An unconventional News Portal.

‘ಪನಾಮ ಪೇಪರ್ಸ್’ಗೆ ಅಂಟಿದ ಬಳ್ಳಾರಿ ಅದಿರಿನ ನಂಟು: ರಾಜ್ಯದ ಉದ್ಯಮಿಗಳ ಹೆಸರು ಬಹಿರಂಗ

‘ಪನಾಮ ಪೇಪರ್ಸ್’ಗೆ ಅಂಟಿದ ಬಳ್ಳಾರಿ ಅದಿರಿನ ನಂಟು: ರಾಜ್ಯದ ಉದ್ಯಮಿಗಳ ಹೆಸರು ಬಹಿರಂಗ

‘ಪನಾಮಾ ಪೇಪರ್ಸ್ಗೆ’ಗೆ ಸಂಬಂಧಪಟ್ಟಂತೆ ಹೊಸ ಪಟ್ಟಿಯೊಂದನ್ನು ‘ಇಂಡಿಯನ್ ಎಕ್ಸ್ ಪ್ರೆಸ್’ ಬುಧವಾರ ಬಿಡುಗಡೆ ಮಾಡಿದೆ. ಕರ್ನಾಟಕದ ಒಬ್ಬರು ಉದ್ಯಮಿಗಳು ಸೇರಿದಂತೆ ನೀರಾ ರಾಡಿಯಾ ಮತ್ತಿತರರ ಹೆಸರುಗಳನ್ನು ಪಟ್ಟಿ ಒಳಗೊಂಡಿದೆ.

‘ಕ್ರೌನ್ಮಾರ್ಟ್ ಇಂಟರ್ ನ್ಯಾಷನಲ್ ಗ್ರೂಪ್ ಲಿಮಿಟೆಡ್’ ಎಂಬ ಅಂತರಾಷ್ಟ್ರೀಯ ವ್ಯವಹಾರಗಳ ಕಂಪನಿಯೊಂದನ್ನು ನೀರಾ ರಾಡಿಯಾ 1994ರಲ್ಲಿ ಬ್ರಿಟಿಷ್ ವರ್ಜಿನ್ ದ್ವೀಪದಲ್ಲಿ ನೊಂದಣಿ ಮಾಡಿಸಿವುದನ್ನು ಸೋರಿಕೆಯಾಗಿರುವ ದಾಖಲೆಗಳು ಬಹಿರಂಗಪಡಿಸಿವೆಯೆಂದು ಪತ್ರಿಕೆ ವರದಿ ಮಾಡಿದೆ.

ಕಂಪನಿ ನೊಂದಣಿ ಪತ್ರಗಳು ಮತ್ತು ಶೇರುಗಳ ಬಗ್ಗೆ ವಿವರಗಳಿವೆ. ಕಂಪನಿ ನಿರ್ದೇಶಕಿ ನೀರಾ ರಾಡಿಯಾರ ಹೆಸರಿನಲ್ಲೂ ಶೇರುಗಳಿದೆ. ಕಂಪನಿ ದಾಖಲೆಗಳಿಗೆ ಜೂನ್ 2004ರವರೆಗೂ ನೀರಾ ರಾಡಿಯಾ ಸಹಿ ಮಾಡುತ್ತಿದ್ದರು ಎಂದು ದಾಖಲೆಗಳು ಹೇಳುತ್ತಿವೆ.

‘ಮೊಸಾಕ್ ಫೋನ್ಸೆಕಾ’ ದಾಖಲೆಗಳಿಂದ ಕಂಪನಿಯನ್ನು 2009ರಲ್ಲೇ ತೆಗೆದುಹಾಕಲಾಗಿದ್ದರೂ, ಬ್ರಿಟಿಷ್ ವರ್ಜಿನ್ ಐಲ್ಯಾಂಡ್’ನ ಮಾರ್ಚ್ 2012ರ ರಾಜ್ಯಪತ್ರದಲ್ಲಿ ಅಲ್ಲಿನ ಹಣಕಾಸು ಸೇವಾ ಆಯೋಗವು ನೀರಾ ಕಂಪನಿಗೆ ಸೂಚನೆಯೊಂದನ್ನು ನೀಡಿತ್ತು. 30 ದಿನಗಳೊಳಗೆ ಕಂಪನಿಯು ಅಧಿಕೃತ ಏಜೆಂಟ್’ನ್ನು ನೇಮಿಸದಿದ್ದಲ್ಲಿ ಕಂಪನಿಯನ್ನು ಮುಚ್ಚಲಾಗುವುದು ಎಂದು ಎಚ್ಚರಿಸಿತ್ತು. ಮೊಸ್ಯಾಕ್ ಫೋನ್ಸೆಕಾ ದಾಖಲೆಗಳಲ್ಲಿ ನೀರಾ ರಾಡಿಯಾ ಬ್ರಿಟಿಷ್ ಪ್ರಜೆಯೆಂದು ಹೇಳಲಾಗಿದೆ.

