An unconventional News Portal.

ಬ್ರಿಟನ್ ಆರೋಗ್ಯ ಸೇವೆಗೆ ಭಾರತದಿಂದ ಮಾನವ ಸಂಪನ್ಮೂಲ ಪೂರೈಕೆ

ಬ್ರಿಟನ್ ಆರೋಗ್ಯ ಸೇವೆಗೆ ಭಾರತದಿಂದ ಮಾನವ ಸಂಪನ್ಮೂಲ ಪೂರೈಕೆ

ಬ್ರಿಟನ್ ದೇಶದಲ್ಲಿ ವೈದ್ಯರ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 400ಕ್ಕೂ ಹೆಚ್ಚು ಭಾರತೀಯ ಮೂಲದ ಜನರಲ್ ಪ್ರಾಕ್ಟೀಷನಸ್ರ್ಗಳನ್ನು ನೇಮಕ ಮಾಡಿಕೊಳ್ಳಲು ಅಲ್ಲಿನ ಸರಕಾರ ಮುಂದಾಗಿದೆ.

2020ನೇ ಇಸ್ವಿ ವೇಳೆಗೆ 5,000 ವೈದ್ಯರನ್ನು ನೇಮಕ ಮಾಡಿಕೊಳ್ಳಲು ಸರಕಾರ ನಿರ್ಧರಿಸಿದೆ. ದೇಶದಲ್ಲಿ ಆರೋಗ್ಯ ಸೇವೆ ತರಬೇತಿಯ ಹೊಣೆ ಹೊತ್ತಿರುವ ‘ಹೆಲ್ತ್ ಎಜ್ಯುಕೇಶನ್ ಇಂಗ್ಲೆಂಡ್’ ಈ ಬಗ್ಗೆ ಭಾರತದ ಸರಣಿ ಆಸ್ಪತ್ರೆಗಳ ಜತೆ ಒಪ್ಪಂದ ಮಾಡಿಕೊಂಡಿದೆ ಎಂದು ‘ಪಲ್ಸ್’ ನಿಯತಕಾಲಿಕ ವರದಿ ಮಾಡಿದೆ.

40 ಸಾವಿರಕ್ಕೂ ಅಧಿಕ ಉದ್ಯೋಗಿಗಳನ್ನು ಹೊಂದಿರುವ, 500 ದಶಲಕ್ಷ ಪೌಂಡ್ ವಹಿವಾಟು ನಡೆಸುತ್ತಿರುವ ಚೆನ್ನೈ ಮೂಲದ ಸರಣಿ ಆಸ್ಪತ್ರೆಯ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಸಂಸ್ಥೆಯು ಕುಟುಂಬ ವೈದ್ಯಕೀಯ ಡಿಪ್ಲೋಮಾ ನೀಡುತ್ತಿದ್ದು, ಈ ಕೋರ್ಸ್ ಬ್ರಿಟನ್ನಿನ ‘ರಾಯಲ್ ಕಾಲೇಜ್ ಆಫ್ ಜನರಲ್ ಮೆಡಿಸಿನ್’ ಅನುಮೋದನೆ ಪಡೆದಿದೆ.

ಈ ಮಧ್ಯೆ ಅಪೋಲೊ ಆಸ್ಪತ್ರೆ ಪ್ರತ್ಯೇಕ ಹೇಳಿಕೆ ನೀಡಿ, ಎರಡೂ ದೇಶಗಳಿಗೆ ಲಾಭವಾಗುವ ರೀತಿಯಲ್ಲಿ ಹೇಗೆ ಯೋಜನೆ ಹಮ್ಮಿಕೊಳ್ಳಬಹುದು ಎಂಬ ಬಗ್ಗೆ ಬ್ರಿಟನ್ ಸರ್ಕಾರದ ಜತೆ ಆರಂಭಿಕ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಪ್ರಕಟಿಸಿದೆ. ಇದು ಆರಂಭಿಕ ಮಾತುಕತೆ. ಇದರ ಫಲಿತಾಂಶವನ್ನು ಇಷ್ಟರಲ್ಲೇ ಪ್ರಕಟಿಸಲಾಗುವುದು ಎಂದು ಹೇಳಿದೆ.
ಬ್ರಿಟನ್ನಲ್ಲಿ ವೈದ್ಯರ ಕೊರತೆ ವ್ಯಾಪಕವಾಗಿ ಕಾಡುತ್ತಿದ್ದು, ಇದನ್ನು ಬಗೆಹರಿಸಬೇಕು ಎಂಬ ಸಾರ್ವಜನಿಕ ಒತ್ತಡ ಸರ್ಕಾರದ ಮೇಲಿದೆ.

Top