An unconventional News Portal.

ಸಿಎಂ, ಸಚಿವರ ಈವರೆಗಿನ ಪ್ರಯಾಣ ಭತ್ಯೆ ಎಷ್ಟು ಗೊತ್ತಾ?

ಸಿಎಂ, ಸಚಿವರ ಈವರೆಗಿನ ಪ್ರಯಾಣ ಭತ್ಯೆ ಎಷ್ಟು ಗೊತ್ತಾ?

32 ತಿಂಗಳು; ಅಂದರೆ ಹೆಚ್ಚು ಕಡಿಮೆ 960 ದಿನ, 12 ಜನರ ಓಡಾಟ; ಒಟ್ಟು ಖರ್ಚು 11 ಕೋಟಿ ರೂಪಾಯಿ.

ಅಂದಹಾಗೆ, ಹೀಗೆ ಪ್ರತಿ ದಿನ ಸರಾಸರಿ 10 ಸಾವಿರ ರೂಪಾಯಿ ಬರೀ ಪ್ರಯಾಣಕ್ಕಾಗಿ ಖರ್ಷು ಮಾಡಿದವರು ನಮ್ಮ ರಾಜ್ಯ ಸಚಿವರುಗಳು. ಉತ್ತರ ಕರ್ನಾಟಕ ಮೂಲದ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ್ ಪಡೆದ ಆರ್ಟಿಐ ಮಾಹಿತಿಯಲ್ಲಿ ಈ ವಿಚಾರ ಬಹಿರಂಗವಾಗಿದೆ.

ಸಚಿವರುಗಳಾದ ವಿನಯಕುಮಾರ್ ಸೊರಕೆ – 75.89 ಲಕ್ಷ, ಯು.ಟಿ.ಖಾದರ್ – 70.23 ಲಕ್ಷ, ರಮಾನಾಥ ರೈ – 67.99 ಲಕ್ಷ, ಬಾಬುರಾವ್ ಚಿಂಚನಸೂರ್ – 66.33 ಲಕ್ಷ, ಅಭಯಚಂದ್ರ ಜೈನ್ – 60.20 ಲಕ್ಷ, ಪಿ. ಟಿ. ಪರಮೇಶ್ವರ್ ನಾಯ್ಕ್ – 58.04 ಲಕ್ಷ, ಎಸ್.ಆರ್.ಪಾಟೀಲ್-  57.16 ಲಕ್ಷ, ಆರ್. ವಿ. ದೇಶಪಾಂಡೆ – 52.79 ಲಕ್ಷ, ಎಚ್.ಕೆ.ಪಾಟೀಲ್ – 43.09 ಲಕ್ಷ, ಎಂ.ಬಿ. ಪಾಟೀಲ್ – 42.95 ಲಕ್ಷ, ಕಿಮ್ಮನೆ ರತ್ನಾಕರ್- 42.90 ಲಕ್ಷ, ಸತೀಶ ಜಾರಕಿಹೋಳಿ- 40.17ಲಕ್ಷ ರೂಪಾಯಿಗಳನ್ನು ಪ್ರಯಾಣ ಭತ್ಯೆ ರೂಪದಲ್ಲಿ ಪಡೆದುಕೊಂಡಿದ್ದಾರೆ.

ಇದೇ ಅವಧಿಯಲ್ಲಿ, ಸಿಎಂ ಸಿದ್ದರಾಮಯ್ಯ 40.03 ಲಕ್ಷ ರೂ., ಸಾರಿಗೆ ಸಚಿವ ರಾಮಲಿಂಗಾರೆಡ್ಡಿ- 8.71 ಲಕ್ಷ, ಸಹಕಾರಿ ಸಚಿವ ಎಚ್.ಎಸ್.ಮಹಾದೇವ ಪ್ರಸಾದ 7.98ಲಕ್ಷ ರೂ. ಭತ್ಯೆ ಪಡೆದುಕೊಂಡಿದ್ದಾರೆ.

Top