An unconventional News Portal.

ಮುಂಬೈ ಸ್ಫೋಟ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣ ಪ್ರಕಟಿಸಿದ ವಿಶೇಷ ನ್ಯಾಯಾಲಯ

ಮುಂಬೈ ಸ್ಫೋಟ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣ ಪ್ರಕಟಿಸಿದ ವಿಶೇಷ ನ್ಯಾಯಾಲಯ

ಮುಂಬೈ ಸ್ಫೋಟ ಪ್ರಕರಣಗಳಿಗೆ ಸಂಬಂಧಿಸಿದಂತೆ ಬುಧವಾರ ಶಿಕ್ಷೆ ಪ್ರಮಾಣವನ್ನು ಮುಂಬೈ ವಿಶೇಷ ‘ಪೋಟಾ’ ನ್ಯಾಯಾಲಯ ಪ್ರಕಟಿಸಿದೆ.

ಪ್ರಕರಣದ ಆರೋಪಿಗಳಾದ ಸಾಖಿಬ್ ನಚಾನ್, ಅತೀಫ್ ಮುಲ್ಲಾ ಹಾಗೂ ಹಸೀಬ್ ಮುಲ್ಲಾಗೆ 10 ವರ್ಷಗಳ ಸಜೆ ವಿಧಿಸಿ ನ್ಯಾಯಾಧೀಶ ಪಿ. ಅರ್. ದೇಶ್ಮುಖ್ ಆದೇಶ ಹೊರಡಿಸಿದ್ದಾರೆ. ಪ್ರಮುಖ ಆರೋಪಿ ಮುಝಾಮಿಲ್ ಅನ್ಸಾರಿಗೆ ಜೀವಾವಧಿ ಶಿಕ್ಷೆಯನ್ನು ನ್ಯಾಯಾಲಯ ಪ್ರಕಟಿಸಿದೆ. ಜತೆಗೆ, ವಾಹಿದ್ ಅನ್ಸಾರಿ ಹಾಗೂ ಫರಾನ್ ಖೋಟ್ ಅವರುಗಳನ್ನೂ ಜೀವಾವಧಿ ಶಿಕ್ಷೆಗೆ ಗುರಿಪಡಿಸಿಲಾಗಿದೆ.

ಪ್ರಕರಣದ ಉಳಿದ ಆರೋಪಿಗಳು ಶಿಕ್ಷಾ ಅವಧಿಯನ್ನು ಈಗಾಗಲೇ ಪೂರೈಸಿರುವ ಹಿನ್ನೆಲೆಯಲ್ಲಿ, ನ್ಯಾಯಾಲಯ ಕೇಳಿರುವ ಬಾಂಡ್ ಸಲ್ಲಿಸಿ ಬಿಡುಗಡೆಯಾಗಲಿದ್ದಾರೆ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಮಾ. 29ರಂದು ಪ್ರಕರಣದ 13 ಆರೋಪಿಗಳ ಪೈಕಿ 10 ಜನರನ್ನು ತಪ್ಪಿತಸ್ಥರು ಎಂದು ನ್ಯಾಯಾಲಯ ತಿಳಿಸಿತ್ತು.

2003ರ ಮಾ. 13ರಂದು ಮುಂಬೈನ ಮುಲುಂದ್ ಬಳಿ ರೈಲಿನಲ್ಲಿ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ 12 ಜನ ಮೃತಪಟ್ಟಿದ್ದರು. ಅದಕ್ಕೂ ಮುಂಚೆ, 2012ರ ಡಿ. 6 ರಂದು ಇಲ್ಲಿನ ಸೆಂಟ್ರಲ್ ನಿಲ್ದಾಣದಲ್ಲಿ ನಡೆದ ಸ್ಫೋಟದಲ್ಲಿ ಹಲವರು ಗಾಯಗೊಂಡಿದ್ದರು. 2003ರ ಜ. 27ರಂದು ಪೂರ್ವ ಮುಂಬೈನಲ್ಲಿ ನಡೆದ ಮಾರುಕಟ್ಟೆ ಸ್ಫೋಟ ಪ್ರಕರಣದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು.

Top