An unconventional News Portal.

ಹೆಡ್ಲಿಗೇಕೆ ಭಾರತ ಕಂಡರೆ ಸಿಟ್ಟು?: ಮುಂದುವರಿದ ಡೇವಿಡ್ ಹೆಡ್ಲಿ ತಪ್ಪೊಪ್ಪಿಗೆ…

ಹೆಡ್ಲಿಗೇಕೆ ಭಾರತ ಕಂಡರೆ ಸಿಟ್ಟು?: ಮುಂದುವರಿದ ಡೇವಿಡ್ ಹೆಡ್ಲಿ ತಪ್ಪೊಪ್ಪಿಗೆ…

ಸದ್ಯ ಅಮೆರಿಕಾ ಜೈಲಿನಿಂದಲೇ ಭಾರತದ ವಿಶೇಷ ನ್ಯಾಯಾಲಯಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹೇಳಿಕೆ ನೀಡುತ್ತಿರುವ ಡೇವಿಡ್ ಕೋಲ್ಮನ್ ಹೆಡ್ಲಿ ಸಂಗ್ರಹ ಚಿತ್ರ.

ಸದ್ಯ ಅಮೆರಿಕಾ ಜೈಲಿನಿಂದಲೇ ಭಾರತದ ವಿಶೇಷ ನ್ಯಾಯಾಲಯಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹೇಳಿಕೆ ನೀಡುತ್ತಿರುವ ಡೇವಿಡ್ ಕೋಲ್ಮನ್ ಹೆಡ್ಲಿ ಸಂಗ್ರಹ ಚಿತ್ರ.

ಮುಂಬೈ ದಾಳಿಯ ರೂವಾರಿ ಡೆವಿಡ್ ಹೆಡ್ಲಿ, ತನಗೇಕೆ ಭಾರತದ ಮೇಲೆ ಸಿಟ್ಟು ಎಂಬುದನ್ನು ಇದೇ ಮೊದಲ ಬಾರಿಗೆ ಹೇಳಿಕೊಂಡಿದ್ದಾನೆ.

1971ರಲ್ಲಿ ತಾನು ಓದುತ್ತಿದ್ದ ಶಾಲೆಯ ಮೇಲೆ ಭಾರತಕ್ಕೆ ಸೇರಿದ ವಿಮಾನವೊಂದು ಬಾಂಬ್ ದಾಳಿ ನಡೆಸಿತ್ತು. ಅಂದಿನಿಂದಲೂ ಭಾರತದ ಮೇಲೆ ಸಿಟ್ಟಿತ್ತು. ಆ ಕಾರಣಕ್ಕಾಗಿ ತಾನು ಭಾರತದ ವಿರುದ್ದ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದ್ದೆ ಎಂದು ಡೆವಿಡ್ ಹೆಡ್ಲಿ ಹೇಳಿಕೊಂಡಿದ್ದಾನೆ.

ಕಳೆದ ಮೂರು ದಿನಗಳಿಂದ ಮುಂಬೈ ವಿಶೇಷ ನ್ಯಾಯಾಲಯದಲ್ಲಿ ಡೇವಿಡ್ ಹೆಡ್ಲಿಯ ವಿಚಾರಣೆ ನಡೆಯುತ್ತಿದೆ. ಅಮೆರಿಕಾದಲ್ಲಿರುವ ಆರೋಪಿ ವೀಡಿಯೋ ಕಾನ್ಫ್ರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹೇಳಿಕೆ ಕೊಡುತ್ತಿದ್ದಾನೆ. ವಕೀಲ ಅಬ್ದುಲ್ ವಾಹಬ್ ಖಾನ್ ಹೆಡ್ಲಿಗೆ ಕ್ರಾಸ್ ಎಗ್ಸಾಮಿನೇಶನ್ ನಡೆಸುತ್ತಿದ್ದಾರೆ.

ಈ ವಿಚಾರಣೆ ವೇಳೆ ಡೇವಿಡ್ ಹೆಡ್ಲಿ, ಪಾಕಿಸ್ತಾನದ ಮಾಜಿ ಪ್ರದಾನಿ ಯೂಸೂಫ್ ರಾಜಾ ಗಿಲಾನಿ ತನ್ನ ತಂದೆಯ ಸಾವಿನ ಕೆಲ ವಾರಗಳ ನಂತರ ತನ್ನನ್ನು ಭೇಟಿಯಾಗಲು ಬಂದಿದ್ರು ಎಂಬ ವಿಚಾರವನ್ನು ಕೋರ್ಟ್ ಮುಂದೆ ಹೇಳಿಕೊಂಡಿದ್ದಾನೆ ಎಂದು ವರದಿಯಾಗಿದೆ. ಡೆವಿಡ್ ಹೆಡ್ಲಿಯ ತಂದೆ ‘ರೇಡಿಯೋ ಪಾಕಿಸ್ತಾನ’ ದ ನಿರ್ದೇಶಕರಾಗಿ ನಿವೃತ್ತಿಯಾದ್ದರು. ಹಾಗಿದ್ರೂ ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿರಲಿಲ್ಲ ಎಂದು ಹೆಡ್ಲಿ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದ್ದಾನೆ.

ತನ್ನ ಸೋದರ ಸೇರಿದಂತೆ ಅನೇಕ ಕುಟುಂಬಸ್ಥರು ಪಾಕಿಸ್ತಾನದ ಪರವಾಗಿ ಕರ್ತವ್ಯದಲ್ಲಿ ತೊಡಗಿಸಿಕೊಂಡಿದ್ದರೆ ಎಂದು ಹೆಡ್ಲಿ ನೀಡಿದ ಹೇಳಿಕೆಯನ್ನು ನ್ಯಾಯಾಲಯ ದಾಖಲಿಸಿಕೊಂಡಿದೆ.

ಇನ್ನು, ಶಿವ ಸೇನೆಯ ಮುಖ್ಯಸ್ಥರಾಗಿದ್ದ ಬಾಳಾ ಠಾಕ್ರೆ ಹತ್ಯೆ ಸಂಬಂಧ ತಾನು ಎರಡು ಭಾರಿ ಮುಂಬೈನ ಸೇನಾ ಭವನಕ್ಕೆ ಭೇಟಿ ನೀಡಿದ್ದೆ. ಅಲ್ಲದೆ ಹತ್ಯೆಯ ಜವಾಬ್ದಾರಿ ನೀಡಿದ್ದ ವ್ಯಕ್ತಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದರಿಂದ ಅದು ಸಫಲವಾಗಿಲ್ಲ ಎಂದು ಮೊದಲನೇ ದಿನದ ವಿಚಾರಣೆಯಲ್ಲಿ ಹೇಡ್ಲಿ ಬಹಿರಂಗಪಡಿಸಿದ್ದ.

ಕಳೆದ ಮೂರು ದನಗಳಿಂದ ನಡೆಯುತ್ತಿರುವ ವಿಚಾರಣೆಯಲ್ಲಿ ಹಲವು ಸಂಗತಿಗಳನ್ನು ಹೆಡ್ಲಿ ಹೇಳಿರುವುದಾಗಿ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

Leave a comment

Top