An unconventional News Portal.

ಲಾತೂರಿಗೆ ಕೇಂದ್ರದಿಂದ ನೀರು: ಚಿತ್ರಗಳಲ್ಲಿ ಬರಗಾಲದ ಊರು

ಲಾತೂರಿಗೆ ಕೇಂದ್ರದಿಂದ ನೀರು: ಚಿತ್ರಗಳಲ್ಲಿ ಬರಗಾಲದ ಊರು

ಮಹಾರಾಷ್ಟ್ರದ ಮರಾಠವಾಡ ಪ್ರದೇಶದಲ್ಲಿ ದಶಕದಲ್ಲಿಯೇ ಬೀಕರ ಬರಗಾರ ತಾಂಡವವಾಡುತ್ತಿದೆ.

ದೇಶದ ಆರ್ಥಿಕ ರಾಜಧಾನಿ ಮುಂಬೈನಿಂದ 400 ಕಿ. ಮೀ ದೂರದಲ್ಲಿರುವ ಈ ಭಾಗದಲ್ಲಿ ಕಳೆದ ಮೂರು ವರ್ಷಗಳಿಂದ ಸರಿಯಾಗಿ ಮಳೆಯಾಗುತ್ತಿಲ್ಲ. ನೀರನ್ನು ಯಥೇಚ್ಚವಾಗಿ ಬೇಡುವ ಕಬ್ಬು ಮತ್ತು ಹತ್ತಿ ಇಲ್ಲಿನ ಕೃಷಿ ಬೆಳೆಗಳಾಗಿದ್ದವು. ಮೂರು ವರ್ಷಗಳಿಂದ ಮಳೆ ಸರಿಯಾಗಿಲ್ಲ ಕಾರಣ, ರೈತರ ಕೃಷಿ ಚಟುವಟಿಗೆ ಹೆಚ್ಚುಕಡಿಮೆ ನಿಂತೇ ಹೋಗಿದೆ.

1972ರಲ್ಲಿ ಇಲ್ಲಿ ಕಾಣಿಸಿಕೊಂಡ ಬರಕ್ಕಿಂತಲೂ, ಈ ವರ್ಷದ ಬೇಸಿಕೆ, ನೀರಿನ ಅಭಾವ ಪ್ರಮಾಣದಲ್ಲಿ ಹೆಚ್ಚಿದೆ ಎಂದು ವರದಿಗಳು ಹೇಳುತ್ತಿವೆ. ಹೀಗಾಗಿ, ಸುತ್ತಮುತ್ತಲಿನ ಹಳ್ಳಿಗಳಿಂದ ಜನ ಗುಳೇ ಹೊರಟಿದ್ದಾರೆ. ವೃದ್ಧರು ಹಾಗೂ ಮಕ್ಕಳನ್ನು ಹೊರತುಪಡಿಸಿದರೆ, ಕೆಲವು ಹಳ್ಳಿಗಳಲ್ಲಿ ಜನರೇ ಇಲ್ಲ. ಕಳೆದ ವರ್ಷ ಸುಮಾರು 1,100 ರೈತರು ಇಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವರ್ಷದ ಆರಂಭದಿಂದ ಇಲ್ಲೀವರೆಗೆ 216 ಜನ ಪ್ರಾಣ ಕಳೆದುಕೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ ಲಾತೂರಿಗೆ ಕೇಂದ್ರ ಸರಕಾರ ರೈಲಿನ ಮೂಲಕ ನೀರು ಪೂರೈಕೆ ಮಾಡಲು ಮುಂದಾಗಿದೆ. ಈ ಸಮಯದಲ್ಲಿ ‘ಅಲ್ ಜಝೀರಾ’ಕ್ಕಾಗಿ ಹರ್ಷ ವದ್ಲಾಮಣಿ ಈ ಪ್ರದೇಶದಲ್ಲಿ ಓಡಾಡಿ ತೆಗೆದ ಫೊಟೋಗಳ ಪೈಕಿ ಆಯ್ದ ಚಿತ್ರಗಳು ಇಲ್ಲಿವೆ. ಇವು, ಅಲ್ಲಿನ ಪರಿಸ್ಥಿತಿಯನ್ನು ಪದಗಳನ್ನು ಮೀರಿ ವಿವರಿಸುತ್ತಿವೆ.

Top