An unconventional News Portal.

ಭಾರತೀಯ ಮಾಧ್ಯಮಗಳ ಹಾದಿ ಹಿಡಿಯಬೇಡಿ ಎಂದ ಪಾಕಿಸ್ತಾನ ಮಾಧ್ಯಮ ಪ್ರಾಧಿಕಾರ!

ಭಾರತೀಯ ಮಾಧ್ಯಮಗಳ ಹಾದಿ ಹಿಡಿಯಬೇಡಿ ಎಂದ ಪಾಕಿಸ್ತಾನ ಮಾಧ್ಯಮ ಪ್ರಾಧಿಕಾರ!

ಬ್ರೂಸೆಲ್ಸ್ ದಾಳಿ ನಡೆದ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಮಾಧ್ಯಮಗಳು ತೋರಿದ ಸಂಯಮವನ್ನು ಪಾಲಿಸಬೇಕೇ ಹೊರತು, ವ್ಯಾಪಾರೀಕರಣದ ಹಿಂದೆ ಬಿದ್ದಿರುವ ಭಾರತದ ಮಾಧ್ಯಮಗಳ ಹೆಜ್ಜೆ ಗುರುತುಗಳನ್ನಲ್ಲ. ಈ ಮಾತನ್ನು ನೀವು ಒಪ್ಪುತ್ತೀರೋ? ಬಿಡುತ್ತೀರೋ, ಅದಕ್ಕೂ ಮೊದಲು ಹೀಗೆ ಹೇಳಿದವರು ಯಾರು ಅಂತ ಕೇಳಿ ಬಿಡಿ. ಹೀಗಂತ ಹೇಳಿರೋದು ಇಸ್ಲಮಾಬಾದ್ ನಲ್ಲಿರುವ ಪಾಕಿಸ್ತಾನ ಎಲೆಕ್ಟ್ರಾನಿಕ್ ಮಾಧ್ಯಮ ನಿಯಂತ್ರಣ ಪ್ರಾಧಿಕಾರ. ಇಂಥಹದ್ದೊಂದು ನಿರ್ದೇಶನವನ್ನು ಪ್ರಾಧಿಕಾರ ಪಾಕಿಸ್ತಾನ ಮಾಧ್ಯಮಗಳಿಗೆ ನೀಡಿದೆ.

ಲಾಹೋರ್ ದಾಳಿಯಾದ ಬೆನ್ನಿಗೇ ಇಂತಹದ್ದೊಂದು ನಿರ್ದೇಶನ ಹೊರ ಬಿದ್ದಿದೆ. ಲಾಹೋರ್, ಇಸ್ಲಾಮಾಬಾದ್, ಮತ್ತು ಕರಾಚಿಯ ಮೇಲೆ ಉಗ್ರರ ದಾಳಿಯಾದಾಗ ಮಾಧ್ಯಮ ಸಂಸ್ಥೆಗಳು ನಡೆದುಕೊಂಡ ರೀತಿಗೆ ಮಾಧ್ಯಮ ಸಂಸ್ಥೆ ಆಕ್ಷೇಪ ಎತ್ತಿದೆ. ‘ಉಗ್ರರ ದಾಳಿ ಮುಂತಾದ ಅಹಿತಕರ ಘಟನೆಗಳಾದಾಗ ಮಾಧ್ಯಮಗಳು ವೃತ್ತಿಪರ ಜವಾಬ್ದಾರಿಯಿಂದ ವರ್ತಿಸಬೇಕು. ಮಾಧ್ಯಮಗಳ ಬೇಜಾವಾಬ್ದಾರಿಯುತ ವರ್ತನೆಗಳು ರಾಷ್ಟ್ರೀಯ ಕಾರ್ಯ ಯೋಜನೆಗೆ ಧಕ್ಕೆ ತರುತ್ತವೆ. ಅದಕ್ಕಾಗಿ ಬ್ರಸೆಲ್ಸ್ ದಾಳಿ ವೇಳೆ ಅಂತರಾಷ್ಟ್ರೀಯ ಮಾಧ್ಯಮಗಳು ತುಳಿದ ಹಾದಿಯಲ್ಲಿ ಸಾಗಿ, ವ್ಯಾಪಾರದ ಹಿಂದೆ ಬಿದ್ದಿರುವ ಭಾರತೀಯ ಮಾಧ್ಯಮಗಳ ದಾರಿಯತ್ತ ನೀವೂ ಕಣ್ಣು ಹಾಯಿಸಬೇಡಿ. ರೇಟಿಂಗ್ ಗಾಗಿ ಅತಿರೇಕದ ವರದಿಗಳನ್ನು ಪ್ರಸಾರ ಮಾಡುವುದು ಬೇಡ, ಅದು ಪಾಕಿಸ್ತಾನದಲ್ಲಿ ಅರಾಜಕತೆ ಇದೆ ಸಂದೇಶವನ್ನು ದೇಶ ವಿದೇಶದ ಪ್ರೇಕ್ಷಕರಿಗೆ ತಲುಪಿಸುತ್ತವೆ. ಅಹಿತಕರ ಘಟನೆಗಳು ನಡೆದ ಸವಾಲಿನ ಸಂದರ್ಭಗಳಲ್ಲಿ, ವೃತ್ತಿ ಧರ್ಮವನ್ನು ಪಾಲಿಸುವ ಜತೆಗೆ ಧನಾತ್ಮಕ ಪಾತ್ರವಹಿಸುವುದ ಅಗತ್ಯ. ಸುದ್ದಿಗಳ ಪ್ರಸಾರದಲ್ಲ ಪ್ರಬುದ್ಧ ಮತ್ತು ಉನ್ನತ ವೃತ್ತಿಪರತೆ ಕಾಯ್ದುಕೊಳ್ಳಬೇಕು. ಇದು ಸುದ್ದಿಕೇಂದ್ರದಲ್ಲಿರುವ ಹಿರಿಯ ಸಂಪಾದಕೀಯ ಪತ್ರಕರ್ತರ ಕೆಲಸ’ ಎಂದು ಷರಾ ಬರೆದಿದೆ.

Leave a comment

Top