An unconventional News Portal.

ನರಭಕ್ಷಕರ ಬದುಕೇ ಒಂದು ನಮೂನೆ; ಆಗಸದಲ್ಲೇ ಇವರ ಅರಮನೆ!

ನರಭಕ್ಷಕರ ಬದುಕೇ ಒಂದು ನಮೂನೆ; ಆಗಸದಲ್ಲೇ ಇವರ ಅರಮನೆ!

ಇದು ನರಭಕ್ಷಣೆಯನ್ನು ಇವತ್ತಿಗೂ ಪಾಲಿಸುತ್ತಿರುವ ಬುಡಕಟ್ಟು ಸಮುದಾಯದ  ಕತೆ. ಇವರ ಪಾಲಿಗೆ ಬಿಳಿ ಚರ್ಮದ ಮುನುಷ್ಯರು ರಾಕ್ಷಸರ ಭೂತಗಳು! ಹಾಗೆಯೇ, ತಮ್ಮದೇ ಸಮುದಾಯದವರನ್ನೂ ಕೊಂದು ತಿಂದು, ಅವರ ತಲೆ ಬುರಡೆಗಳನ್ನು ಇಟ್ಟುಕೊಳ್ಳುವುದು ಇವರ ಪದ್ಧತಿ. ದಟ್ಟ ಕಾಡಿನ ನಡುವೆ, ಪ್ರಕೃತಿ ಸವಾಲುಗಳನ್ನು ಎದುರಿಸಲು ಅವರು ಕಂಡುಕೊಂಡಿರುವ ಅವರ ಬದುಕಿನ ಒಳನೋಟಗಳು ಇಲ್ಲಿವೆ…

 

Korowai-Tribe-houses-3

ವಾತಾವರಣದ ಅಗತ್ಯಕ್ಕೆ ತಕ್ಕಂತೆ ಬದುಕು ರೂಪುಗೊಳ್ಳುತ್ತದೆ. ಜೀವಸಂಕುಲಗಳ ಪೈಕಿ ಬಹುತೇಕ ಜೀವಿಗಳಿಗೆ ಇದು ನಿಸರ್ಗ ಸಹಜವಾಗಿ ಒಲಿದು ಬಂದಿರುವ ಕಲೆ. ಇದು  ಇಂಡೋನೇಷ್ಯಾದ ಪುಪುವಾದ ಕಾಡಿನ ಮಧ್ಯೆ ವಾಸುತ್ತಿರುವ ಈ ಬುಡಕಟ್ಟು ಸಮುದಾಯದವರ ಬದುಕಿನಲ್ಲೂ ವ್ಯಕ್ತವಾಗುತ್ತಿದೆ. ಅಲ್ಲಿನ ಡಿರ್ಯಾಮ್ ಕಬೂರ್ ಎಂಬ ನದಿಯ ಅಂಚಿನಲ್ಲಿ ವಾಸಿಸುವ ಅವರು ಆಳೆತ್ತರದ ಮರಗಳ ಮೇಲೆಯೇ ಬದುಕು ಕಟ್ಟಿಕೊಂಡಿದ್ದಾರೆ.

ಕಾಡುವಾಸಿಗಳ ಮನೆ, ಅದೂ ಕೂಡ ಮರದ ಮೇಲೆ ಅಂದ್ರೆ ನಮ್ಮ ಚಿತ್ತ ಪಟಲದಲ್ಲಿ ಮೂಡೋದು ಜೋಪಡಿ ತರದ ಮನೆಗಳು. ಆದ್ರೆ ಇವು ಹಾಗಿಲ್ಲ. ಇವರದ್ದು ಮರದ ಮೇಲಿನ ಅರಮನೆಗಳು. ಕಾಡಿನಲ್ಲಿ ಸಿಗುವ ಕಚ್ಚಾವಸ್ತುಗಳಿಂದಲೇ ಸುಂದರವಾಗಿ ಮನೆ ನಿರ್ಮಿಸುವ ನೈಪುಣ್ಯತೆಯನ್ನು ಪ್ರಕೃತಿಯೇ ಕಲಿಸಿಕೊಟ್ಟಿದೆ. ಐವತ್ತು ಅಡಿ ಎತ್ತರದಿಂದ ಸುಮಾರು ನೂರ ಹದಿನೈದು ಅಡಿ ಎತ್ತರದಲ್ಲೂ ಇವರು ಮನೆಗಳನ್ನು ನಿರ್ಮಿಸಿಕೊಂಡಿರುತ್ತಾರೆ.

Korowai-Tree-houses-1

ಇಲ್ಲಿನ ದಟ್ಟವಾದ ಕಾಡಿನ ಮಧ್ಯೆ ಹರಿಯುವ ಡಿರ್ಯಾಮ್ ಕಬೂರ್ ನದಿ ಹಾಗೂ ಧಾರಾಕಾರ ಮಳೆ ಕೊರೊವಾಯ್ ಜನಾಂಗದ ಜನರನ್ನು ಅನಿವಾರ್ಯವಾಗಿ ಈ ರೀತಿ ಬದುಕುವಂತೆ ಮಾಡಿದೆ. ಇಲ್ಲಿ ವಾರ್ಷಿಕ ಸರಾಸರಿ 500 ಸೆಂಟಿಮೀಟರ್ ನಷ್ಟು ಮಳೆಯಾಗುತ್ತೆ. ಹೀಗಾಗಿ ಇಲ್ಲಿ ಹರಿಯುವ  ಡಿರ್ಯಾಮ್ ನದಿಯಲ್ಲಿ ಪ್ರವಾಹ ಉಂಟಾಗುವುದು ಸಾಮಾನ್ಯ. ಇದ್ರಿಂದ  ತಪ್ಪಿಸಿಕೊಳ್ಳಬೇಕಾದರೆ ಇವರಿಗೆ ಇಲ್ಲಿನ ಗಗನಚುಂಬಿ ಮರಗಳೇ ಆಸರೆ. ದಟ್ಟ ಕಾಡಿನಲ್ಲಿ ಉಂಟಾಗುವ ಕಾಡ್ಗಿಚ್ಚಿನಿಂದ ತಪ್ಪಿಸಿಕೊಳ್ಳಲು ಇವರಿಗೆ ಮುಗಿಲಿಗೆ ಚುಂಬಿಸುವ ಈ ಮನೆಗಳು ಸಹಕಾರಿ.

