An unconventional News Portal.

ಕೋಲ್ಕತ್ತಾ ಪ್ಲೈ ಓವರ್ ಕುಸಿತ: ರಾಜಕೀಯ ಬೇಳೆ ಬೇಯಿಸುವತ್ತ ಎಲ್ಲರ ಚಿತ್ತ!

ಕೋಲ್ಕತ್ತಾ ಪ್ಲೈ ಓವರ್ ಕುಸಿತ: ರಾಜಕೀಯ ಬೇಳೆ ಬೇಯಿಸುವತ್ತ ಎಲ್ಲರ ಚಿತ್ತ!

ಕೋಲ್ಕತ್ತಾದ ಬುರ್ರಾ ಬಝಾರ್ ಏರಿಯಾದಲ್ಲಿ ಶುಕ್ರವಾರವೂ ಮುಂದುವರಿದ ರಕ್ಷಣಾ ಕಾರ್ಯಚರಣೆ. (ಚಿತ್ರ: ದಿ ವೈರ್)

ಕೋಲ್ಕತ್ತಾದ ಬುರ್ರಾ ಬಝಾರ್ ಏರಿಯಾದಲ್ಲಿ ಶುಕ್ರವಾರವೂ ಮುಂದುವರಿದ ರಕ್ಷಣಾ ಕಾರ್ಯಚರಣೆ. (ಚಿತ್ರ: ದಿ ವೈರ್)

ಕೋಲ್ಕತ್ತಾದ ಬುರ್ರಾ ಬಝಾರ್ ಈಗ ರಾಜಕೀಯ ಚದುರಂಗದಾಟದಲ್ಲಿ ಪ್ರಮುಖ ಪಾತ್ರದಾರಿಯಾಗಿ ಬದಲಾಗಿದೆ.

ಒಟ್ಟು ಆರು ಹಂತಗಳಲ್ಲಿ ನಡೆಯಲಿರುವ ಪಶ್ಚಿಮ ಬಂಗಾಳ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ವಿವೇಕಾನಂದ ರಸ್ತೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಮೇಲ್ಸೇತುವೆ ಕುಸಿತ ಪ್ರಕರಣ ರಾಜಕೀಯ ಪಕ್ಷಗಳಿಗೆ ಹೊಸ ತಂತ್ರ ಹೆಣೆಯಲು ಅನುವು ಮಾಡಿಕೊಡುತ್ತಿದೆ.

ಕಳೆದ 24 ಗಂಟೆಗಳ ಅವಧಿಯಲ್ಲಿ ಮೇಲ್ಸೇತುವೆ ಕುಸಿತ ಪ್ರಕರಣದಲ್ಲಿ ನಡೆದ ಪ್ರಮುಖ ಘಟನಾವಳಿಗಳ ಮೇಲೊಂದು ಪಕ್ಷಿನೋಟಿ ಇಲ್ಲಿದೆ:


 

  1. ಬಿಜೆಪಿ ರಾಜ್ಯಾಧ್ಯಕ್ಷ ಅಮಿತ್ ಶಾ ಕೋಲ್ಕತ್ತಾಗೆ ಬಂದಿಳಿದಿದ್ದಾರೆ. ಮೇಲ್ಸೇತುವೆ ಕುಸಿತ ಪ್ರಕರಣವನ್ನು ಇಟ್ಟುಕೊಂಡು ಅವರು ಬಿಜೆಪಿ ಎಡೆಗೆ ಮತಗಳನ್ನು ಸೆಳೆಯುವ ಕೊನೆಯ ಕ್ಷಣದ ಕಸರತ್ತಿನಲ್ಲಿ ನಿರತರಾಗಿದ್ದಾರೆ. “ಬೆಂಗಾಳದಲ್ಲಿ ಬದಲಾವಣೆ ಇಲ್ಲ; ಬರೀ ಕುಸಿತ ಮತ್ತು ಅವನತಿ” (ಬೆಂಗಾಲ್ ಮೆ ಬದಲಾವ್ ನಹೀ; ಪತನ್ ಹೇ) ಎಂಬುದು ಅವರ ಭಾಷಣದ ಘೋಷವಾಕ್ಯ. 

