An unconventional News Portal.

ಭಯೋತ್ಪಾದಕರಿಂದ ಅಣ್ವಸ್ತ್ರ ರಕ್ಷಣೆಗೆ ಪಣ: ಭಾರತ ಕೂಡ ಅಮೆರಿಕಾ ಬಣ

ಭಯೋತ್ಪಾದಕರಿಂದ ಅಣ್ವಸ್ತ್ರ ರಕ್ಷಣೆಗೆ ಪಣ: ಭಾರತ ಕೂಡ ಅಮೆರಿಕಾ ಬಣ

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

ಅಮೆರಿಕಾದ ವಾಷಿಂಗ್ಟನ್ನಲ್ಲಿ ಗುರುವಾರ ಹಾಗೂ ಶುಕ್ರವಾರ ನಡೆದ ನಾಲ್ಕನೇ ಹಾಗೂ ಕೊನೆಯ ನ್ಯೂಕ್ಲಿಯರ್ ಸೇಫ್ಟಿ ಸಮಿಟ್ (ಎನ್ಎಸ್ಎಸ್) ಭಯೋತ್ಪಾದಕರ ಕೈಗೆ ಅಣ್ವರ್ಥ ಹೋಗದಂತೆ ತಡೆಯುವ ಆಶಯವನ್ನು ವ್ಯಕ್ತಪಡಿಸಲಿದೆ.

ಒಟ್ಟು 56 ದೇಶಗಳು ಹಾಗೂ 4 ಅಂತರಾಷ್ಟ್ರೀಯ ಸಂಸ್ಥೆಗಳು ಈ ಸಭೆಯಲ್ಲಿ ಪಾಲ್ಗೊಳ್ಳುತ್ತಿವೆ. ಆದರೆ, ಇದರಿಂದ ಹೊರಗೆ ಉಳಿದಿರುವ ರಷ್ಯಾ, ‘ಈಗಿರುವ ಅಣ್ವಸ್ತ್ರ ರಕ್ಷಣಾ ಮಾರ್ಗಗಳೇ ಸಾಕು,’ ಎಂದಿದೆ. ಹೀಗಾಗಿ, ಎನ್ಎಸ್ಎಸ್ನಿಂದ ಹೊರಗುಳಿಯುವುದಾಗಿ ಘೋಷಿಸಿದೆ.

ಇತ್ತೀಚೆಗೆ ಉತ್ತರ ಕೋರಿಯಾ ಅಂತರಾಷ್ಟ್ರೀಯ ಅಣ್ವಸ್ತ್ರ ನೀತಿಗಳನ್ನು ಬದಿಗೆ ಸರಿಸಿ ವಿನಾಶಕಾರಿ ಆಯುಧದ ಪ್ರಯೋಗವನ್ನು ನಡೆಸಿತ್ತು. ಜತೆಗೆ ಐಸಿಸ್ ಕೂಡ ಅಣ್ವಸ್ತ್ರ ಹೊಂದುವ ಮಾತುಗಳನ್ನು ಆಡಿತ್ತು. ಈ ಹಿನ್ನೆಲೆಯಲ್ಲಿ ಅಣ್ವಸ್ತ್ರ ಸುರಕ್ಷತಾ ಸಭೆ ಮಹತ್ವ ಪಡೆದುಕೊಂಡಿದೆ.

ಇದರ ನಡುವೆಯೇ ಇದು ಅಮೆರಿಕಾ ಕೇಂದ್ರಿಯ ಅಣ್ವಸ್ತ್ರ ನೀತಿಗಳನ್ನು ಜಗತ್ತಿನ ಮೇಲೆ ಹೇರುವ ಸಂಚು ಎಂಬ ಆರೋಪವೂ ಕೇಳಿಬಂದಿದೆ. ಈ ವಿಚಾರದಲ್ಲಿ ರಷ್ಯಾ ಸೇರಿದಂತೆ ಕೆಲವು ದೇಶಗಳು ಹೊರಗುಳಿದಿರುವುದು ಈ ಆರೋಪವನ್ನು ಪುಷ್ಟೀಕರಿಸಿವೆ. ಸದ್ಯ ಭಾರತ ಸಭೆಯಲ್ಲಿ ಪಾಲ್ಗೊಳ್ಳುವ ಮೂಲಕ ಅಮೆರಿಕಾ ಜತೆ ತನ್ನ ಎಂದಿನ ಸ್ನೇಹ ಸಂಬಂಧವನ್ನು ಮುಂದುವರಿಸುವ ಸೂಚನೆ ನೀಡಿದೆ.

ಎನ್ಎಸ್ಎಸ್ 2010ರಲ್ಲಿ ಅಸ್ಥಿತ್ವಕ್ಕೆ ಬಂತು. ಈವರೆಗೆ ಮೂರು ಸಭೆಗಳು ನಡೆದಿದ್ದು, ಇದು ನಾಲ್ಕನೆಯದ್ದು ಮತ್ತು ಕೊನೆಯ ಮಾತುಕತೆಯಾಗಲಿದೆ.

Top