ಕೊರೊವಾಯ್ ಬುಡಕಟ್ಟು ಜನಾಂಗ  ವಾಸಿಸ್ತಿರೋದು ನಾಗರೀಕ ಸಮಾಜದಿಂದ ಎರಡು ವಾರಗಳ ಕಾಲ ಕಾಲ್ನಡಿಗೆಯಲ್ಲಿ ನಡೆವಷ್ಟು ದೂರ. ಅದ್ರಲ್ಲೂ ಈ ಕಾಡು ಅತ್ಯಂತ ದಟ್ಟವಾಗಿ ಹಬ್ಬಿಕೊಂಡಿದೆ. ಹಾಗಾಗಿ ಹೊರ ಜಗತ್ತಿನ ಯಾವೊಂದು ಬದಲಾವಣೆಯ ಅರಿವೂ ಇವರಿಗಿಲ್ಲ. ಮೈಮೇಲೆ ಬಟ್ಟೆ ಹಾಕಿಕೊಂಡರೆ ಭೂಕಂಪವಾಗುತ್ತೆ ಎಂದು ನಂಬಿ ಬಟ್ಟೆಯನ್ನೇ ಧರಿಸದ ಮುಗ್ಧರಿವರು. ಜಗತ್ತಿನ ಕಟ್ಟಕಡೆಯ ನರಭಕ್ಷಣೆ ಮಾಡುವ ಸಮುದಾಯ ಎಂಬ ಕುಖ್ಯಾತಿ ಕೂಡ ಕೊರೋವಾಯ್ ಬುಡಕಟ್ಟು ಜನಾಂಗಕ್ಕಿದೆ. ತಮ್ಮದೇ ಸಮುದಾಯದವರನ್ನು ಕೊಂದು ತಿನ್ನುವ ಪದ್ಧತಿ ಇವರಲ್ಲಿದೆ.

Korowai-Tribe-skull-4

ತಮ್ಮ ಮೈಬಣ್ಣಕ್ಕಿಂತ ಭಿನ್ನ ಬಣ್ಣದವರನ್ನು ಇವರು ‘ಕಕುವಾ’ ಎನ್ನುತ್ತಾರೆ. ಕಕುವಾ ಅಂದ್ರೆ ರಾಕ್ಷಸರ ಭೂತಗಳು ಎಂದರ್ಥ. ಹಾಗಾಗಿ ಹೊರಗಿಂದ ಯಾರಾದ್ರು ಈ ಭಾಗಕ್ಕೆ ಬಂದ್ರೆ ಅವ್ರನ್ನು ‘ಕಕುವಾ’ ಎಂದು ಕೊಂದು ತಿನ್ನುತ್ತಾರೆ. ತಮ್ಮದೇ ಜನಾಂಗದವರು ಮಲೇರಿಯಾ ಮೊದಲಾದ ರೋಗಗಳಿಂದ ಮೈಬಿಳುಚಿಕೊಂಡಿದ್ರೆ, ಅವರನ್ನು ಕೂಡ ಮಾಟಗಾರರಿಂದಾಗಿ ‘ಕಕುವಾ’ ಆಗಿ ಪರಿವರ್ತನೆಯಾಗಿದ್ದಾರೆ ಎಂದು ಅವರನ್ನೂ ಕೂಡ ಕೊಂದು ಭಕ್ಷಿಸ್ತಾರೆ.

ಈಗ  ಸಮುದಾಯದಲ್ಲಿ ಒಟ್ಟು ನಾಲ್ಕು ಸಾವಿರ ಜನರಿದ್ದಾರೆ ಎನ್ನಲಾಗ್ತಿದೆ. ಅದ್ರಲ್ಲಿ ಮೂರು ಸಾವಿರ ಜನ ತಮ್ಮ ಜನಾಂಗದವರನ್ನು ಬಿಟ್ಟು ಹೊರಗಿವರನ್ನು ನೋಡಿಯೇ ಇಲ್ಲವಂತೆ. ಜಗತ್ತು ಇಷ್ಟೆಲ್ಲಾ ಬದಲಾಗ್ತಿದ್ರೂ ಇವರು ಬದಲಾಗದಿರೋದಿಕ್ಕೂ ಕಾರಣ ಇವರಲ್ಲಿರುವ ಗಟ್ಟಿ ನಂಬಿಕೆಗಳು. ಹೊರಗಿನವರು ಬಂದು ಇವರ ಜೀವನ ಮಾಡ್ತಿರುವ ಶೈಲಿಯಲ್ಲಿ ಬದಲಾವಣೆಯಾದ್ರೆ ಭೂಮಿ ನಶಿಸುತ್ತದೆ ಎಂಬ ನಂಬಿಕೆ ಇವರಲ್ಲಿದೆ. ಇತ್ತೀಚೆಗೆ ಕ್ರಿಶ್ಚಿಯನ್ ಮಿಷನರಿಗಳು ಇವರನ್ನು ತಲುಪುವ ಪ್ರಯತ್ನದಲ್ಲಿವೆ.

Photo courtesy: Internet

Leave a comment

FOOT PRINT

Top