An unconventional News Portal.

‘ಲೈಕಿ’ಗೊಂದು ಭಾವ ಬೆರೆಸಿ; ಈತ ಪಕ್ಕಾ ವ್ಯಾಪಾರಿ ಕಂಡ್ರಿ!

‘ಲೈಕಿ’ಗೊಂದು ಭಾವ ಬೆರೆಸಿ; ಈತ ಪಕ್ಕಾ ವ್ಯಾಪಾರಿ ಕಂಡ್ರಿ!

ಜಗತ್ತಿನ ಅತೀ ಹೆಚ್ಚು ಬಳಕೆದಾರರನ್ನು ಹೊಂದಿರುವ ಸಾಮಾಜಿಕ ಜಾಲತಾಣ ಫೇಸ್ ಬುಕ್. ತನ್ನ ವಿಶಿಷ್ಟ, ಸರಳ ವ್ಯವಸ್ಥೆಯಿಂದಾಗಿ ಬಲುಬೇಗ ಬಳಕೆದಾರರನ್ನು ಸೆಳೆದದ್ದು ಇದರ ಹೆಗ್ಗಳಿಕೆ.

ಇತ್ತೀಚಿನವರೆಗೂ ಫೇಸ್ ಬುಕ್ ನಲ್ಲಿ ಯಾವುದೇ ಪೋಸ್ಟ್ ಗೆ ಲೈಕ್ ಮತ್ತು ಕಮೆಂಟ್ ಮಾಡುವ ಅವಕಾಶ ಮಾತ್ರ ಇತ್ತು. ಆದರೆ ಈಗ ಇದಕ್ಕೆ ಇನ್ನೂ ಒಂದಷ್ಟು ಆಯ್ಕೆಗಳನ್ನು ಸೇರಿಸಿದೆ ಫೇಸ್ ಬುಕ್. ಲೈಕ್ ಜೊತೆಗೆ ನಿಮ್ಮ ಭಾವನೆಗಳನ್ನೂ ವ್ಯಕ್ತಪಡಿಸಲು ಐದು ಆಯ್ಕೆಗಳನ್ನು ನೀಡಿದೆ. ಅಲ್ಲಿ ನೀವು ಫೊಸ್ಟ್ ಗಳ ಮೇಲೆ ಆಕ್ರೋಷ ಹೊರ ಹಾಕಬಹುದು. ವಾವ್ ಎಂದು ಉದ್ಘಾರ ಹೊರಡಿಸಲು ಅವಕಾಶಗಳಿವೆ. ಹ್ಹ ಹ್ಹ ಅಂತ ನಗಬಹುದು. ಬೇಜಾರು ಅಂತ ಕಣ್ಣೀರು ಸುರಿಸಬಹುದು. ಪ್ರೀತಿಯನ್ನೂ ತೋರಿಸಬಹುದು. ಹೀಗೆ ಹೊಸ ಆಯ್ಕೆಗಳನ್ನು ಜನರ ಮುಂದಿಟ್ಟಿದೆ ಫೇಸ್ ಬುಕ್.

Capture

ಇಷ್ಟರವರೆಗೆ ನಿಮ್ಮ ಆಕ್ರೋಷ ಹೊರ ಹಾಕಬೇಕಿದ್ದರೆ ಕಮೆಂಟ್ ಮಾಡಬೇಕಾಗಿತ್ತು. ಕಮೆಂಟ್ ಬ್ಲಾಕ್ ಮಾಡಿದ್ರೆ ಹಾಗೆ ಸುಮ್ಮನೆ ಆಕ್ರೋಷ ನುಂಗಿಕೊಂಡು ಸುಮ್ಮನಾಗಬೇಕಿತ್ತು. ಆದರೆ ಈ ಹೊಸ ನಿರ್ಧಾರದಿಂದ ನಿಮ್ಮ ಆಕ್ರೋಷವನ್ನೂ ಪೋಸ್ಟ್ ಗಳ ಮೇಲೆ ತೋರಿಸಬಹುದು.

ಈ ಹಿಂದೆಯೇ ಲೈಕ್ ಬಟನ್ ಜೊತೆಗೆ ಡಿಸ್ ಲೈಕ್ ಬಟನ್ ನೀಡುವಂತೆ ಭಾರೀ ಒತ್ತಾಯಗಳು ಕೇಳಿ ಬಂದಿದ್ವು. ಈ ನಿಟ್ಟಿನಲ್ಲಿ ಫೇಸ್ ಬುಕ್ ಹೊಸ ಡಿಸ್ ಲೈಕ್ ಆಯ್ಕೆ ನೀಡುವ ಬಗ್ಗೆಯೂ ಆಲೋಚಿಸಿತ್ತು. ಆದರೆ ಇದಕ್ಕೆಲ್ಲಾ ಕೊನೆ ಹಾಡಿರುವ ಝುಕರ್ ಬರ್ಗ್ ಈ ಹೊಸ ಆಯ್ಕೆಯನ್ನು ಜನರ ಮುಂದಿಟ್ಟಿದ್ದಾರೆ. ಇನ್ನು ಈ ಎಮೋಜಿಗಳನ್ನು ಕಳೆದ ಅಕ್ಟೋಬರ್ ನಲ್ಲೇ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿತ್ತು. ಸ್ಪೇನ್ ಮತ್ತು ಐರ್ಲೆಂಡ್ ಗಳಲ್ಲಿ ಪ್ರಯೋಗ ಯಶಸ್ವಿಯಾದ ನಂತರವಷ್ಟೇ ಈ ಎಮೋಜಿಗಳನ್ನು ಫೇಸ್ ಬುಕ್ ಬಳಕೆಗೆ ತಂದಿದೆ.

ಕೊನೆಯದಾಗಿ ಒಂದಂತೂ ಸತ್ಯ. ದೇಶಪ್ರೇಮಿಗಳು ಮತ್ತು ದೇಶ ಭಕ್ತರ ಗಲಾಟೆಗೆ ಇದು ಹೇಳಿ ಮಾಡಿಸಿದ ಆಯ್ಕೆ. ನೀವು ಹೆಚ್ಚು ಹೆಚ್ಚು ಜಗಳವಾಡಿದಷ್ಟೂ ನಮಗೆ ಒಳ್ಳೆಯದು ಎನ್ನುತ್ತಿದ್ದಾರೆ ಅಮೆರಿಕಾದಲ್ಲೇ ಕುಳಿತು ಜೇಬು ತುಂಬಿಸಲು ಹೊರಟ ಮಾರ್ಕ್ ಝುಕರ್ ಬರ್ಗ್.

Top