ಬಳ್ಳಾರಿ ನಂಟು:

ತೆರಿಗೆ ಕಳ್ಳರ ಸ್ವರ್ಗಗಳೆಂದು ಕರೆಯಲ್ಪಡುವ ದೇಶಗಳಲ್ಲಿರುವ ಉದ್ಯಮ ಸಂಸ್ಥೆಗಳೊಂದಿಗೆ ಸಂಬಂಧ ಹೊಂದಿರುವವರ ಹೊಸ ಪಟ್ಟಿಯಲ್ಲಿ ಕರ್ನಾಟಕದ ಇಬ್ಬರು ಉದ್ಯಮಿಗಳ ಹೆಸರನ್ನು ರಾಷ್ಟ್ರೀಯ ದಿನ ಪತ್ರಿಕೆ ವರದಿ ಮಾಡಿದೆ.

ಬಳ್ಳಾರಿಯ ಗಣಿ ಉದ್ಯಮಿ ಪ್ರಸನ್ನ ವಿ ಘೋಟಗೆ ಮತ್ತು ಅವರ ಸಹವರ್ತಿ ವಾಮನ್ ಕುಮಾರ್ ಬ್ರಿಟಿಷ್ ವರ್ಜಿನ್ ದ್ವೀಪದಲ್ಲಿ ‘ನೋರ್ಡ್ಬೆಲ್ ಕಮರ್ಷಿಯಲ್ ಲಿಮಿಟೆಡ್’ ಎಂಬ ಕಂಪನಿಯನ್ನು 2007ರಲ್ಲಿ ನೊಂದಣಿ ಮಾಡಿಸಿದ್ದರೆಂದು ಸೋರಿಕೆಯಾಗಿರುವ ದಾಖಲೆಗಳು ಬಹಿರಂಗಪಡಿಸಿವೆ.

ಕಬ್ಬಿಣದ ಅದಿರನ್ನು ರಪ್ತು ಮಾಡುವ ಪ್ರಸನ್ನ, ಅವರ ಪತ್ನಿ ನೇಹಾ ಮತ್ತು ಸಹವರ್ತಿ ವಾಮನ್ ಕುಮಾರ್ ಆ ಕಂಪನಿಯ ಶೇರುದಾರರಾಗಿದ್ದಾರೆ. ಎರಡು ವರ್ಷದ ಹಿಂದೆ ನಿಧನ ಹೊಂದಿದ ಪ್ರಸನ್ನರವರ ತಾಯಿ ವಿಲಾಸಿನಿಯವರು ಕೂಡಾ ಆ ಕಂಪನಿಯ ಶೇರುದಾರರಾಗಿದ್ದರು.

ದಾಖಲೆಗಳ ಪ್ರಕಾರ, ಪ್ರಸನ್ನ 12 ಸಾವಿರ ಶೇರುಗಳನ್ನು 2010ರಲ್ಲಿ ವಾಮನ್ ಕುಮಾರ್ಗೆ ಮಾರಾಟ ಮಾಡಿದ್ದಾರೆ.
ಪ್ರಸನ್ನ ಮಾಲಕತ್ವದ ಪಿವಿಜಿ ಸಮೂಹ ಸಂಸ್ಥೆಯು ಬಳ್ಳಾರಿಯಲ್ಲಿ ಅದಿರು ಸಾಗಣಿಕೆಗಾಗಿ ಸುಮಾರು 3000 ಟ್ರಕ್ಗಳನ್ನು ಹೊಂದಿತ್ತು. ವಾಮನ್ ಕುಮಾರ್ ಅಂತರಾಷ್ಟ್ರೀಯ ವ್ಯಾಪಾರ ವ್ಯವಹಾರದಲ್ಲಿ ಪರಿಣತರಾಗಿದ್ದು ಕಬ್ಬಿಣ-ಅದಿರಿನ ಕ್ಷೇತ್ರದಲ್ಲಿವಿಶೇಷ ಅನುಭವಹೊಂದಿದವರಾಗಿದ್ದಾರೆ.

