An unconventional News Portal.

‘ಹುಚ್ಚರ ಕೈಗೆ ಅಣ್ವಸ್ತ್ರ ಸಿಗದಂತೆ ಎಚ್ಚರಿಕೆ ವಹಿಸಿ’: ಒಬಾಮ ಕರೆ

‘ಹುಚ್ಚರ ಕೈಗೆ ಅಣ್ವಸ್ತ್ರ ಸಿಗದಂತೆ ಎಚ್ಚರಿಕೆ ವಹಿಸಿ’: ಒಬಾಮ ಕರೆ

ತಮ್ಮ ಅಧ್ಯಕ್ಷಾವಧಿಯ ಕೊನೆಯ ದಿನಗಳಲ್ಲಿರುವ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ, ಐಸಿಸ್ ತಹರದ ‘ಹುಚ್ಚು ಜನ’ಗಳ ಕೈಗೆ ಅಣ್ವಸ್ತ್ರ ಸಿಗದಂತೆ ತಡೆಯಬೇಕು ಎಂದು ಅಂತರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡಿದ್ದಾರೆ.

ವಾಷಿಂಗ್ಟನ್ ಡಿಸಿಯಲ್ಲಿ ಶನಿವಾರ ಮುಕ್ತಾಯಗೊಂಡ ನಾಲ್ಕನೆ ಹಾಗೂ ಕೊನೆಯ ‘ನ್ಯೂಕ್ಲಿಯರ್ ಸೇಫ್ಟಿ ಸಮಿತ್’ನ ಉದ್ದೇಶಿಸಿ ಅವರು ಮಾತನಾಡಿದರು. “ಐಸಿಸ್ ಹಾಗೂ ಅಂತಹ ಮಾನವ ವಿರೋಧಿ ಸಂಘಟನೆಗಳಿಂದ ಅಣ್ವಸ್ತ್ರವನ್ನು ರಕ್ಷಿಸಬೇಕಿದೆ. ಈಗಾಗಲೇ 102 ದೇಶಗಳು ಈ ಕುರಿತು ಒಪ್ಪಂದಕ್ಕೆ ಸಹಿ ಮಾಡಿವೆ,” ಎಂದರು.

ಇದರ ಜತೆಗೆ, ಸಭೆಯಲ್ಲಿ ಪಾಲ್ಗೊಂಡ ಭಾರತ ಪ್ರಧಾನಿ ನರೇಂದ್ರ ಮೋದಿ, ಈ ವಿಚಾರದಲ್ಲಿ ಭಾತರ ಕೈಗೊಂಡ ಕ್ರಮಗಳನ್ನು ಅಂತರಾಷ್ಟ್ರೀಯ ನಾಯಕರಿಗೆ ಮನವರಿಕೆ ಮಾಡಿಕೊಟ್ಟರು. ಭಾರತದಲ್ಲಿರುವ ಅಣ್ವಸ್ತ್ರ ಸಿದ್ಧಪಡಿಸುವ ಕಚ್ಚಾವಸ್ತುಗಳ ಸುರಕ್ಷತೆ ಕುರಿತು ತೆಗೆದುಕೊಂಡ ಕ್ರಮಗಳನ್ನು ವಿವರಿಸಿದರು.

ಇತ್ತೀಚೆಗೆ ಬೆಲ್ಜಿಯಂನ ಬ್ರೂಸೆಲ್ಸ್ ಮೇಲೆ ಐಸಿಸ್ ನಡೆಸಿದ ದಾಳಿ ಹಿನ್ನೆಲೆಯಲ್ಲಿ ಅಣ್ವಸ್ತ್ರ ರಕ್ಷಣೆ ಸುತ್ತ ಆತಂಕ ಮೂಡಿಸಿದೆ. ಗುಪ್ತಚರ ಮಾಹಿತಿ ಪ್ರಕಾರ ಐಸಿಸ್ ಬೆಲ್ಜಿಯಂನ ಹಿರಿಯ ಅಣು ವಿಜ್ಞಾನಿಗಳ ಚಲನವಲನಗಳನ್ನು ರಹಸ್ಯವಾಗಿ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದೆ ಎಂಬ ವಿಚಾರ ಬಹಿರಂಗವಾಗಿದೆ. ಜಗತ್ತಿನಾದ್ಯಂತ ಒಟ್ಟಾರೆ 2 ಸಾವಿರ ಟನ್ಗಳಷ್ಟು ಅಣ್ವಸ್ತ್ರ ಸಿದ್ಧಪಡಿಸುವ ಕಚ್ಚಾವಸ್ತುಗಳ ದಾಸ್ತಾನಿದೆ. ಆದರೆ, ಇದು ಪೂರ್ಣ ಪ್ರಮಾಣದಲ್ಲಿ ಸುರಕ್ಷಿತವಾಗಿಲ್ಲ ಎಂಬುದು ಅಂತರಾಷ್ಟ್ರೀಯ ಸಮುದಾಯದ ಆತಂಕಕ್ಕೆ ಕಾರಣವಾಗಿದೆ.

ಈ ನಡುವೆ ರಷ್ಯಾ ಇಡೀ ಪ್ರಕ್ರಿಯೆಯಿಂದ  ಹೊರಗೆ ಉಳಿದಿದೆ.

ENTER YOUR E-MAIL

Name
Email *
February 2017
M T W T F S S
« Jan    
 12345
6789101112
13141516171819
20212223242526
2728  

Top