An unconventional News Portal.

ಗೃಹಬಳಕೆ ವಿದ್ಯುತ್ ದರದಲ್ಲಿ ದಾಖಲೆಯ ಹೆಚ್ಚಳ: ಗ್ರಾಮೀಣ ಕೈಗಾರಿಕೆಗಳಿಗೂ ಶಾಕ್ ಟ್ರೀಟ್ಮೆಂಟ್!

ಗೃಹಬಳಕೆ ವಿದ್ಯುತ್ ದರದಲ್ಲಿ ದಾಖಲೆಯ ಹೆಚ್ಚಳ: ಗ್ರಾಮೀಣ ಕೈಗಾರಿಕೆಗಳಿಗೂ ಶಾಕ್ ಟ್ರೀಟ್ಮೆಂಟ್!

Karnataka-power-price-hikeಅನಿಯಮಿತ ವಿದ್ಯುತ್ ಪೂರೈಕೆ ನಡುವೆಯೇ ಗೃಹ ಬಳಕೆಯ ವಿದ್ಯುತ್ ದರವನ್ನು ದಾಖಲೆ ಪ್ರಮಾಣದಲ್ಲಿ ಏರಿಸಲಾಗಿದೆ.

ಪ್ರತಿ ಯೂನಿಟ್ ಬಳಕೆಗೆ 30ರಿಂದ 50 ಪೈಸೆ ಹೆಚ್ಚಳ ಮಾಡಲು ‘ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ’ (ಕೆಇಆರ್ಸಿ) ಬುಧವಾರ ಒಪ್ಪಿಗೆ ಸೂಚಿಸಿದೆ.

ಇದರ ಜತೆಗೆ ‘ಭಾಗ್ಯಜ್ಯೋತಿ’ ಹಾಗೂ ‘ಕುಟೀರ ಜ್ಯೋತಿ’ ಯೋಜನೆಗಳ ಅಡಿ ವಿದ್ಯುತ್ ಬಳಸುತ್ತಿದ್ದ ಗ್ರಾಹಕರಿಗೂ ಈ ಹೆಚ್ಚಳದ ಬಿಸಿ ತಟ್ಟಲಿದೆ. ಪ್ರತಿ ಯೂನಿಟ್ಗೆ 48 ಪೈಸೆ ಹೆಚ್ಚಳ ಮಾಡಲು ಆಯೋಗ ಹಸಿರು ನಿಶಾನೆ ತೋರಿಸಿದೆ. ಇತ್ತೀಚಿನ ದಿನಗಳಲ್ಲಿ ವಿದ್ಯುತ್ ದರದಲ್ಲಿ ಕಾಣುತ್ತಿರುವ ಅತೀ ದೊಡ್ಡ ದರ ನೆಗತ ಇದಾಗಿದೆ.

ಗೃಹ ಬಳಕೆ ವಿಚಾರಕ್ಕೆ ಬಂದರೆ, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕನಿಷ್ಟ 30 ಪೈಸೆ ಪ್ರತಿ ಯೂನಿಟ್ಗೆ ಹೆಚ್ಚಳ ಮಾಡಲಾಗಿದೆ. ಬಳಕೆಯ ಮಿತಿಯನ್ನು ಇಟ್ಟುಕೊಂಡು ಗರಿಷ್ಠ ಪ್ರತಿ ಯೂನಿಟ್ಗೆ 50 ಪೈಸೆವರೆಗೂ ಬಿಲ್ ಹೆಚ್ಚಳವಾಗಲಿದೆ.

ಕಲ್ಲಿದ್ದಲ ಮೇಲೆ ಕೇಂದ್ರ ಸರಕಾರ ವಿಧಿಸಿರುವ ಸೆಸ್ನಿಂದಾಗಿ ವಿದ್ಯುತ್ ಖರೀದಿಗೆ ಹೆಚ್ಚಿನ ಹಣ ಮೀಸಲಿಡಬೇಕಿದೆ. ಜತೆಗೆ ಶರಾವತಿ ವಿದ್ಯುದಾಗಾರದಲ್ಲಿ ಉತ್ಪಾದನೆ ಕಡಿಮೆಯಾಗಿರುವುದು ಕೂಡ ವಿದ್ಯುತ್ ದರ ಹೆಚ್ಚಳಕ್ಕೆ ಕಾರಣ ಎಂದು ಕೆಇಆರ್ಸಿ ಅಧ್ಯಕ್ಷ ಶಂಕರಲಿಂಗೇಗೌಡ ಪತ್ರಿಕಾಗೋಷ್ಠಿಯಲ್ಲಿ ಸಮರ್ಥನೆ ಮಾಡಿಕೊಂಡರು.