ಕೋರ್ಸಲ್ ಓವರ್ಸೀಸ್ ಮತ್ತು ಐ.ಆರ್.ಐ.ವಿ ಎಂಬ ಇನ್ನೆರಡು ಕಂಪನಿಗಳು ಕೂಡಾ ಪ್ರಸನ್ನರ ನೋರ್ಡ್ಬೆಲ್ ಕಮರ್ಷಿಯಲ್ ಲಿಮಿಟೆಡ್ ಜತೆಗೆ ಶೇರು ಸಂಬಂಧಗಳನ್ನು ಹೊಂದಿತ್ತು ಎಂದು ‘ಮೊಸಾಕ್ ಫೋನ್ಸೆಕಾ’ ದಾಖಲೆಗಳು ಬಹಿರಂಗಪಡಿಸಿವೆ.

2012ರಲ್ಲಿ ಪ್ರಸನ್ನ, ವಾಮನ್ ಕುಮಾರ್ ಮತ್ತು ಗೋವಾದ ಇನ್ನೋರ್ವ ಸಹವರ್ತಿ ಮನೋಜ್ ಧೀರಜ್ ಲಾಲ್ ಎಂಬವರು ಭಾರತ ಸರ್ಕಾರದ ಸಾರ್ವಜನಿಕ ಉದ್ದಿಮೆಯಾಗಿರುವ ಬಿಇಎಮ್‍ಎಲ್ ಸಂಸ್ಥೆಗೆ ರೂ.30 ಕೋಟಿಯನ್ನು ವಂಚಿಸಿದ್ದರು ಎಂದು ಆರೋಪಿಸಲಾಗಿತ್ತು. ಆದರೆ 2013ರಲ್ಲಿ ಕರ್ನಾಟಕ ಹೈಕೋರ್ಟ್ ಆ ಪ್ರಕರಣವನ್ನು ವಜಾಗೊಳಿಸಿತ್ತು. ಮುಂಬೈಯ ಹಿರಾ ಉಕ್ಕು ಸಂಸ್ಥೆಗೆ ಕಳಪೆ ಗುಣಮಟ್ಟದ ಅದಿರನ್ನು ಸರಬರಾಜು ಮಾಡಿದ ಆರೋಪವು ಕೂಡಾ ಪ್ರಸನ್ನ ಮೇಲಿತ್ತು.

ರಾಯಪುರ ಕಂಪನಿಯೊಂದರಿಂದ ರೂ.17.5 ಕೋಟಿ ಮುಂಗಡ ಪಡೆದು ಅದಿರನ್ನು ಒದಗಿಸದೇ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಗೋವಾ ಪೋಲಿಸರು 2015ರಲ್ಲಿ ಪ್ರಸನ್ನ ಮೇಲೆ ಆರೋಪಪಟ್ಟಿಯನ್ನು ಸಲ್ಲಿಸಿದ್ದಾರೆ. ಆ ಪ್ರಕರಣದಲ್ಲಿ ಪ್ರಸನ್ನ ಜೈಲು ಪಾಲಾಗಿದ್ದರು. ಸಾಲವಸೂಲಾತಿ, ಉದ್ದೇಶಪೂರ್ವ ವಂಚನೆ, ಮೋಸ ಮುಂತಾದ ಹಲವಾರು ಪ್ರಕರಣಗಳು ಪ್ರಸನ್ನ ವಿರುದ್ಧ ಈ ಹಿಂದೆ ದಾಖಲಾಗಿವೆ.

ENTER YOUR E-MAIL

Name
Email *
January 2017
M T W T F S S
« Dec    
 1
2345678
9101112131415
16171819202122
23242526272829
3031  

Top