಯಾದ ಏಕೈಕ ನಾಯಕ ಎಂಬ ಹೆಗ್ಗಳಿಕೆಯೂ ಇದರ ಜತೆಗಿದೆ. ಉದ್ಯಮ, ರಾಜಕೀಯ, ಕಲೆ, ಸಮಾಜ ಸೇವಾ ಕ್ಷೇತ್ರಗಳಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಿದವರನ್ನು ಪ್ರಭಾವಿಗಳು ಎಂದು ಪಟ್ಟಿ ಮಾಡಲಾಗಿದೆ…

    March 25, 2016

Top