An unconventional News Portal.

ಪತಂಜಲಿ ನೂಡಲ್ಸ್ ಕೂಡ ಬಲು ಡೇಂಜರ್ ಅಂತೆ: ಎಫ್‍ಎಸ್‍ಡಿಎ ವರದಿ

ಪತಂಜಲಿ ನೂಡಲ್ಸ್ ಕೂಡ ಬಲು ಡೇಂಜರ್ ಅಂತೆ: ಎಫ್‍ಎಸ್‍ಡಿಎ ವರದಿ

ಯೋಗ ಗುರು ಬಾಬರಾಮ್ದೇವ್ ಒಡೆತನದ ಪತಾಂಜಲಿ ಅಟಾ ನ್ಯೂಡೆಲ್ಸ್ ಆರೋಗ್ಯಕ್ಕೆ ಹಾನಿಕಾರಕ ಎಂಬ ವಿಚಾರ ಬಹಿರಂಗವಾಗಿದೆ.

ನೆಸ್ಲೆ ಕಂಪನಿಯ ‘ಮ್ಯಾಗಿ’ ಆರೋಗ್ಯ ಹಾನಿಕರ ಎಂಬ ಹಿನ್ನೆಲೆಯಲ್ಲಿ ದೇಶಾದ್ಯಂತ ಇದರ ಮಾರಾಟಕ್ಕೆ ನಿಷೇಧ ಹೇರಲಾಗಿತ್ತು. ಇದೀಗ, ಬಾಬಾರಾಮ್‍ದೇವ್ ಒಡೆತನದ ಪತಂಜಲಿ ನ್ಯೂಡೆಲ್ಸ್‍ನಲ್ಲಿ ಮಿಶ್ರಣ ಮಾಡಿರುವ ಬೂದಿ ಹಾಗೂ ಟೇಸ್ಟ್ ಮೇಕರ್(ರುಚಿ ವರ್ಧಕ) ‘ಮ್ಯಾಗಿ ನೂಡ್ಯೆಲ್ಸ್‍’ಗಿಂತಲೂ ಹಾನಿಕಾರಕ ಎಂದು ಉತ್ತರಪ್ರದೇಶದ ಆರೋಗ್ಯ ಸುರಕ್ಷತೆ ಮತ್ತು ಔಷಧ ನಿಯಂತ್ರಣಾಧಿಕಾರ(ಎಫ್‍ಎಸ್‍ಡಿಎ) ಸಂಸ್ಥೆ ಹೇಳಿದೆ.

ಪತಾಂಜಲಿ ನ್ಯೂಡೆಲ್ಸ್ ಸೇವನೆಯಿಂದ ಆರೋಗ್ಯದ ಮೇಲೆ ಹೆಚ್ಚಿನ ದುಷ್ಪರಿಣಾಮ ಬೀರುತ್ತದೆ. ಸದ್ಯದ ಪರಿಸ್ಥಿತಿಯಲ್ಲೇ ಆರೋಗ್ಯದ ದೃಷ್ಟಿಯಿಂದ ಇದನ್ನು ಸೇವನೆ ಮಾಡುವುದು ಅಷ್ಟು ಸುರಕ್ಷಿತವಲ್ಲ ಎಂದು ವರದಿ ತಿಳಿಸಿದೆ. ಪತಾಂಜಲಿ ನ್ಯೂಡೆಲ್ಸ್‍ಗೆ ನಿಗದಿತ ಪ್ರಮಾಣಕ್ಕಿಂತ ಮೂರು ಪಟ್ಟು ಟೇಸ್ಟ್ ಮೇಕರ್ ಹಾಕಲಾಗಿದೆ. ಇದನ್ನು ಸೇವನೆ ಮಾಡುವುದರಿಂದ ಮನುಷ್ಯನ ನರಗಳು ದೌರ್ಬಲ್ಯವಾಗುವುದಲ್ಲದೆ, ಉಸಿರಾಟದ ತೊಂದರೆ, ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗಬೇಕಾಗುತ್ತದೆ. ಸಾರ್ವಜನಿಕರು ಬಳಕೆ ಮಾಡುವಾಗ ಎಚ್ಚರ ವಹಿಸುವುದು ಸೂಕ್ತ ಎಂದು ಸಲಹೆ ಮಾಡಿದೆ.

ಕಳೆದ ಜ.5ರಂದು ಮೀರತ್‍ನಲ್ಲಿ ಪತಾಂಜಲಿ ಅಟಾ ನ್ಯೂಡೆಲ್ಸ್‍ ಮತ್ತು ಯಿಪ್ಪಿ ನ್ಯೂಡೆಲ್ಸ್ ಮಾದರಿಯನ್ನು ಸಂಗ್ರಹಿಸಿ ಎಫ್‍ಎಸ್‍ಡಿಎಗೆ ಕಳುಹಿಸಿಕೊಡಲಾಗಿತ್ತು. ಕೇಂದ್ರ ಸರ್ಕಾರದ ಎಸ್‍ಎಫ್‍ಡಿಎ ನಿಯಮದಂತೆ ಈ ಪ್ರಮಾಣ ಶೇ.1ರಷ್ಟು ಪ್ರಮಾಣವನ್ನು ದಾಟುವಂತಿಲ್ಲ. ಆದರೆ ಮೂರು ಮಾದರಿಗಳಲ್ಲಿ ಮೂರರಷ್ಟು ಪ್ರಮಾಣ ಇರುವುದರಿಂದ ದೇಶಾದ್ಯಂತ ಮಾರಾಟ ಮಾಡುವುದಕ್ಕೆ ನಿಷೇಧ ಹೇರುವಂತೆ ಉತ್ತರಪ್ರದೇಶ ಸರ್ಕಾರ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.

Leave a comment

Top