ಏಪ್ರಿಲ್ 1ರಿಂದಲೇ ಜಾರಿಗೆ ಬರಲಿರುವ ಹೊಸ ದರ ಪಟ್ಟಿ ಇಲ್ಲಿದೆ:

ಗ್ರಾಮೀಣ ಪ್ರದೇಶ: 
ಮೊದಲ 30 ಯೂನಿಟ್‍ಗೆ: 2.60 ರೂ (ಈಗಿನ ದರ) 2.90 ರೂ. (ಹೆಚ್ಚಳ)

31 ರಿಂದ 100 ಯೂನಿಟ್‍ವರೆಗೆ: 3.70 ರೂ. – 4.10 ರೂ

101ರಿಂದ 200 ಯೂನಿಟ್‍ವರೆಗೆ: 5.10 ರೂ- 5.60 ರೂ.

200 ಯೂನಿಟ್ ಮೇಲ್ಪಟ್ಟು: 5.90 ರೂ.-  6.40 ರೂ

ನಗರ ಪ್ರದೇಶ:

ಮೊದಲ 30 ಯೂನಿಟ್‍ವರೆಗೆ:  2.70 ರೂ.- 3 ರೂ.

31 ರಿಂದ 100 ಯೂನಿಟ್‍ವರೆಗೆ:  4 ರೂ. – 4.40 ರೂ.

101ರಿಂದ 200 ಯೂನಿಟ್‍ವರೆಗೆ: 5.40 ರೂ.- 5.90 ರೂ

200 ಯೂನಿಟ್ ಮೇಲ್ಪಟ್ಟು: 6.40 ರೂ.- 6.90 ರೂ ಏರಿಕೆ.

ಕೈಗಾರಿಕೆ

ಬೆಸ್ಕಾಂ ವ್ಯಾಪ್ತಿಯ ಎಲ್‍ಟಿ ಕೈಗಾರಿಕೆಗಳ ಬಳಕೆಯಲ್ಲಿ ಸರಾಸರಿ 15ರಿಂದ 30 ಪೈಸೆ ಹೆಚ್ಚಳ.

ಮೊದಲ 500 ಯೂನಿಟ್ ವರೆಗೆ 4.90 ರೂ.ನಿಂದ 5 ರೂ 10 ಪೈಸೆಗೆ ಏರಿಕೆ.

500 ಯೂನಿಟ್‍ಗಿಂತ ಹೆಚ್ಚಿನ ಬಳಕೆಗೆ 6 ರೂ.ಯಿಂದ 6.30 ರೂಪಾಯಿಗೆ ಹೆಚ್ಚಳ

ಬೆಸ್ಕಾಂ ಹೊರತು ಪಡಿಸಿ ಉಳಿದ ಎಸ್ಕಾಂಗಳಿಗೆ

ಮೊದಲ 500 ಯೂನಿಟ್ವರೆಗೆ:  4.75 ರೂ- 4. 95 ರೂ.

501 ರಿಂದ 1000 ಯೂನಿಟ್‍ವರೆಗೆ: 5.55 ರೂ.- 5.85 ರೂ.

1000 ಯೂನಿಟ್ ಮೇಲ್ಪಟ್ಟು: 5.85 ರೂ. – 6.15 ರೂ.ಗೆ ಹೆಚ್ಚಳ.

ವಾಣಿಜ್ಯ ಬಳಕೆ

ಎಲ್‍ಟಿ ವಾಣಿಜ್ಯ ಬಳಕೆದಾರರಿಗೆ:

ಪ್ರತಿ ಯೂನಿಟ್‍ಗೆ 20 ಪೈಸೆ ಹೆಚ್ಚಳ

ಮೊದಲ 50 ಯೂನಿಟ್‍ಗೆ 6.95 ರೂ.ನಿಂದ 7. 15 ರೂಗೆ ಹೆಚ್ಚಳ

50 ಯೂನಿಟ್ ನಂತರದ ಬಳಕೆಗೆ 7.95 ರೂ.ನಿಂದ 8. 15 ರೂ.ಗೆ ಏರಿಕೆ

ಗ್ರಾಮಾಂತರ ಪ್ರದೇಶಗಳಲ್ಲಿನ ವಾಣಿಜ್ಯ ಬಳಕೆಗೆ

ಮೊದಲ 50 ಯೂನಿಟ್‍ಗೆ 6.45 ರೂ. ನಿಂದ  6.65 ರೂ. ಗೆ ಹೆಚ್ಚಳ
50 ಯೂನಿಟ್ ನಂತರ: 7.45 ರೂಪಾಯಿಂದ  7.65 ರೂ.ಗೆ ಏರಿಕೆ

ಕುಡಿಯುವ ನೀರು ಸರಬರಾಜು, ಬೀದಿ ದೀಪ ಬಳಕೆಯ ವಿದ್ಯುತ್‍ಗೂ ಪ್ರತಿ ಯೂನಿಟ್‍ಗೆ 50 ಪೈಸೆ ಹೆಚ್ಚಳ

 

Top