An unconventional News Portal.

ಬಿಜೆಪಿ ಸರಕಾರದ ಯೋಜನೆಗೆ ಅಮೀರ್ ಖಾನ್ ರಾಯಭಾರಿ

ಬಿಜೆಪಿ ಸರಕಾರದ ಯೋಜನೆಗೆ ಅಮೀರ್ ಖಾನ್ ರಾಯಭಾರಿ

amir khan-maharastra-brand-1ಮಹಾರಾಷ್ಟ್ರದ ಬಿಜೆಪಿ ಸರಕಾರ ತನ್ನ ಯೋಜನೆಯ ಬ್ರಾಂಡ್ ಅಂಬಾಸಿಡರ್ ಆಗಿ ನಟ ಅಮೀರ್ ಖಾನ್ ಅವರನ್ನು ನೇಮಿಸಿಕೊಳ್ಳಲಿದೆ. ಈ ಕುರಿತು ಬುಧವಾರ ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆ ಇದೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅಮೀರ್ ಖಾನ್ ಅವರನ್ನು ‘ಬರಗಾಲ ಮುಕ್ತ ರಾಜ್ಯ ಯೋಜನೆ’ಯ ರಾಯಭಾರಿಯಾಗಿ ಘೋಷಿಸಲಿದ್ದಾರೆ.

ತಿಂಗಳ ಹಿಂದಷ್ಟೆ ನಟ ಅಮೀರ್ ಖಾನ್ ‘ಅಸಹಿಷ್ಣುತೆ’ ಕುರಿತು ನೀಡಿದ ಪ್ರತಿಕ್ರಿಯೆ ವಿವಾದಕ್ಕೆ ಕಾರಣವಾಗಿತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಹಾಗೂ ಸಂಘಪರಿವಾರದ ಪರ ಇರುವವರು ನಟನನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ‘Incredible India’ ಅಭಿಯಾನದಿಂದ ಅಮೀರ್ ಖಾನ್ ಅವರನ್ನು ಹೊರಗಿಡಲಾಗಿತ್ತು.

ಇದೀಗ ಮಹಾರಾಷ್ಟ್ರದ ಬಿಜೆಪಿ ಸರಕಾರ ಅಮೀರ್ ಖಾನ್ ಅವರನ್ನು ತನ್ನ ಯೋಜನೆಯೊಂದರ ರಾಯಭಾರಿಯಾಗಿ ಆಯ್ಕೆ ಮಾಡಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದೆ. ಕಳೆದ ಮೂರು ತಿಂಗಳ ಅವಧಿಯಲ್ಲಿ ಮಹಾರಾಷ್ಟ್ರದಲ್ಲಿ ಸುಮಾರು ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ರಾಜ್ಯ ಸರಕಾರ ಬಾಂಬೆ ಹೈಕೋರ್ಟ್ ಮುಂದೆ ಅಫಿಡವಿಟ್ ಸಲ್ಲಿಸಿತ್ತು.

amir khan-maharastra-brand-2

ಜತೆಗೆ, ರೈತರ ಸರಣಿ ಆತ್ಮಹತ್ಯೆ ತಡೆಗೆ ‘ಬರಗಾಲ ಮುಕ್ತ ಯೋಜನೆ’ಯೊಂದನ್ನು ಘೋಷಿಸಿದೆ. ಈ ಮೂಲಕ ರಾಜ್ಯದ ರೈತಾಪಿ ವರ್ಗದ ತಲ್ಲಣಗಳನ್ನು ಪರಿಹರಿಸಲು ಮುಖ್ಯಮಂತ್ರಿ ಫಡ್ನವೀಸ್ ಮುಂದಾಗಿದ್ದಾರೆ. ಯೋಜನೆಯನ್ನು ಜನಪ್ರಿಯಗೊಳಿಸಲು ಅವರು ಬಾಲಿವುಡ್ ನಟ ಅಮೀರ್ ಖಾನ್ ಮೊರೆ ಹೋಗಿದ್ದಾರೆ. ಇದಕ್ಕೆ ಬಿಜೆಪಿ ವಲಯದಲ್ಲಿ ಯಾವ ಪ್ರತಿಕ್ರಿಯೆ ವ್ಯಕ್ತವಾಗಬಹುದು ಎಂಬ ನಿರೀಕ್ಷೆ ಎಲ್ಲರಲ್ಲಿದೆ.

Photos: Internet

Top