An unconventional News Portal.

ಉಗ್ರರಿಂದ ಅಪಹರಣಕ್ಕೊಳಗಾಗಿದ್ದ ಪಾದ್ರಿ ಶೀಘ್ರ ಬಿಡುಗಡೆ; ಕರ್ನಾಟಕದಲ್ಲೂ ಸೇವೆ ಸಲ್ಲಿಸಿದ್ದ ಫಾದರ್

ಉಗ್ರರಿಂದ ಅಪಹರಣಕ್ಕೊಳಗಾಗಿದ್ದ ಪಾದ್ರಿ ಶೀಘ್ರ ಬಿಡುಗಡೆ; ಕರ್ನಾಟಕದಲ್ಲೂ ಸೇವೆ ಸಲ್ಲಿಸಿದ್ದ ಫಾದರ್

ಉಗ್ರರಿಂದ ಅಪಹರಣಕ್ಕೊಳಗಾಗಿದ್ದ ಕರ್ನಾಟಕದಲ್ಲೂ ಕಾರ್ಯ ನಿರ್ವಹಿಸಿದ್ದ ಕೇರಳ ಮೂಲದ ಪಾದ್ರಿ ಫಾದರ್ ಟಾಮ್ ಉಳುನ್ನಲಿಲ್ ಶೀಘ್ರ ಬಿಡುಗಡೆಯಾಗುವ ಭರವಸೆ ದೊರೆತಿದೆ.

ಹೀಗಂಥ ಕ್ಯಾಥೋಲಿಕ್ ಸಂಘಟನೆ, ವಿದೇಶಾಂಗ ಸಚಿವರ ಮಾತುಗಳನ್ನು ಉಲ್ಲೇಖಿಸಿ ಹೇಳಿಕೆ ಬಿಡುಗಡೆ ಮಾಡಿದೆ. ಇವರು ಕಳೆದ ತಿಂಗಳು ಯೆಮೆನ್ನಲ್ಲಿ ಬಂಧೂಕುದಾರಿಗಳಿಂದ ಅಪಹರಣಕ್ಕೆ ಒಳಗಾಗಿದ್ದರು. ಆದರೆ ಇದರ ಹೊಣೆಯನ್ನು ಯಾರೂ ಹೊತ್ತುಕೊಂಡಿರಲಿಲ್ಲ.

ಫಾದರ್ ಟಾಮ್ ಉಳುನ್ನಲಿಲ್ ಅವರನ್ನು ಕಳೆದ ತಿಂಗಳು ದಕ್ಷಿಣ ಯೆಮೆನ್ನಿನ ಅಡೆನ್ ಪಟ್ಟದಿಂದ ಬಂಧೂಕುದಾರಿಗಳು ಅಪಹರಿಸಿದ್ದರು. ಉಳುನ್ನಲಿಲ್ ಕಾರ್ಯ್ ನಿರ್ವಹಿಸುತ್ತಿದ್ದ ವೃದ್ಧಾಶ್ರಮದ ಮೇಲೆ ದಾಳಿ ನಡೆಸಿದ ಬಂಧೂಕುದಾರಿಗಳು 15 ಜನರನ್ನು ಕೊಂದು ಉಳುನ್ನಲಿಲ್ ಅವರನ್ನು ವಶಕ್ಕೆ ಪಡೆದುಕೊಂಡಿದ್ದರು. ಈ ಘಟನೆಯನ್ನು ಪೋಪ್ ಫ್ರಾನ್ಸಿಸ್ ಕೂಡಾ ಖಂಡಿಸಿದ್ದರು.

ಕ್ಯಾಥೋಲಿಕ್ ಬಿಷಪ್ಸ್ ಕಾನ್ಫೆರೆನ್ಸ್ ಆಫ್ ಇಂಡಿಯಾ (ಸಿಬಿಸಿಐ) ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಭೇಟಿಯಾದ ನಂತರ ಈ ಹೇಳಿಕೆ ನೀಡಿದೆ. “ಫಾದರ್ ಟಾಮ್ ಸುರಕ್ಷಿವಾಗಿದ್ದಾರೆ ಎಂಬ ಭರವಸೆಯನ್ನು ಅವರು ನೀಡಿದ್ದಾರೆ. ಬಿಡುಗಡೆಗಾಗಿ ಮಾತುಕತೆಗಳು ಚಾಲ್ತಿಯಲ್ಲಿದ್ದು ಶೀಘ್ರ ಬಿಡುಗಡೆಯಾಗಲಿದ್ದಾರೆ” ಎಂದು ಸಿಬಿಸಿಐ ಕಾರ್ಯದರ್ಶಿ ಫಾದರ್ ಜೋಸೆಫ್ ಚಿನೈಯನ್ ತಿಳಿಸಿದ್ದಾರೆ.

ಇನ್ನು ಕಳೆದ ವಾರ ಮಾಧ್ಯಮಗಳು ಪಾದ್ರಿಯನ್ನು ಇಸ್ಲಾಮಿಕ್ ಉಗ್ರರು ಶಿಲುಬೆಗೇರಿಸಿದ್ದಾರೆ ಎನ್ನುವ ಸಂಶಯದ ವರದಿಗಳನ್ನು ಪ್ರಕಟಿಸಿದ್ದವು. ಆದರೆ ಈ ವರದಿಗಳು ಸುಳ್ಳು ಎಂದು ಜೋಸೆಫ್ ತಿಳಿಸಿದ್ದಾರೆ.

ಉಳುನ್ನಲಿಲ್ ಕೇರಳ ಮೂಲದವರಾಗಿದ್ದ ಕೋಲಾರದಲ್ಲಿ 5 ವರ್ಷ ಸೇರಿ ಕರ್ನಾಟಕದಲ್ಲೇ 15 ಕ್ಕೂ ಹೆಚ್ಚು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.

ಅಡನ್ ಪಟ್ಟಣದ ಮೇಲೆ ಶಿಟೆ ಹೌತಿ ಬಂಡುಕೋರರು ಹಿಡಿತ ಸಾಧಿಸಿದ್ದು ಕಳೆದ ವರ್ಷದಿಂದ ಅರಾಜಕತೆಯನ್ನು ಎದುರಿಸುತ್ತಿದೆ. ಈಗಾಗಲೇ ಸುರಕ್ಷತೆಯ ಕಾರಣಕ್ಕೆ ಹೆಚ್ಚಿನ ಎಲ್ಲಾ ದೇಶಗಳು ತಮ್ಮ ನೌಕರರನ್ನು ಯೆಮೆನ್ ನಿಂದ ಹಿಂದಕ್ಕೆ ಕರೆಸಿಕೊಂಡಿದ್ದೆ. ಭಾರತವೂ ಕಳೆದ ವರ್ಷ ಮಿಂಚಿನ ಕಾರ್ಯಾಚರಣೆಯಲ್ಲಿ ಯೆಮೆನ್ ನಲ್ಲಿದ್ದ ದೇಶದ ನಾಗರಿಕರನ್ನು ವಾಪಾಸು ಕರೆಸಿಕೊಂಡಿತ್ತು.

Leave a comment

Top