  2.  ಮೇತ್ಸೇತುವೆ ಕುಸಿತ ಪ್ರಕರಣದಲ್ಲಿ ತನಿಖೆ ಆರಂಭಿಸಿರುವ ಪೊಲೀಸರು ಗುತ್ತಿಗೆ ಪಡೆದ ಕಂಪನಿ ಐವಿಆರ್ಸಿಎಲ್ ಹಿರಿಯ ಅಧಿಕಾರಿಗಳನ್ನು ಬಂಧಿಸಿದ್ದಾರೆ. ಘಟನೆ ಸಂಬಂಧ ಒಟ್ಟು ಆರು ಜನರನ್ನು ಬಂಧಿಸಲಾಗಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

  3. “ಸ್ಥಳದಲ್ಲಿ ಗಾಜುಗಳು ಒಡೆದಿದ್ದು, ಬಾಂಬ್ ಸ್ಫೋಟಗೊಂಡಿರುವ ಸಾಧ್ಯತೆ ಇದೆ.” ಹೀಗಂತ ಕಂಪನಿ ಐವಿಆರ್ಸಿಎಲ್ ಕಾನೂನು ಸಲಹೆಗಾರರು ಹೊಸ ದಾಳ ಉರುಳಿಸಿದ್ದಾರೆ. ಈ ಮೂಲಕ ಕಂಪನಿ ಮೇಲೆ ವ್ಯಕ್ತವಾಗುತ್ತಿರುವ ಸಾರ್ವಜನಿಕ ಆಕ್ರೋಶವನ್ನು ತಿರುಗಿಸುವ ಪ್ರಯತ್ನ ನಡೆದಿದೆ. 

  4. ಹಲವು ವರ್ಷಗಳಿಂದ ಬೃಹತ್ ನಿರ್ಮಾಣ ಕ್ಷೇತ್ರದಲ್ಲಿರುವ ಐವಿಆರ್ಸಿಎಲ್ ಕಂಪನಿಯನ್ನು ಹಿಂದೆಯೇ ‘ಬ್ಲಾಕ್ ಲಿಸ್ಟ್’ಗೆ ಸೇರಿದ್ದಾಗಿ ರೈಲ್ವೆ ಮಂಡಳಿ ತಿಳಿಸಿದೆ. ಇಂಡಿಯನ್ ಎಕ್ಸ್ಪ್ರೆಸ್ ಈ ಕುರಿತು ವರದಿ ಮಾಡಿದ್ದು, ಕಂಪನಿ ಸಮಯಮಿತಿಯಲ್ಲಿ ಕೆಲಸ ಮಾಡದ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆಯ ಹಲವು ಗುತ್ತಿಗೆಗಳನ್ನು ಕಳೆದುಕೊಂಡಿದೆ ಎಂದು ವರದಿ ಮಾಡಿದೆ.

  5. ಈವರೆಗೆ ಮೇಲ್ಸೇತುವೆ ಕುಸಿತದಿಂದಾಗಿ ಸತ್ತವರ ಸಂಖ್ಯೆ 24ಕ್ಕೆ ಮುಟ್ಟಿದೆ. ಇಲ್ಲೀವರೆಗೆ 90ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದ್ದು, ರಕ್ಷಣಾ ಕಾರ್ಯಚರಣೆಯನ್ನು ಸೇನೆ ಮುಂದುರಿಸಿದೆ. ಬದುಕುಳಿದವರ ಸಾಧ್ಯತೆಯನ್ನು ಸೇನಾ ವಕ್ತಾರರು ತಳ್ಳಿಹಾಕಿದ್ದಾರೆ. 

  6. 2009ರಿಂದಲೇ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿತ್ತು. ಈವರೆಗೆ ಸಾಕಷ್ಟು ಬಾರಿ ನಿರ್ಮಾಣ ಮುಕ್ತಾಯದ ಗಡುವನ್ನು ಕಂಪನಿ ಮೀರಿತ್ತು. ಇದೀಗ, ಪಶ್ಚಿಮ ಬಂಗಾಳದ ಸ್ಥಳೀಯ ಸುದ್ದಿ ವಾಹಿನಿಗಳಲ್ಲಿ ಚರ್ಚೆಯ ವಿಷಯವಾಗಿದ್ದು, ಎಡ ಪಕ್ಷ ಸಿಪಿಎಂ ಹಾಗೂ ತೃಣಮೂಲ ಕಾಂಗ್ರೆಸ್ ನಡುವೆ ವಾಗ್ದಾಳಿಗೆ ಕಾರಣವಾಗಿದೆ.

ENTER YOUR E-MAIL

Name
Email *
January 2017
M T W T F S S
« Dec    
 1
2345678
9101112131415
16171819202122
23242526272829
3031  

Top