An unconventional News Portal.

ಮೂರು ವರ್ಷದ ನಂತರ ಸೆರೆ ಸಿಕ್ಕ ಸಿಮಿ ಕಾರ್ಯಕರ್ತರು

ಮೂರು ವರ್ಷದ ನಂತರ ಸೆರೆ ಸಿಕ್ಕ ಸಿಮಿ ಕಾರ್ಯಕರ್ತರು

Khandwa_jail_simi_escape-2

2013ರಲ್ಲಿ ಖಂಡ್ವಾ ಜೈಲಿನಿಂದ ಪರಾರಿಯಾಗಿದ್ದ ಸಿಮಿ ಕಾರ್ಯಕರ್ತರು

ಮೂರು ವರ್ಷಗಳ ಹಿಂದೆ ಜೈಲಿನಿಂದ ಪರಾರಿಯಾಗಿದ್ದ ನಾಲ್ವರು ಸ್ಟೂಡೆಂಟ್ ಇಸ್ಲಾಮಿಕ್ ಮೂವ್ಮೆಂಡ್ ಆಫ್ ಇಂಡಿಯಾ (ಸಿಮಿ) ಕಾರ್ಯಕರ್ತರನ್ನು ಬುಧವಾರ ಒರಿಸ್ಸಾದಲ್ಲಿ ಬಂಧಿಸಲಾಗಿದೆ. ಮಹಮದ್ ಖಾಲಿದ್, ಅಮ್ಜದ್ ಖಾನ್, ಝಾಕೀರ್ ಹುಸೇನ್ ಹಾಗೂ ಎಸ್. ಮಹಮದ್ ಸೆರೆ ಸಿಕ್ಕವರು.

ಮಧ್ಯಪ್ರದೇಶದ ಖಡ್ವಾ ಜಿಲ್ಲಾ ಕಾರಾಗೃಹ.

ಮಧ್ಯಪ್ರದೇಶದ ಖಡ್ವಾ ಜಿಲ್ಲಾ ಕಾರಾಗೃಹ.

ನಾಲ್ವರು 2013ರ ಸುಮಾರಿಗೆಮಧ್ಯಪ್ರದೇಶದ ಖಂಡ್ವಾ ಜಿಲ್ಲಾ ಕಾರಾಗೃಹದಿಂದ ತಪ್ಪಿಸಿಕೊಂಡು ತಲೆಮರೆಸಿಕೊಂಡರು. ‘ಬುಧವಾರ ಮುಂಜಾನೆ ರೋರ್ಖೇಲ ಜಿಲ್ಲೆಯಲ್ಲಿ ಗುಂಡಿನ ಚಕಮಕಿ ನಂತರ ಆರೋಪಿಗಳನ್ನು ಒರಿಸ್ಸಾ ಹಾಗೂ ತೆಲಂಗಾಣ ಜಂಟಿ ಪೊಲೀಸ್ ಪಡೆ ವಶಕ್ಕೆ ಪಡೆಯಿತು,’ ಎಂದು ಎನ್ ಡಿ ಟಿವಿ ವರದಿ ಮಾಡಿದೆ.

2013ರ ಅಕ್ಟೋಬರ್ ಒಂದರಂದು ಒಟ್ಟು ಏಳು ನಿಷೇಧಿತ ಸಿಮಿ ಸಂಘಟನೆಯ ಕಾರ್ಯಕರ್ತರು ಜೈಲಿನಿಂದ ತಪ್ಪಿಸಿಕೊಂಡಿದ್ದರು. ಒಬ್ಬ ಆರೋಪಿ ಮಾರನೇ ದಿನವೇ ಪೊಲೀಸರಿಗೆ ಶರಣಾಗಿದ್ದ. ಮತ್ತೊಬ್ಬನನ್ನು ಅದೇ ವರ್ಷ ವಶಕ್ಕೆ ಪಡೆಯಲಾಗಿತ್ತು. ಜೈಲಿನ 14 ಅಡಿ ಗೋಡೆಯನ್ನು ಹಾರಿ ಆರೋಪಿಗಳು ತಪ್ಪಿಸಿಕೊಂಡಿದ್ದರು. ಇದರ ಮಾಸ್ಟರ್ ಮೈಂಡ್ ಎಂದು ಪೊಲೀಸರು ಹೇಳಿತ್ತಿರುವ ಫೈಝಲ್ ಇನ್ನೂ ತಲೆ ಮರೆಸಿಕೊಂಡಿದ್ದಾನೆ.

Photos: Internet

Top